ಕಸ ಸಂಗ್ರಹಣೆಗೆ ಟ್ರಾಕ್ಟರ್ ಓಡಿಸುವ ಪಿಡಿಒ!
ಕೋವಿಡ್ ಆತಂಕದ ನಡುವೆ ಪಟ್ಟಣದಲ್ಲಿ ಸಂಗ್ರಹವಾಗುತ್ತಿರುವ ತ್ಯಾಜವನ್ನು ವಿಲೇವಾರಿ ಮಾಡಲು, ಪೌರ ಕಾರ್ಮಿಕರಿಗೆ ಸ್ಫೂರ್ತಿ ತುಂಬಲು ಸ್ವತಃ ಟ್ರ್ಯಾಕ್ಟರ್ ಓಡಿಸುತ್ತಿರುವ ಸಿದ್ದಾಪುರ ಗ್ರಾಮ ಪಂಚಾಯಿತಿ ಪಿಡಿಒ ವಿಶ್ವನಾಥ್ ಕಾರ್ಯವೈಖರಿ ಬಗ್ಗೆ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಸಿದ್ದಾಪುರ(ಜು.25): ಕೋವಿಡ್ ಆತಂಕದ ನಡುವೆ ಪಟ್ಟಣದಲ್ಲಿ ಸಂಗ್ರಹವಾಗುತ್ತಿರುವ ತ್ಯಾಜವನ್ನು ವಿಲೇವಾರಿ ಮಾಡಲು, ಪೌರ ಕಾರ್ಮಿಕರಿಗೆ ಸ್ಫೂರ್ತಿ ತುಂಬಲು ಸ್ವತಃ ಟ್ರ್ಯಾಕ್ಟರ್ ಓಡಿಸುತ್ತಿರುವ ಸಿದ್ದಾಪುರ ಗ್ರಾಮ ಪಂಚಾಯಿತಿ ಪಿಡಿಒ ವಿಶ್ವನಾಥ್ ಕಾರ್ಯವೈಖರಿ ಬಗ್ಗೆ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಕಸ ಹಾಕಲು ಸೂಕ್ತ ಜಾಗವಿಲ್ಲದೆ ಪ್ರತಿನಿತ್ಯ ಉತ್ಪತ್ತಿಯಾಗುವ ಕಸವನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಕಾರಣ ಪಟ್ಟಣದ ಎಲ್ಲೆಂದರಲ್ಲಿ ತ್ಯಾಜ್ಯ ಕೊಳೆತು ನಾರುತ್ತಾ ಸದಾ ಸುದ್ದಿಯಲ್ಲಿದ್ದ ಸಿದ್ದಾಪುರ ಗ್ರಾಮ ಪಂಚಾಯಿತಿಗೆ ಪಿಡಿಒ ವಿಶ್ವನಾಥ್ ಆಗಮಿಸಿದ ನಂತರ ಪಟ್ಟಣದ ಮೂಲೆ ಮೂಲೆಗಳಲ್ಲಿ ಕಸ ರಾಶಿ ಬೀಳುತ್ತಿದ್ದ ಕಸಗಳಿಗೆ ಬ್ರೇಕ್ ಬಿದ್ದಿದೆ.
ಒಂದೇ ಕಂಟೈನರಲ್ಲಿ 59 ಎಮ್ಮೆ, ಕೋಣ ಸಾಗಾಟ: ನಾಲ್ವರು ಅರೆಸ್ಟ್
ಪ್ರತಿನಿತ್ಯ ಪಟ್ಟಣದಲ್ಲಿ ಉತ್ಪತ್ತಿಯಾಗುವ ಕಸಗಳನ್ನು ಸಂಗ್ರಹಿಸಿ ಪಿರಿಯಾಪಟ್ಟಣದ ತಮ್ಮ ಜಮೀನಿಗೆ ಸಾಗಿಸಿ ಸಾವಯವ ಗೊಬ್ಬರವಾಗಿ ಪರಿವರ್ತಿಸುತ್ತಿದ್ದಾರೆ. ಸ್ವತಃ ಕೃಷಿಕರೂ ಆಗಿರುವ ಪಿಡಿಒ, ಕಸದಿಂದ ತಯಾರಾದ ಗೊಬ್ಬರವನ್ನು ರೈತರು ತಮ್ಮ ಜಮೀನಿನಲ್ಲಿ ಬಳಸಿ ಅತಿ ಹೆಚ್ಚು ಇಳುವರಿ ಪಡೆಯುತ್ತಿದ್ದಾರೆ.
ಪತ್ರಿನಿತ್ಯ ಬೆಳಗ್ಗೆ ಸಿದ್ದಾಪುರಕ್ಕೆ ಆಗಮಿಸುವ ಇವರು, ಪೌರ ಕಾರ್ಮಿಕರೊಂದಿಗೆ ಕೂಡಿ ಪ್ರತಿದಿನ ಕಸವನ್ನು ಸಂಗ್ರಹಿಸಿ, ಅದನ್ನು ಒಣ ಕಸ ಮತ್ತು ಹಸಿ ಕಸವಾಗಿ ಬೇರ್ಪಡಿಸುತ್ತಾರೆ. ಹಸಿ ಕಸವನ್ನು ಗೊಬ್ಬರವಾಗಿ ಹಾಗೂ ಒಣ ಕಸವನ್ನು ಮಾರುಕಟ್ಟೆಯ ಒಂದು ರೂಮಿನಲ್ಲಿ ಸಂಗ್ರಹಿಸಿ ನಂತರ ಬಹಿರಂಗ ಹರಾಜನ್ನು ಮಾಡುವ ಮೂಲಕ ಗ್ರಾಮ ಪಂಚಾಯತಿಯೂ ಅದಾಯವನ್ನು ಗಳಿಸಲು ಶ್ರಮಿಸುತ್ತಿದ್ದಾರೆ.
ಕೊರೋನಾ ಚಿಕಿತ್ಸೆ ನಡುವೆಯೂ ಆಸ್ಪತ್ರೆಯಲ್ಲೇ ಪೂಜೆನಿರತ ಪುತ್ತಿಗೆ ಶ್ರೀ
ಕೊರೋನಾದಿಂದ ಇಡೀ ಪ್ರಪಂಚವೇ ಬಳಲುತ್ತಿರುವ ಸಮದರ್ಭ ಪೌರ ಕಾರ್ಮಿಕರೊಂದಿಗೆ ಅಧಿಕಾರಿಯೊಬ್ಬರು ಕಸ ವಿಲೇವಾರಿ ಮಾಡಲು ಟ್ಯಾಕ್ಟರ್ ಚಲಾಯಿಸಿ ಅವರಿಗೆ ಧೈರ್ಯ ತುಂಬುತ್ತ ಕಸ ಸಂಗ್ರಹಣೆ ಮಾಡುತ್ತಿರುವುದು ಶ್ಲಾಘನೀಯ. ಅವರನ್ನು ನಾನು ಸಮಸ್ತ ಜನತೆಯ ಪರವಾಗಿ ಅಭಿನಂದಿಸುತ್ತೇನೆ ಎಂದು ಅಂಬೇಡ್ಕರ್ ನಗರ ನಿವಾಸಿ ಅಯ್ಯ ತಿಳಿಸಿದ್ದಾರೆ.
ನಮ್ಮ ಪೌರ ಕಾರ್ಮಿಕರು ಕೊರೋನಾ ಹಿನ್ನೆಲೆಯಲ್ಲಿ ವಿವಿಧ ಭಾಗಗಳಿಗೆ ತೆರಳಿ ಕಸ ಸಂಗ್ರಹಿಸಲು ಹಿಂದೇಟು ಹಾಕುತ್ತಿದ್ದಾರೆ. ಅವರಿಗೆ ಮಾನಸಿಕ ಧೈರ್ಯ ತುಂಬುವ ಸಲುವಾಗಿ ಮತ್ತು ಪಟ್ಟಣದಲ್ಲಿ ಶುಚಿತ್ವ ಕಾಪಾಡುವ ಉದ್ದೇಶದಿಂದ ಬೆಳಗ್ಗೆ ಸುಮಾರು 2-3 ಗಂಟೆಗಳ ಕಾಲ ಅವರೊಂದಿಗೆ ಇದ್ದು, ಅವರಿಗೆ ಮಾನಸಿಕ ಸ್ಥೈರ್ಯ ತುಂಬಲು ನಾನೇ ಟ್ಯಾಕ್ಟರ್ ಚಲಾಯಿಸುತ್ತಿದ್ದೆನೆ ಎಂದು ಸಿದ್ದಾಪುರ ಗ್ರಾಮ ಪಂಚಾಯಿತಿಯ ಪಿಡಿಒ ವಿಶ್ವನಾಥ್ ತಿಳಿಸಿದ್ದಾರೆ.
-ಸುಬ್ರಮಣಿ