ಮಂಡ್ಯ: ನೆಲಮಾಕನಹಳ್ಳಿ ಬಳಿ ಕಾಡಾನೆಗಳ ಹಿಂಡು ಪತ್ತೆ, ಸಾರ್ವಜನಿಕರಲ್ಲಿ ಆತಂಕ

ಮದ್ದೂರು - ಮಳವಳ್ಳಿ ಹೆದ್ದಾರಿಗೆ ಹೊಂದಿಕೊಂಡಿರುವ ನೆಲಮಾಕನಹಳ್ಳಿ ಹಲವೆಡೆ ಕಾಡಾನೆಗಳ ಹಿಂಡು ದಾಳಿ ನಡೆಸಿ ಬೆಳೆಗಳನ್ನು ನಾಶ ಮಾಡಿವೆ. ಗುರುವಾರ ರಾತ್ರಿ ಗುಳಘಟ್ಟ ಗ್ರಾಮದ ಸುತ್ತಮುತ್ತ ಕಾಣಿಸಿಕೊಂಡ 3 ಮರಿ ಆನೆ ಸೇರಿದಂತೆ 11 ಆನೆಗಳ ಹಿಂಡು ಶುಕ್ರವಾರ ಬೆಳಗಿನ ಜಾವ ಮದ್ದೂರು - ಮಳವಳ್ಳಿ ಹೆದ್ದಾರಿಯ ಪಕ್ಕದಲ್ಲಿ ಕಾವೇರಿ ನೀರಾವರಿ ನಿಗಮದ ಕಚೇರಿ ಹಿಂಭಾಗದಲ್ಲಿ ಸುಮಾರು 1 ಎಕರೆ ಪ್ರದೇಶದ ಕಬ್ಬಿನ ಗದ್ದೆಯನ್ನು ತುಳಿದು ನಾಶ ಮಾಡಿವೆ.

People Anxiety For Wild Elephants at Malavalli in Mandya grg

ಮಳವಳ್ಳಿ(ಜು.22):  ತಾಲೂಕಿನ ನೆಲಮಾಕನಹಳ್ಳಿ ಬಳಿ ಶುಕ್ರವಾರ ಬೆಳಗಿನ ಜಾವ 11 ಕಾಡಾನೆಗಳ ಹಿಂಡೊಂದು ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಮಾಡಿದ್ದವು.

ಮದ್ದೂರು - ಮಳವಳ್ಳಿ ಹೆದ್ದಾರಿಗೆ ಹೊಂದಿಕೊಂಡಿರುವ ನೆಲಮಾಕನಹಳ್ಳಿ ಹಲವೆಡೆ ಕಾಡಾನೆಗಳ ಹಿಂಡು ದಾಳಿ ನಡೆಸಿ ಬೆಳೆಗಳನ್ನು ನಾಶ ಮಾಡಿವೆ. ಗುರುವಾರ ರಾತ್ರಿ ಗುಳಘಟ್ಟ ಗ್ರಾಮದ ಸುತ್ತಮುತ್ತ ಕಾಣಿಸಿಕೊಂಡ 3 ಮರಿ ಆನೆ ಸೇರಿದಂತೆ 11 ಆನೆಗಳ ಹಿಂಡು ಶುಕ್ರವಾರ ಬೆಳಗಿನ ಜಾವ ಮದ್ದೂರು - ಮಳವಳ್ಳಿ ಹೆದ್ದಾರಿಯ ಪಕ್ಕದಲ್ಲಿ ಕಾವೇರಿ ನೀರಾವರಿ ನಿಗಮದ ಕಚೇರಿ ಹಿಂಭಾಗದಲ್ಲಿ ಸುಮಾರು 1 ಎಕರೆ ಪ್ರದೇಶದ ಕಬ್ಬಿನ ಗದ್ದೆಯನ್ನು ತುಳಿದು ನಾಶ ಮಾಡಿವೆ.

ಶಾಸಕರು ತಾಳ್ಮೆಯಿಂದ ಕೆಲಸ ಮಾಡಬೇಕು: ಸಚಿವ ಚಲುವರಾಯಸ್ವಾಮಿ

ಅಲ್ಲದೇ ಬೆಳೆದು ನಿಂತಿದ್ದ ಟೊಮೆಟೋ, ಕಬ್ಬು, ತೆಂಗು ಬೆಳೆಗಳಿಗೆ ಹಾನಿ ಉಂಟಾಗಿದೆ. ಆನೆಗಳ ದಾಳಿಯಿಂದ ಆತಂಕಗೊಂಡ ಜನರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದರು. ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಎನ್‌.ಸಿ.ಮಹದೇವ್‌, ಅರಣ್ಯಾಧಿಕಾರಿ ಉಮೇಶ್‌ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಆನೆಗಳನ್ನು ಓಡಿಸುವ ಕಾರ್ಯಕ್ಕೆ ಮುಂದಾಗಿದದಾರೆ. ಆನೆಗಳ ಹಿಂಡಿನಲ್ಲಿ 3 ಮರಿ ಆನೆಗಳ ಇರುವುದರಿಂದ ಕಾರ್ಯಾಚರಣೆಗೆ ತೊಡಕಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಮದ್ದೂರಿನಲ್ಲಿ ಕಳೆದ ಎರಡು ದಿನಗಳಿಂದ ಕಾಣಿಸಿಕೊಂಡಿದ್ದ ಕಾಡಾನೆಗಳಿಂದ ರೈತರು ಜಮೀನುಗಳಲ್ಲಿ ಬೆಳೆದಿದ್ದ ಕಬ್ಬು, ತರಕಾರಿ ನಾಶವಾಗಿದ್ದವು. ಈಗ ಮಳವಳ್ಳಿ ತಾಲೂಕಿನಲ್ಲಿಯೂ ಕಾಡಾನೆಗಳ ಹಾವಳಿಯಿಂದ ರೈತರ ಬೆಳೆಗಳು ಹಾನಿಯಾಗಿವೆ. ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

Latest Videos
Follow Us:
Download App:
  • android
  • ios