Asianet Suvarna News Asianet Suvarna News

ಪ್ರವಾಹದಿಂದ ಶೇಖರಣೆಯಾದ ಮರಳು ಮಾರಲು ಅನುಮತಿ

ಪ್ರವಾಹದಿಂದ ಜಮೀನುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮರಳು ಶೇಖರಣೆಯಾಗಿದ್ದು, ಹೀಗೆ ಸಂಗ್ರಹವಾದ ಮರಳನ್ನು ಮಾರಾಟ ಮಾಡಬಹುದ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ ಹೇಳಿದ್ದಾರೆ. ಸರ್ಕಾರಕ್ಕೆ ನಿಗದಿತ ರಾಜಧನ ಪಾವತಿಸಿ ಅನುಮತಿ ಪಡೆಯಬೇಕೆಂದು ಹೇಳಿರುವ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಈ ಸಂಬಂಧ ಆದೇಶ ಹೊರಬಿದ್ದಿದೆ ಎಂದಿದ್ದಾರೆ.

people can sell flood sand deposits says Bagadi Gautham
Author
Bangalore, First Published Sep 10, 2019, 1:17 PM IST

ಚಿಕ್ಕಮಗಳೂರು(ಸೆ.10): ಪ್ರವಾಹದಿಂದ ಜಮೀನುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮರಳು ಶೇಖರಣೆಯಾಗಿದ್ದು, ಹೀಗೆ ಸಂಗ್ರಹವಾದ ಮರಳನ್ನು ಮಾರಾಟ ಮಾಡಬಹುದ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ ಹೇಳಿದ್ದಾರೆ.

ಭೂ ಕುಸಿತ ಹಾಗೂ ನಿರಂತರ ಮಳೆಯಿಂದ ಕೆಲವು ಕಡೆ ಕೃಷಿ ಭೂಮಿಯ ಮೇಲೆ ಬಂದು ನಿಂತಿರುವ ಮರಳನ್ನು ಮಾರಿಕೊಳ್ಳಲು ಆ ಜಮೀನಿನ ಮಾಲೀಕರಿಗೆ ಅನುಮತಿ ನೀಡಲಾಗಿದೆ. ಆದರೆ ಅವರು ಸರ್ಕಾರಕ್ಕೆ ನಿಗದಿತ ರಾಜಧನ ಪಾವತಿಸಿ ಅನುಮತಿ ಪಡೆಯಬೇಕೆಂದು ಹೇಳಿರುವ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಈ ಸಂಬಂಧ ಆದೇಶ ಹೊರಬಿದ್ದಿದೆ ಎಂದರು.

ಸಂತ್ರಸ್ತರ ಪುನರ್ವಸತಿಗೆ 249 ಎಕರೆ ಭೂಮಿ ಗುರುತು

ಚಾರ್ಮಾಡಿ ಘಾಟಿ ರಸ್ತೆಯಲ್ಲಿ ವಾಹನ ಓಡಾಟಕ್ಕೆ ಅನುಮತಿ ನೀಡುವುದು ಇನ್ನಷ್ಟುವಿಳಂಬವಾಗಲಿದೆ. ಮಳೆ ಬರುತ್ತಲೆ ಇರುವುದರಿಂದ ಅಲ್ಲಲ್ಲಿ ಕುಸಿತ ಉಂಟಾಗುತ್ತಿರು ವುದರಿಂದ ವಾಹನ ಓಡಾಟಕ್ಕೆ ಅನುಮತಿ ನೀಡುವುದು ಸದ್ಯಕ್ಕೆ ಸಾಧ್ಯವಿಲ್ಲವೆಂದು ಹೇಳಿದರು.

ಶಿವಮೊಗ್ಗದಲ್ಲಿನ್ನು ಪ್ರತಿದಿನ ವಾಹನ ದಾಖಲೆ ಪರಿಶೀಲನೆ..!

Follow Us:
Download App:
  • android
  • ios