Asianet Suvarna News Asianet Suvarna News

ನಿವೃತ್ತ ನೌಕರಗೆ 1 ರು. ಪರಿಹಾರ ಪಾವತಿಸಲು IAS ಅಧಿಕಾರಿಗೆ ಕೋರ್ಟ್ ಸೂಚನೆ

ನಿವೃತ್ತ ನೌಕರರೋರ್ವರಿಗೆ ನಷ್ಟದ ಪರಿಹಾರ ಪ್ರಕರಣ ಸಂಬಂಧ 60 ದಿನದ ಒಳಗೆ 1 ಪಾವತಿ ಮಾಡಬೇಕು ಎಂದು IAS ಅಧಿಕಾರಿಗೆ ಶೀವಮೊಗ್ಗ ಸಿವಿಲ್  ಮತ್ತು ಜೆಎಮ್ಎಫ್ ಸಿ ನ್ಯಾಯಾಲಯ ತೀರ್ಪು ನೀಡಿದೆ. 

Pay 1 rupee for compensation court ordered to IAS officer in Shivamogga
Author
Bengaluru, First Published Jan 11, 2020, 1:26 PM IST
  • Facebook
  • Twitter
  • Whatsapp

ಶಿವಮೊಗ್ಗ [ಜ.11]: ಐಎಎಸ್ ಅಧಿಕಾರಿ ವಿ.ಪೊನ್ನುರಾಜ್  ಮೊಕದ್ದಮೆ ಪ್ರಕರಣವೊಂದರಲ್ಲಿ 1 ರು. ಪರಿಹಾರವನ್ನು ದೂರುದಾರರಿಗೆ  60 ದಿನದೊಳಗೆ ಪಾವತಿಸುವಂತೆ ಶಿವಮೊಗ್ಗದ 3 ನೇ ಹೆಚ್ಚುವರಿ ಸಿವಿಲ್  ಮತ್ತು ಜೆಎಮ್ಎಫ್ ಸಿ ನ್ಯಾಯಾಲಯ ತೀರ್ಪು ನೀಡಿದೆ. 

"

ಕೆಪಿಟಿಸಿಎಲ್ ಎಂಡಿಯಾಗಿರುವ ಹಾಗೂ ಈ  ಹಿಂದೆ ಶಿವಮೊಗ್ಗ ಜಿಲ್ಲಾಧಿಕಾರಿಯಾಗಿದ್ದ ವಿ.ಪೊನ್ನುರಾಜ್ ವಿರುದ್ಧ ಕಂದಾಯ ಇಲಾಖೆಯ ನಿವೃತ್ತ ನೌಕರ ಶಿವಪ್ಪ ಶಿವಮೊಗ್ಗದ ಒಂದನೇ ಸಿವಿಲ್ ನ್ಯಾಯಾಲಯ ಕಿರಿಯ ವಿಭಾಗದಲ್ಲಿ 1 ರೂ. ಮಾನನಷ್ಟ ಮೊಕದ್ದಮೆ  ದಾಖಲಿಸಿದ್ದರು.

ವಕೀಲ ಎ.ಎಂ.ಮಹದೇವಪ್ಪ ಎಂಬುವವರು ನಿವೃತ್ತ ನೌಕರ ಕೆ.ಶಿವಪ್ಪ ವಿರುದ್ಧ 2011 ರ ಎಪ್ರಿಲ್ 5 ರಂದು  ಅವರು ನಿವೃತ್ತರಾದರೂ ಕಂದಾಯ ಇಲಾಖೆಯ ಸಾರ್ವಜನಿಕ ವ್ಯವಹಾರದಲ್ಲಿ ಹಸ್ತಕ್ಷೇಪ ನಡೆಸುತ್ತಾರೆಂದು ಡಿಸಿ ಪೊನ್ನುರಾಜ್ ಗೆ  ಸಲ್ಲಿಸಿದ್ದರು. 

ಈ ಬಗ್ಗೆ ಅಂದಿನ ಜಿಲ್ಲಾಧಿಕಾರಿಯಾಗಿದ್ದ ಪೊನ್ನುರಾಜ್ ಯಾವುದೇ ನೋಟೀಸ್ ನೀಡದೆ, ವಿಚಾರಣೆ ನಡೆಸದೇ ಶಿವಪ್ಪ ಯಾವುದೇ ಇಲಾಖೆಗಳಿಗೆ ಹೋಗದಂತೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದಲ್ಲದೆ ಆಯಾ ಇಲಾಖೆಗಳ ನೋಟೀಸ್ ಬೋರ್ಡಿನಲ್ಲೂ ಪ್ರಕಟಿಸಲಾಗಿತ್ತು . 

ಅರಣ್ಯ ಕುಸಿತ: ರಾಜ್ಯದಲ್ಲಿ ಶಿವಮೊಗ್ಗ ನಂ.1!

ಇದನ್ನು ಪ್ರಶ್ನಿಸಿ ಉಚ್ಛ ನ್ಯಾಯಾಲಯದಲ್ಲಿ ಶಿವಪ್ಪ ರಿಟ್ ಸಲ್ಲಿಸುತ್ತಿದ್ದಂತೆ ಪ್ರತಿವಾದ ಮಾಡುವ ಬದಲಾಗಿ ಪೊನ್ನುರಾಜ್ ಸುತ್ತೋಲೆ ಬೇಷರತ್ತಾಗಿ ಹಿಂಪಡೆದಿದ್ದರು. ಪೊನ್ನುರಾಜ್ ಸುತ್ತೋಲೆ ಹೊರಡಿಸಿದ ಪರಿಣಾಮ ತಮಗೆ ಸುಮಾರು 25 ಲಕ್ಷ ರೂ.ನಷ್ಟ ಸಂಭವಿಸಿದ್ದು ತಾವು ಮನನೊಂದಿರುವ ಹಿನ್ನಲೆಯಲ್ಲಿ 1 ರು. ನಷ್ಟದ ಮೊಕದ್ದಮೆ ದಾಖಲಿಸಿದ್ದರು.

ಓಮ್ನಿಯಲ್ಲಿ ಕೊಳೆತ ಮಹಿಳೆ ಮೃತದೇಹ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ !..

ಈ ಸಂಬಂಧ ಇದೀಗ ವಿಚಾರಣೆ ನಡೆಸಿದ ಶಿವಮೊಗ್ಗದ 3 ನೇ  ಹೆಚ್ಚುವರಿ ಸಿವಿಲ್  ಮತ್ತು ಜೆಎಮ್ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶ ಹೆಚ್ ಸತೀಶ್,  ಪೋನ್ನುರಾಜ್ ದೂರುದಾರ ಶಿವಪ್ಪಗೆ 60 ದಿನದೊಳಗೆ 1 ರು. ಪಾವತಿಸುವಂತೆ ಆದೇಶಿಸಿ ತೀರ್ಪು ನೀಡಿದ್ದಾರೆ. 

Follow Us:
Download App:
  • android
  • ios