ಕೋಲಾರ(ನ.16): ಸ್ಥಳೀಯ ಕೇಬಲ್ ಮತ್ತು ಸ್ಯಾಟ್‌ಲೈಟ್ ದೂರದರ್ಶನ ಕಾರ್ಯಕ್ರಮಗಳಲ್ಲಿ ಆಕ್ಷೇಪಾರ್ಹ ಅಂಶಗಳಿದ್ದಲ್ಲಿ ವೀಕ್ಷಕರು ಮುಕ್ತವಾಗಿ ದೂರು ಸಲ್ಲಿಸಲು ಜಿಲ್ಲಾ ದೂರು ನಿರ್ವಹಣಾ ಕೋಶ ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಜೆ. ಮಂಜುನಾಥ್ ತಿಳಿಸಿದ್ದಾರೆ.

ತಮ್ಮ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕೇಬಲ್ ಟಿವಿ ನೆಟ್‌ವರ್ಕ್ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ್ದಾರೆ. ಟಿವಿ ಚಾನೆಲ್‌ಗಳ ಕಾರ್ಯಕ್ರಮಗಳಲ್ಲಿ ಯಾವುದೇ ಆಕ್ಷೇಪಾರ್ಹ ಅಂಶಗಳು ಹಾಗೂ ಸಾಮಾಜಿಕವಾಗಿ ಶಾಂತಿ ಕದಡುವ ಅಂಶಗಳು ಕಂಡುಬಂದಲ್ಲಿ ಅಥವಾ ಕೇಬಲ್ ಸೇವೆಗಳ ಲೋಪದ ಬಗ್ಗೆ ದೂರು ನೀಡಬಹುದಾಗಿದೆ ಎಂದಿದ್ದಾರೆ.

ಪ್ರತಿಭಟನೆ ವೇಳೆ ಕಲ್ಲು ತೂರಿದರೆ 10 ವರ್ಷ ಜೈಲು ಶಿಕ್ಷೆ!

ನಿಗದಿತ ದರ ಮಾತ್ರ ಪಡೆಯಬೇಕು:

ಸ್ಥಳೀಯ ಕೇಬಲ್ ಟಿವಿ ಆಪರೇಟರ್‌ಗಳು ಉಚಿತವಾದ ಚಾನೆಲ್‌ಗಳನ್ನು ಕಡ್ಡಾಯವಾಗಿ ಗ್ರಾಹಕರಿಗೆ ನೀಡಬೇಕು. ಅಲ್ಲದೆ ನಿಗದಿತ ದರಕ್ಕಿಂತ ಹೆಚ್ಚಿಗೆ ವಸೂಲು ಮಾಡಬಾರದು. ತಪ್ಪಿದ್ದಲ್ಲಿ ಗ್ರಾಹಕರು ಜಿಲ್ಲಾ ದೂರು ನಿರ್ವಹಣಾ ಕೋಶಕ್ಕೆ ದೂರು ಸಲ್ಲಿಸಬಹುದಾಗಿದೆ ಎಂದಿದ್ದಾರೆ.

ಪರವಾನಗಿ ನವೀಕರಣ:

ಅಂಚೆ ಇಲಾಖೆಯಲ್ಲಿ ಸ್ಥಳೀಯ ಕೇಬಲ್ ಆಪ ರೇಟರ್‌ಗಳು ವಿವಿಧ ಷರತ್ತುಗಳಿಗೊಳಪಟ್ಟು ತಮ್ಮ ವಾರ್ಷಿಕ ಪರವಾನಗಿಯನ್ನು ನವೀಕರಿಸಿಕೊಳ್ಳಬೇಕು. ಪ್ರಸ್ತುತ ನವೀಕರಣ ಹೊಂದದೆ ಕಾರ್ಯನಿರ್ವಹಿಸುತ್ತಿರುವ ಆಪರೇಟರ್‌ಗಳ ಮಾಹಿತಿಯನ್ನು ಒದಗಿಸುವಂತೆ ಅಂಚೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ವಾರ್ತಾಧಿಕಾರಿಗಳಾದ ಪಲ್ಲವಿ ಹೊನ್ನಾಪುರ ಅವರು ಮಾತನಾಡಿದರು. ಸಭೆಯಲ್ಲಿ ಸಮಿತಿಯ ಸದಸ್ಯರು ಹಾಗೂ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಜಾಹ್ನವಿ, ಸದಸ್ಯರಾದ ಮಮತಾರೆಡ್ಡಿ, ರಾಜೇಂದ್ರ, ನಾಗರಾಜ ವಿ, ಎಂ.ಎಸ್ ಭಾಗ್ಯಲಕ್ಷ್ಮೀ ಅವರು ಉಪಸ್ಥಿತರಿದ್ದರು.

ಮೊದಲು ಟಿಕ್‌ಟಾಕ್, ಮತ್ತೆ ಬೇರೆ ಟಾಕ್! ಆಂಟಿಯ ಕರಾಮತ್ತಿಗೆ ಯುವಕ ಬರ್ಬಾದ್!