ಬೆಳಗಾವಿ: ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟ ಪಿಡಿಒ
ಲೋಕಾಯುಕ್ತ ಅಧಿಕಾರಿಗಳು ರಾಯಬಾಗ ಪಟ್ಟಣದ ಸತ್ಯಗೌಡ ಭೈರಪ್ಪ ಕಿತ್ತೂರೆ ಇವರ ಮನೆಯಲ್ಲಿ ದೂರುದಾರ ಅಪ್ಪಾಸಾಬ ಕೆಂಗನ್ನವರ ಬಳಿಯಿಂದ ಲಂಚ ಸ್ವೀಕರಿಸುವ ವೇಳೆ ದಾಳಿ ನಡೆಸಿ, ಬಂಧಿಸಿದ್ದಾರೆ.
ಬೆಳಗಾವಿ(ಫೆ.04): ಗ್ರಾಮ ಪಂಚಾಯತಿಯಲ್ಲಿ ಇ-ಸ್ವತ್ತು ನೀಡಲು ಲಂಚಕ್ಕೆ ಬೇಡಿಕೆ ಇಟ್ಟು, ಹಣ ಪಡೆಯುತ್ತಿದ್ದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.
ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಪಂ ಪಿಡಿಒ ಸದಾಶಿವ ಜಯಪ್ಪ ಕರಗಾರ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ. ನಾಗರಾಳ ಗ್ರಾಮದ ಗಂಗವ್ವ ಹಣಮಂತ ಕೆಂಗನ್ನವರ ಹೆಸರಿನಲ್ಲಿರುವ ಮನೆಗೆ ಸಂಬಂಧಿಸಿದ ಇ-ಸ್ವತ್ತು ಆಸ್ತಿ ನಮೂನೆ 9 ಮತ್ತು 11 ನೀಡಲು ₹ 5 ಸಾವಿರ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದ. ಈ ಹಿನ್ನೆಲೆಯಲ್ಲಿ ಗಂಗವ್ವ ಕೆಂಗನ್ನವರ ಪುತ್ರ ಅಪ್ಪಾಸಾಬ (ಅಪ್ಪಣ್ಣಾ ಹಣಮಂತ ಕೆಂಗನ್ನವರ) ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಲೋಕಾಯುಕ್ತ ಅಧಿಕಾರಿಗಳು ರಾಯಬಾಗ ಪಟ್ಟಣದ ಸತ್ಯಗೌಡ ಭೈರಪ್ಪ ಕಿತ್ತೂರೆ ಇವರ ಮನೆಯಲ್ಲಿ ದೂರುದಾರ ಅಪ್ಪಾಸಾಬ ಕೆಂಗನ್ನವರ ಬಳಿಯಿಂದ ಲಂಚ ಸ್ವೀಕರಿಸುವ ವೇಳೆ ದಾಳಿ ನಡೆಸಿ, ಬಂಧಿಸಿದ್ದಾರೆ.
ಬೆಳಗಾವಿ: ಫೆ.5 ಕ್ಕೆ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶ
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಹನಮಂತರಾಯ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಎ.ಆರ್.ಕಲಾದಗಿ, ಆರ್.ಎಲ್.ಧರ್ಮಟ್ಟಿ, ನಿರಂಜನ ಪಾಟೀಲ, ಸಿಬ್ಬಂದಿ ಎಲ್.ಎಸ್.ಹೊಸಮನಿ, ವಿಜಯ ಬಿರಾಜನವರ, ರವಿ ಮಾವರಕರ, ಆರ್.ಬಿ.ಗೋಕಾಕ, ಸಂತೋಷ ಬೆಡಗ, ಗಿರೀಶ ಪಾಟೀಲ ಕಾರ್ಯಾಚರಣೆಯಲ್ಲಿ ಇದ್ದರು.