ಕೊರೋನಾ ಚಿಕಿತ್ಸೆ ನಡುವೆಯೂ ಆಸ್ಪತ್ರೆಯಲ್ಲೇ ಪೂಜೆನಿರತ ಪುತ್ತಿಗೆ ಶ್ರೀ
ಕೊರೋನಾ ಸೋಂಕಿನಿಂದ ಉಡುಪಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿರುವ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಚಿಕಿತ್ಸೆಯ ನಡುವೆಯೂ ಪ್ರತಿದಿನದ ಪೂಜೆ, ಜಪಾನುಷ್ಠಾನಗಳನ್ನು ಆಸ್ಪತ್ರೆಯಲ್ಲೇ ನಡೆಸುತ್ತಿದ್ದಾರೆ. ಅದಕ್ಕಾಗಿ ವಾರ್ಡ್‌ನಲ್ಲೇ ವ್ಯವಸ್ಥೆ ಮಾಡಲಾಗಿದೆ.
ಉಡುಪಿ(ಜು.25): ಕೊರೋನಾ ಸೋಂಕಿನಿಂದ ಉಡುಪಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿರುವ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಚಿಕಿತ್ಸೆಯ ನಡುವೆಯೂ ಪ್ರತಿದಿನದ ಪೂಜೆ, ಜಪಾನುಷ್ಠಾನಗಳನ್ನು ಆಸ್ಪತ್ರೆಯಲ್ಲೇ ನಡೆಸುತ್ತಿದ್ದಾರೆ. ಅದಕ್ಕಾಗಿ ವಾರ್ಡ್‌ನಲ್ಲೇ ವ್ಯವಸ್ಥೆ ಮಾಡಲಾಗಿದೆ.
ಕೊರೋನಾ ಸೋಂಕಿನಿಂದ ಉಡುಪಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿರುವ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಚಿಕಿತ್ಸೆಯ ನಡುವೆಯೂ ಪ್ರತಿದಿನದ ಪೂಜೆ, ಜಪಾನುಷ್ಠಾನಗಳನ್ನು ಆಸ್ಪತ್ರೆಯಲ್ಲೇ ನಡೆಸುತ್ತಿದ್ದಾರೆ. ಅದಕ್ಕಾಗಿ ವಾರ್ಡ್‌ನಲ್ಲೇ ವ್ಯವಸ್ಥೆ ಮಾಡಲಾಗಿದೆ.
ಸ್ಯಾಂಡಲ್‌ವುಡ್‌ನಲ್ಲಿ ಸ್ವಜನಪಕ್ಷಪಾತದ ಅಪಸ್ವರ; ನಟ JK ಆರೋಪ!
ಸ್ವಾಮೀಜಿ ಬೆಂಗಳೂರಿನಿಂದ ಬಂದು ಪುತ್ತಿಗೆ ಗ್ರಾಮದಲ್ಲಿರುವ ತಮ್ಮ ಮೂಲಮಠದಲ್ಲಿ ಚಾತುರ್ಮಾಸ ವ್ರತವನ್ನು ಕೈಗೊಂಡಿದ್ದರು. ನಂತರ ಅವರಿಗೆ ಲಘುವಾದ ಜ್ವರ ಕಾಣಿಸಿಕೊಂಡಿತ್ತು. ಪರೀಕ್ಷೆಗೊಳಪಡಿಸಿದಾಗ ಕೊರೋನಾ ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪೇಜಾವರ ಶ್ರೀಗಳನ್ನು ಮುದ್ದಾಡಿದ ಪುಟ್ಟ ಕರು
ಪ್ರತಿದಿನ ಅವರ ಶಿಷ್ಯರೊಬ್ಬರು ಪಿಪಿಇ ಕಿಟ್ ಧರಿಸಿ ಸ್ವಾಮೀಜಿ ಅವರ ಪೂಜೆಗೆ ಸಹಾಯ ಮಾಡುತ್ತಿದ್ದಾರೆ. ಶ್ರೀಗಳು ಲವಲವಿಕೆಯಿಂದಿದ್ದು, ಆರೋಗ್ಯವಂತರಾಗಿದ್ದಾರೆ. ಆದರೆ ಶ್ರೀಗಳು ಒಂದು ವಾರ ಆಸ್ಪತ್ರೆಯಲ್ಲೇ ಇರಬೇಕಾಗುತ್ತದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.