ಉಪ​ಗ್ರ​ಹ ಚಿತ್ರ​ದಲ್ಲಿ ಅಯೋಧ್ಯೆ ರಾಮಮಂದಿರ ನಿರ್ಮಾಣ ಸೆರೆ!

* ಶ್ರೀ ರಾಮ ಜನ್ಮ​ಭೂ​ಮಿ​ಯಾದ ಅಯೋ​ಧ್ಯೆ​ಯಲ್ಲಿ ನಿರ್ಮಾ​ಣ​ವಾ​ಗು​ತ್ತಿ​ರುವ ರಾಮ​ಮಂದಿರ

* ಉಪ​ಗ್ರ​ಹ ಚಿತ್ರ​ದಲ್ಲಿ ಅಯೋಧ್ಯೆ ರಾಮಮಂದಿರ ನಿರ್ಮಾಣ ಸೆರೆ

* ಭೂಮಿಯನ್ನು ಅಗೆ​ಯು​ವುದು ಮತ್ತು ಅವ​ಶೇ​ಷ​ಗ​ಳನ್ನು ಹೊರ​ತೆ​ಗೆ​ಯು​ತ್ತಿ​ರುವ ಚಿತ್ರ​ಗಳು ಉಪ​ಗ್ರ​ಹ​ಗ​ಳಲ್ಲಿ ದಾಖಲು

Ram Temple construction work in Ayodhya moves at fast pace See satellite pics pod

ಅಯೋ​ಧ್ಯೆ(ಜು.01): ಉತ್ತರ ಪ್ರದೇ​ಶದ ಶ್ರೀ ರಾಮ ಜನ್ಮ​ಭೂ​ಮಿ​ಯಾದ ಅಯೋ​ಧ್ಯೆ​ಯಲ್ಲಿ ನಿರ್ಮಾ​ಣ​ವಾ​ಗು​ತ್ತಿ​ರುವ ರಾಮ​ಮಂದಿರದ ಕಾಮ​ಗಾರಿಯು ಉಪ​ಗ್ರಹ ಚಿತ್ರ​ಗ​ಳಲ್ಲಿ ಸೆರೆ​ಯಾ​ಗಿದೆ.

ಭವ್ಯ ರಾಮ​ಮಂದಿರ ನಿರ್ಮಾ​ಣ​ಕ್ಕಾಗಿ ಅಯೋ​ಧ್ಯೆ​ಯಲ್ಲಿ ಭೂಮಿಯ ಅಗೆ​ಯು​ವು​ದು, ಇಂಜಿ​ನಿ​ಯ​ರ್‌​ಗಳು ಮತ್ತು ಕಾರ್ಮಿ​ಕರ ನೆರ​ವಿ​ನಿಂದ ಕಾಂಕ್ರೀಟ್‌ ಪದ​ರ​ಗಳ ರಚನೆ ಕಾರ್ಯವು ಭರ​ದಿಂದ ಸಾಗಿದ್ದು, ಭೂಮಿಯನ್ನು ಅಗೆ​ಯು​ವುದು ಮತ್ತು ಅವ​ಶೇ​ಷ​ಗ​ಳನ್ನು ಹೊರ​ತೆ​ಗೆ​ಯು​ತ್ತಿ​ರುವ ಚಿತ್ರ​ಗಳು ಉಪ​ಗ್ರ​ಹ​ಗ​ಳಲ್ಲಿ ದಾಖಲಾಗಿವೆ.

ಒಟ್ಟಾರೆ 1.2 ಲಕ್ಷ ಚದ​ರ​ಡಿಯ ವ್ಯಾಪ್ತಿ​ಯಲ್ಲಿ 40-45 ಕಾಂಕ್ರೀಟ್‌ ಲೇಯ​ರ್‌​ಗ​ಳನ್ನು ನಿರ್ಮಿ​ಸ​ಲಾ​ಗು​ತ್ತದೆ. ಈಗಾ​ಗಲೇ 4 ಲೇಯ​ರ್‌​ಗಳು ಪೂರ್ಣ​ವಾ​ಗಿವೆ ಎಂದು ದೇಗುಲ ನಿರ್ಮಾಣ ಹೊಣೆ ಹೊತ್ತಿ​ರುವ ಶ್ರೀ ರಾಮಜನ್ಮ​ಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ತಿಳಿ​ಸಿದೆ.

Latest Videos
Follow Us:
Download App:
  • android
  • ios