ಮಂಗಳೂರು(ಏ.11): ಮೂಲ್ಕಿಯ ಕಿನ್ನಿಗೋಳಿ ಸಮೀಪದ ಗುತ್ತಕಾಡಿನ ನಿವಾಸಿ ಲಾರೆನ್ಸ್ ಡಿ ಸೋಜ (45) ರವರು ತಮ್ಮ ಜಮೀನಿನಲ್ಲಿ ಎಲ್ಲಾ ರೀತಿಯ ತರಕಾರಿಗಳನ್ನು ಬೆಳೆದು ಫಸಲಿಗೆ ಉತ್ತಮ ಬೆಲೆ ಸಿಗದೇ ಪರದಾಡುತ್ತಿದ್ದು ಇದೀಗ ಲಾಕ್ ಡೌನ್ ಬಳಿಕ ಗ್ರಾಹಕರು ಅವರ ಮನೆ ಬಾಗಿಲಿಗೆ ತರಕಾರಿ ಖರೀದಿಸಲು ಬರುತ್ತಿದ್ದು ಲಾಕ್ ಡೌನ್ ನಿಂದಾಗಿ ಅವರು ಬೆಳೆಸಿರುವ ತರಕಾರಿ,ಹಣ್ಣು ಹಂಪುಗಳಿಗೆ ಉತ್ತಮ ಬೆಲೆ ಸಿಗುತ್ತಿದೆ.

ಕಿನ್ನಿಗೋಳಿ ಸಮೀಪದ ಗುತ್ತಕಾಡಿನಲ್ಲಿ ವಾಸವಾಗಿರುವ ಲಾರೆನ್ಸ್ ಡಿ ಸೋಜ ರವರು ಉನ್ನತ ಶಿಕ್ಷಣವನ್ನು ಪಡೆದು  ಕಂಪ್ಯೂಟರ್ ನಲ್ಲಿ ಹೆಚ್ಚಿನ ತರಬೇತಿಯನ್ನು ಪಡೆದು ಹಲವು ವರ್ಷಗಳ ಕಾಲ ಕಂಪ್ಯೂಟರ್ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದರು. ಕಿನ್ನಿಗೋಳಿಯಲ್ಲಿ ಸ್ಯೆಬರ್ ಸೆಂಟರ್ ಅನ್ನು  ಆರಂಭಿಸಿದ್ದು ವಿಡಿಯೋ ಗ್ರಾಫಿಕ್ಸ್ ನಲ್ಲಿ ನೂತನ ತಂತ್ರಜ್ಞಾನದ ಬಗ್ಗೆ ತರಬೇತಿಯನ್ನು ಪಡೆದಿದ್ದ ಅವರು ಮದುವೆ ಸಮಾರಂಭ ಮತ್ತಿತರ ಕಾರ್ಯಗಳ ವಿಡಿಯೋ ಛಾಯಗ್ರಹಣ ಜೊತೆಗೆ ಕಿರು ಚಿತ್ರವನ್ನು ಕೂಡ ಮಾಡುತ್ತಿದ್ದರು.

ಲಾಕ್‌ಡೌನ್‌: ರೈತರಿಗೆ ಓಡಾಡಲು ಹಸಿರು ಪಾಸ್

ಉದ್ಯೋಗ ಮತ್ತು ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು ಮನೆಯಲ್ಲಿ  ಹಿರಿಯರಾದ ತಂದೆ ಮತ್ತು ತಾಯಿ ಇದ್ದ ಕಾರಣ ವಿದೇಶದಿಂದ ಬಂದ ಉತ್ತಮ ಉದ್ಯೋಗವನ್ನು ಕೂಡ ತಿರಸ್ಕರಿಸಿದ್ದರು.ತಂದೆ ಮತ್ತು ತಾಯಿ ತೀರಿ ಹೋದ ಬಳಿಕ ಒಬ್ಬಂಟಿಗರಾದ ಅವರು ವಿಡಿಯೋ ಚಿತ್ರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.  ಕೃಷಿಕ ಕುಟುಂಬದಿಂದ ಬಂದಿದ್ದ ಅವರು ಎಳವೆಯಿಂದಲೆ ತಂದೆ ಮತ್ತು ತಾಯಿಯೊಂದಿಗೆ  ಗದ್ದೆ ಕೆಲಸ,ತರಕಾರಿ ಬೆಳೆಸುವುದು ಸೇರಿದಂತೆ ಕೃಷಿ ಚಟುವಡಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಸುಮಾರು 14 ಎಕ್ರೆ ಜಾಗವನ್ನು ಹೊಂದಿದ್ದು ತಂದೆ,ತಾಯಿ ತೀರಿ ಹೋದ ಬಳಿಕ ಒಬ್ಬಂಟಿಗರಾದ ಅವರು ಕೃಷಿಯಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡಿದ್ದಾರೆ.14 ಎಕ್ರೆ ಜಾಗದಲ್ಲಿ 5 ಎಕ್ರೆ ಕಾಡು ಇದ್ದು ಅದನ್ನು ಹಾಗೇಯೇ ಉಳಿಸಿಕೊಂಡಿದ್ದು  ಸುಮಾರು 7 ಎಕ್ರೆ ಜಾಗದಲ್ಲಿ  ತರಕಾರಿ,ಹಣ್ಣು ಹಂಪಲುಗಳನ್ನು ಬೆಳೆಸುತ್ತಿದ್ದಾರೆ.ವರ್ಷವಿಡಿ ನೀರಿನ ಬಳಕೆ ಬಗ್ಗೆ ಜಾಗದ ಸಮೀಪವಿರುವ ನೀರು ಹರಿಯುವ ತೋಡಿಗೆ  ಕಟ್ಟ ಹಾಕಿದ್ದು ಹಾಗೂ ಗದ್ದೆಯಲ್ಲಿ ನೀರು ನಿಲ್ಲುವ ಹಾಗೇ ಮಾಡಿದ್ದು ಜೊತೆಗೆ ಬಾವಿ ಮತ್ತು ಬೋರ್ ವೆಲ್ ಗಳು ಇರುವುದರಿಂದ ನೀರಿನ ಸಮಸ್ಯೆ ಉದ್ಬವಿಸಿಲ್ಲ.

ವೈದ್ಯ ಸಿಬ್ಬಂದಿಗೆ ಡಬಲ್‌ ವೇತನ ನೀಡಲು ಸರ್ಕಾರ ನಿರ್ಧಾರ!

ಕಳೆದ ಎರಡು ವರ್ಷದಿಂದ ತರಕಾರಿ ಮತ್ತು ಹಣ್ಣು ಹಂಪಲು ಬೆಳೆಸಲು ಆರಂಭಿಸಿದ್ದು ಸೌತ್ ಆಫ್ರಿಕನ್ ಬಸಲೆ,ಹೀರೆ ಕಾಯಿ,ತೊಂಡೆ ಕಾಯಿ,ಹಾಗಲಕಾಯಿ,ಕುಂಬಳ,ನುಗ್ಗೆ ಕಾಯಿ,ಬೆಂಡೆ,ಮುಳ್ಳು ಸೌತೆ,ಅಲಸಂಡೆ ಸೇರಿದಂತೆ ಹೆಚ್ಚಿನ ತರಕಾರಿಗಳನ್ನು ಪ್ರತ್ಯೇಕ ಜಾಗದಲ್ಲಿ ಬೆಳೆಸುತ್ತಿದ್ದಾರೆ.ಜೊತೆಗೆ ಮಾವಿನ ಹಣ್ಣು,ಹಲಸಿನ ಹಣ್ಣು,ಕಿತ್ತಾಳೆ,ರಂಬೋಟಸ್.ಬಟರ್ ಫ್ರುಟ್,ಲಕ್ಷ್ಮಣ ಫಲ,ಹನುಮಫಲ,ಸೀತಾಫಲ,ಬಾಳೆ,ಪೇರಳೆ,ನೇರಳೆ,ಜಾಂಬೂ ಮತ್ತಿತರ ಹಣ್ಣು ಹಂಪಲುಗಳು ಬೆಳೆಯುತ್ತಿದೆ.ಕಳೆದ ವರ್ಷ ದ್ರಾಕ್ಷಿ ಮಾಡಿದ್ದು  ಆದರೆ ಸಫಲವಾಗಲಿಲ್ಲ.

ಸೇಬುವಿನ ಗಿಡಗಳಿದ್ದು ಆದರೆ ಇಲ್ಲಿಯ ವಾತಾವರಣಕ್ಕೆ ಆಗುತ್ತಿಲ್ಲ.ಕೃಷಿಯ ಜೊತೆಗೆ ಹ್ಯೆನುಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ  ಅವರು ಇಬ್ಬರು ಸಹಾಯಕರ ಮೂಲಕ ಕರ್ತವ್ಯ  ನಿರ್ವಹಿಸುತ್ತಿದ್ದಾರೆ.  ಕಳೆದ ಎರಡು ವರ್ಷಗಳಿಂದ ಬೆಳೆದ ತರಕಾರಿ ಮತ್ತು ಫಲ ವಸ್ತುಗಳನ್ನು ಕಿನ್ನಿಗೋಳಿಯ ಅಂಗಡಗಳಿಗೆ ನೀಡುತ್ತಿದ್ದು ಆದರೆ ಸರಿಯಾದ ಬೆಲೆ ಸಿಗುತ್ತಿರಲಿಲ್ಲ.ಇದೀಗ ಲಾಕ್ ಡೌನ್ ಆದ ಬಳಿಕ ಅಂಗಡಿಗಳು ಬಂದ್ ಆಗಿದ್ದರಿಂದ ಬೆಳೆದ  ಬೆಲೆಯು ಹಾಳಾಗುತ್ತದೆಯೆಂಬ ಚಿಂತೆಯಲ್ಲಿದ್ದ ಅವರಿಗೆ ಅದೃಷ್ತ ಖುಲಾಯಿಸಿದೆ.ಲಾಕ್ ಡೌನ್ ಬಳಿಕ ಕಿನ್ನಿಗೋಳಿ ಪೇಟೆಯಲ್ಲಿ ಅಂಗಡಿಗಳು ಬಂದ್ ಇರುವ ಕಾರಣ ಜನರು ತರಕಾರಿಗಳಿಗೆ ಪರದಾಡುತ್ತಿದ್ದು ಲಾರೆನ್ಸ್ ರವರ ಪರಿಚಯದವರು ಲಾರೆನ್ಸ್ ಬಗ್ಗೆ ತಿಳಿಸಿದ ಬಳಿಕ ಗ್ರಾಹಕರು ಅವರ ಮನೆಗೆ ಬೆಳಗ್ಗೆ ಬಂದು ತರಕಾರಿ ಪಡೆದುಕೊಮಡು ಹೋಗುತ್ತಿದ್ದಾರೆ.

ಔಷಧಿ ಸಿಗದೆ ನರಳಾಟ, ಟಿಕ್‌ಟಾಕ್‌ನಲ್ಲಿ ಮನವಿ: ಮಾನವೀಯತೆ ಮೆರೆದ ಸಿಎಂ !

ಹೆಚ್ಚು ಲಾಭವನ್ನು ಪಡೆಯದ ಅವರ ತರಕಾರಿಗಳು ಬೆಳಗ್ಗಿನ ಅವ„ಯಲ್ಲಿ ಖಾಲಿಯಾಗುತ್ತಿದೆ. ಮನೆಯಲ್ಲಿ ಪ್ರಾಯದ ತಂದೆ ತಾಯಿ ಇದ್ದ ಕಾರಣ ಬಂದು ಒಳ್ಳೆಯ ಉದ್ಯೋಗವನ್ನು ತಿರಸ್ಕರಿಸಿ ಊರಲ್ಲಿ ಉದ್ಯೊಗ ಮತ್ತು ಉದ್ಯಮವನ್ನು ಆರಂಭಿಸಿದೆ.ಹಿರಿಯರು ಮಾಡಿಕೊಂಡು ಬರುತ್ತಿದ್ದ ತರಕಾರಿ ಬೆಳೆಯನ್ನು ಮುಂದುವರಿಸುವ ಜೊತೆಗೆ  ಬೇರೆ ಬೇರೆ ರೀತಿಯ ಹಣ್ಣು ಹಂಪಲುಗಳನ್ನು ಬೆಳೆಸಿದ್ದಾರೆ.

ಮನೆಯಲ್ಲಿ ತಯಾರಾದ ಸಾವಯವ ಗೊಬ್ಬರವನ್ನು ಉಪಯೋಗಿಸುತ್ತಿದ್ದೇನೆ.ತೋಟದಲ್ಲಿ ಕಾರ್ಯ ನಿರತರಾಗಿರುವುದಿಂದ ಸಂತೋಷದಿಂದಿದ್ದೇನೆ,ಕೃಷಿಯಲ್ಲಿ ಹೆಚ್ಚಿನ ಲಾಭವಿದ್ದು ಜೊತೆಗೆ ಉತ್ತಮ ಪರಿಸರ,ಸ್ವಚ್ಚ ಗಾಳಿಯನ್ನು ಪಡೆಯಲು ಸಾಧ್ಯವಿದ್ದು ಯುವಕರು ದೂರದ ಊರಿಗೆ ಉದ್ಯೋಗಕ್ಕೆ ಹೋಗುವ ಬದಲಿಗೆ ತಮ್ಮ ಜಾಗzಲ್ಲಿ ಕೃಷಿ,ಹ್ಯೆನುಗಾರಿಕೆ ನಡೆಸಬೇಕು.

-ಪ್ರಕಾಶ್ ಸುವರ್ಣ