ಸಂತ್ರಸ್ತರ ಪುನರ್ವಸತಿಗೆ 249 ಎಕರೆ ಭೂಮಿ ಗುರುತು
ಪ್ರವಾಹ ಸಂತ್ರಸ್ತರಿಗೆ ಪುನರ್ವಸತಿಗಾಗಿ ಜಿಲ್ಲಾಡಳಿತ 249 ಎಕರೆ ಭೂಮಿಯನ್ನುಗುರುತಿಸಿದೆ. ಮೂಡಿಗೆರೆ ತಾಲೂಕಿನ ವಿವಿಧೆಡೆ ಸಂತ್ರಸ್ತರ ಗುರುತಿಸಿದೆ. ಇನ್ನಷ್ಟುಭೂಮಿ ಗುರುತಿಸುವ ಕೆಲಸ ನಡೆದಿದೆ. ಸಂತ್ರಸ್ತರಿಗೆ ಬಾಡಿಗೆ ಮನೆ ಅಥವಾ ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ಇರಲು ಸೂಚಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹೇಳಿದ್ದಾರೆ.
ಚಿಕ್ಕಮಗಳೂರು(ಸೆ.10): ಈಗಾಗಲೇ ಜಿಲ್ಲಾಡಳಿತ 249 ಎಕರೆ ಭೂಮಿಯನ್ನು ಮೂಡಿಗೆರೆ ತಾಲೂಕಿನ ವಿವಿಧೆಡೆ ಸಂತ್ರಸ್ತರ ಪುನರ್ವಸತಿಗಾಗಿ ಗುರುತಿಸಿದೆ. ಇನ್ನಷ್ಟುಭೂಮಿ ಗುರುತಿಸುವ ಕೆಲಸ ನಡೆದಿದೆ.
ಸಂತ್ರಸ್ತರಿಗೆ ಮನೆ ನಿರ್ಮಿಸಲು 5 ಲಕ್ಷಗಳನ್ನು ನೀಡಲು ಸರ್ಕಾರ ಆದೇಶಿಸಿರುವ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ಬಾಡಿಗೆ ಮನೆ ಅಥವಾ ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ಇರಲು ಸೂಚಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿನ್ನು ಪ್ರತಿದಿನ ವಾಹನ ದಾಖಲೆ ಪರಿಶೀಲನೆ..!
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೇ ಕಡೆ ಎಲ್ಲರಿಗೂ ಪುನರ್ವಸತಿ ಕಲ್ಪಿಸಲು ಅಷ್ಟೊಂದು ಭೂಮಿ ಮಲೆನಾಡು ಭಾಗದಲ್ಲಿ ದೊರಕುವುದು ಅಸಾಧ್ಯ. ಹಾಗಾಗಿ ಹೆಚ್ಚು ಅತಿವೃಷ್ಟಿಯಿಂದ ಹಾನಿ ಸಂಭವಿಸಿರುವ ಮೂಡಿಗೆರೆ ತಾಲೂಕಿನಲ್ಲೆ ಪುನರ್ವಸತಿ ಕಲ್ಪಿಸಲು ಹಲವು ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸ್ಥಳ ಹುಡುಕಾಟ ನಡೆದಿದೆ ಎಂದು ತಿಳಿಸಿದ್ಧಾರೆ.
ಬಾಡಿಗೆ ಮನೆ ಪಡೆದವರಿಗೆ ಮಾಸಿಕ ಹಣ:
ಮಲೆಮನೆ ಮತ್ತು ಮಧುಗುಂಡಿಯಲ್ಲಿ ಪ್ರಾಕೃತಿಕ ವಿಕೋಪ ತೀವ್ರ ಸ್ವರೂಪದಲ್ಲಾಗಿದೆ. ಜೀವನ ನಡೆಸಲಾಗದಷ್ಟುಮನೆ ಮತ್ತು ತೋಟಗಳು ಹಾನಿಗೊಳಗಾಗಿವೆ. ಮಲೆಮನೆ ಗುಡ್ಡ ಮತ್ತೆ ವಿಪರೀತ ಮಳೆಯಾದರೆ ಕುಸಿಯುವ ಆತಂಕ ಇರುವುದರಿಂದ ಅಲ್ಲಿನ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸುವುದು ಜಿಲ್ಲಾಡಳಿತಕ್ಕೆ ಅನಿವಾರ್ಯವಾಗಿದೆ. ಈಗ ಜಿಲ್ಲಾಡಳಿತ ಕಾಳಜಿ ಕೇಂದ್ರದಲ್ಲಿರುವವರನ್ನು ಬಾಡಿಗೆ ಮನೆಗೆ ಅಥವಾ ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ಹೋಗಲು ಕಳುಹಿಸಿ, ಇನ್ನು 10 ತಿಂಗಳೊಳಗೆ ಅವರಿಗೆ ಪುನರ್ವಸತಿ ಸೌಲಭ್ಯ ಕಲ್ಪಿಸುವತ್ತ ಹೆಚ್ಚು ಗಮನಹರಿಸಲಿದೆ. ಆ 10 ತಿಂಗಳ ಕಾಲ ಬಾಡಿಗೆ ಮನೆ ಪಡೆದ ಸಂತ್ರಸ್ತರಿಗೆ ಮಾಸಿಕ 5 ಸಾವಿರ ಬಾಡಿಗೆ ನೀಡಲಿದೆ ಎಂದರು.
ಪ್ರಾಪರ್ಟಿ ಕಾರ್ಡ್ ರದ್ದತಿಗೆ ಮುಂದಾದ ಸರ್ಕಾರ