ಅಯೋಧ್ಯೆಯಲ್ಲಿ ಮುಂದುವರಿದ ರಾಮಮಂದಿರ ನಿರ್ಮಾಣ ಕಾರ್ಯ   ರಾಮಮಂದಿರ ಜಾಗ ಖರೀದಿಯಲ್ಲಿ ಅವ್ಯವಹಾರದ ಆರೋಪ  ಈ ಸಂಬಂಧ ಟ್ರಸ್ಟ್ ನ ಕಾರ್ಯದರ್ಶಿಗಳು ,ಖಜಾಂಜಿ ಮತ್ತು  ಸದಸ್ಯರ ನಡುವೆ ಚರ್ಚೆ

 ಉಡುಪಿ (ಜು.01): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಮುಂದುವರೆಯುತ್ತಿದೆ. ಇದೇ ವೇಳೆ ರಾಮಮಂದಿರ ಜಾಗ ಖರೀದಿಯಲ್ಲಿ ಅವ್ಯವಹಾರದ ಆರೋಪ ಕೇಳಿ ಬಂದಿದೆ ಎಂದು ರಾಮಂದಿರ ಟ್ರಸ್ಟ್ ನ ವಿಶ್ವಸ್ಥ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀ ತಿಳಿಸಿದ್ದಾರೆ. 

ಉಡುಪಿಯಲ್ಲಿಂದು ಮಾತನಾಡಿದ ಪೇಜಾವರ ಸ್ವಾಮೀಜಿ, ರಾಮಮಂದಿರ ಟ್ರಸ್ಟ್ ಈ ಬಗ್ಗೆ ಗಮನ ಹರಿಸಿದ್ದು, ಈ ಸಂಬಂಧ ಟ್ರಸ್ಟ್ ನ ಕಾರ್ಯದರ್ಶಿಗಳು ,ಖಜಾಂಜಿ ಮತ್ತು ಸದಸ್ಯರ ನಡುವೆ ಚರ್ಚೆ ನಡೆದಿದೆ. ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ ಎಂದರು.

ಉಪ​ಗ್ರ​ಹ ಚಿತ್ರ​ದಲ್ಲಿ ಅಯೋಧ್ಯೆ ರಾಮಮಂದಿರ ನಿರ್ಮಾಣ ಸೆರೆ!

ಎರಡು ದಿನಗಳಲ್ಲಿ ಎಲ್ಲವನ್ನೂ ಸಮಾಜದ ಮುಂದೆ ಇಡಲಿದ್ದಾರೆ. ಟ್ರಸ್ಟ್ ನಿಂದ ಯಾವುದೇ ಅವ್ಯವಹಾರವೂ ನಡೆದಿಲ್ಲ. ಈ ಬಗ್ಗೆ ಪರಿಪೂರ್ಣ ವಿವರಗಳನ್ನು‌ ಟ್ರಸ್ಟ್ ಜನರ ಮುಂದೆ ತೆರೆದಿಡಲಿದೆ ಎಂದು ಸ್ವಾಮೀಜಿ ತಿಳಿಸಿದರು.

ಅಧ್ಯಾತ್ಮ, ಪ್ರವಾಸ ಸ್ಮಾರ್ಟ್‌ ಸಿಟಿ ಸ್ಪರ್ಶ, ಮೋದಿ ಕಲ್ಪನೆಯ ಅಯೋಧ್ಯಾ ರಾಮಮಂದಿರವಿದು..!

ಈಗಾಗಲೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಆರೋಪದ ಬಗ್ಗೆ ಸ್ವಾಮೀಜಿ ಸ್ಪಷ್ಟನೆ ನೀಡಿದರು.