ರೇಣುಕಾಸ್ವಾಮಿ ಹತ್ಯೆಯಲ್ಲಿ ಪವಿತ್ರಾ ಗೌಡ ಪಾತ್ರವಿಲ್ಲ: ಹೈಕೋರ್ಟ್‌ಲ್ಲಿ ವಾದ

ಪತಿಯನ್ನೇ ಕೊಂದ ಪತ್ನಿಗೂ ಮಹಿಳೆ ಎಂಬ ಕಾರಣಕ್ಕೆ ಜಾಮೀನು ಸಿಕ್ಕಿದೆ. ಪವಿತ್ರಾ ಗೌಡಗೆ 9ನೇ ತರಗತಿ ಓದುತ್ತಿರುವ ಪುತ್ರಿ ಇದ್ದಾಳೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಆಕೆಗೆ ಜಾಮೀನು ನೀಡಬೇಕು ಎಂದು ಕೋರಿದರು ಸಮಯಾವಕಾಶದ ಕೊರತೆ ಹಿನ್ನೆಲೆಯಲ್ಲಿ ನ್ಯಾಯಪೀಠವು ಅರ್ಜಿಗಳ ವಿಚಾರಣೆಯನ್ನು ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ. 

Pavithra Gowda had no role in Renukaswamy's Killed Says advocate Tommy Sebastian grg

ಬೆಂಗಳೂರು(ಡಿ.04):  ಚಿತ್ರದುರ್ಗದ ರೇಣುಕಾಸ್ವಾಮಿ ಅಪಹರಣ ಮತ್ತು ಕೊಲೆಯಲ್ಲಿ ಪವಿತ್ರಾ ಗೌಡ ಪಾತ್ರವಿಲ್ಲ. ಕೊಲೆಗೆ ಅವರಿಂದ ಪಿತೂರಿ ನಡೆದಿಲ್ಲ. ಪಟ್ಟಣಗೆರೆ ಶೆಡ್‌ಗೆ ಕರೆತಂದಾಗ ದರ್ಶನ್ ಜೊತೆ ತೆರಳಿದ್ದ ಆಕೆ ರೇಣುಕಾಸ್ವಾಮಿಗೆ ಚಪ್ಪಲಿಯಲ್ಲಿ ಹೊಡೆದು ಅಲ್ಲಿಂದ ತೆರಳಿದ್ದಾರೆ. ನಂತರ ಏನಾಗಿದೆ ಎಂಬುದೂ ಅವರಿಗೆ ಗೊತ್ತಿಲ್ಲ. ಆಕೆ ಮಹಿಳೆಯಾಗಿದ್ದು, ಜಾಮೀನು ನೀಡಬೇಕು ಎಂದು ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ ಮಂಗಳವಾರ ಹೈಕೋರ್ಟ್‌ಗೆ ಕೋರಿದರು. 

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್, ಪವಿತ್ರಾಗೌಡ, ಆರ್.ನಾಗರಾಜು, ಎಂ. ಲಕ್ಷ್ಮಣ್, ಅನು ಕುಮಾರ್ ಮತ್ತು ಜಗದೀಶ್ ಸಲ್ಲಿಸಿರುವ ಜಾಮೀನು ಅರ್ಜಿಗಳನ್ನು ನ್ಯಾ ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ಪೀಠ ಮಂಗಳವಾರ ವಿಚಾರಣೆಯನ್ನು ನಡೆಸಿತು. 

10 ದಿನದಲ್ಲಿ ದರ್ಶನ್ ಬೇಲ್ ಅವಧಿ ಮುಕ್ತಾಯ; ಆತಂಕದಲ್ಲಿ ಸರ್ಜರಿಗೆ ಓಕೆ ಅಂದುಬಿಟ್ರಾ?

ಪವಿತ್ರಾ ಗೌಡ ಪರ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್, ರೇಣುಕಾಸ್ವಾಮಿ ಕೊಲೆಗೆ ಪವಿತ್ರಾ ಯಾವುದೇ ಪಿತೂರಿ ನಡೆಸಿಲ್ಲ. ಪಟ್ಟಣಗೆರೆಯ ಜಯಣ್ಣ ಶೆಡ್‌ಗೆ ಕರೆತಂದಾಗ ದರ್ಶನ್ ಜೊತೆ ತೆರಳಿದ್ದ ಪವಿತ್ರಾಗೌಡ ರೇಣುಕಾಸ್ವಾಮಿ ಕಪಾಳಕ್ಕೆ ಕೇವಲ ಒಂದು ಬಾರಿ ಹೊಡೆದಿದ್ದಾರೆ ಎಂದು ವಿವರಿಸಿದರು. 

ಅಲ್ಲದೆ, ಕೊಲೆಮಾಡುವ ಉದ್ದೇಶದಿಂದ ಬಲವಂತವಾಗಿ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಅಹಹರಣ ಮಾಡಿ ತರಲಾಗಿದೆ ಎಂಬುದನ್ನು ದೃಢಪಡಿಸುವ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ. ನಟ ಚಿಕ್ಕಣ್ಣ, ನವೀನ್ ಕುಮಾರ್, ಯಶಸ್ ಸೂರ್ಯ ಅವರ ಹೇಳಿಕೆಗಳನ್ನು ಪರಿಶೀಲಿಸಿದರೆ ಸೋನಿ ಬೂಕ್ ರೆಸ್ಟೋರೆಂಟ್ ನಲ್ಲಿ ರೇಣುಕಾಸ್ವಾಮಿ ಕೊಲೆ ಮಾಡುವ ಸಂಬಂಧ ಯಾವುದೇ ಮಾತುಕತೆ ನಡೆದಿಲ್ಲ ಎಂಬುದು ಸ್ಪಷ್ಟ. ಆದ್ದರಿಂದ ಕೊಲೆ ಮಾಡುವ ಷಡ್ಯಂತ್ರದಿಂದ ರೇಣುಕಾಸ್ವಾಮಿಯನ್ನು ಅಪಹರಿಸಿಲ್ಲ. 

ಪತಿಯನ್ನೇ ಕೊಂದ ಪತ್ನಿಗೂ ಮಹಿಳೆ ಎಂಬ ಕಾರಣಕ್ಕೆ ಜಾಮೀನು ಸಿಕ್ಕಿದೆ. ಪವಿತ್ರಾ ಗೌಡಗೆ 9ನೇ ತರಗತಿ ಓದುತ್ತಿರುವ ಪುತ್ರಿ ಇದ್ದಾಳೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಆಕೆಗೆ ಜಾಮೀನು ನೀಡಬೇಕು ಎಂದು ಕೋರಿದರು ಸಮಯಾವಕಾಶದ ಕೊರತೆ ಹಿನ್ನೆಲೆಯಲ್ಲಿ ನ್ಯಾಯಪೀಠವು ಅರ್ಜಿಗಳ ವಿಚಾರಣೆಯನ್ನು ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.

ಆಸ್ಪತ್ರೆ ಮಂಚದ ಮೇಲೆ ಮಲಗಿರೋ ದರ್ಶನ್ ಫೋಟೋ ಅಸಲಿಯತ್ತೇನು? ಮುಂದೇನು?

ಹೈಕೋರ್ಟ್‌ ಎದುರೇ ನಟನಾ ಸಾಮರ್ಥ್ಯ ತೋರಿದ ಕಿಲ್ಲಿಂಗ್‌ ಸ್ಟಾರ್‌, ಸರ್ಜರಿ ಬೇಡವೆಂದ ನಟ ದರ್ಶನ್‌!

ಬೆಂಗಳೂರು: ಹೈಕೋರ್ಟ್‌ನಿಂದ ಯಾವ ಕಾರಣಕ್ಕಾಗಿ ದರ್ಶನ್‌ ತೂಗುದೀಪ ಮಧ್ಯಂತರ ಜಾಮೀನು ಪಡೆದುಕೊಂಡಿದ್ದರೂ ಆ ಉದ್ದೇಶ ಈವರೆಗೂ ಈಡೇರಿಕೆಯಾಗಿಲ್ಲ. ಬೆನ್ನುನೋವಿನ ಸಮಸ್ಯೆಯಿಂದ ನರಳುತ್ತಿದ್ದು, ತಕ್ಷಣವೇ ಸರ್ಜರಿಗೆ ಒಳಗಾಗಬೇಕಿದೆ ಎಂದು ಕೋರ್ಟ್‌ಗೆ ತಿಳಿಸಿದ್ದರು.ಸರ್ಜರಿ ಆಗದೇ ಇದ್ದಲ್ಲಿ ಲಕ್ವ ಹೊಡೆಯುವ ಸಾಧ್ಯತೆ ಇದೆ ಎಂದೂ ಕೋರ್ಟ್‌ಗೆ ತಿಳಿಸಿದ್ದರು. ಆದರೆ, ಮಧ್ಯಂತರ ಜಾಮೀನ ಸಿಕ್ಕಿ ಒಂದು ತಿಂಗಳಾದರೂ ದರ್ಶನ್‌ ಸರ್ಜರಿಗೆ ಒಳಗಾಗಿಲ್ಲ. ಈ ನಡುವೆ ದರ್ಶನ್‌ ಪರ ವಕೀಲರು, ನಟನ ದಹದ ರಕ್ತದೊತ್ತಡ ಸಮಸ್ಯೆಯಿಂದಾಗಿ ಸರ್ಜರಿ ಈವರೆಗೂ ಸಾಧ್ಯವಾಗಿಲ್ಲ ಎಂದು ಹೇಳಿದ್ದರು. ಈ ಕುರಿತಾಗಿ ದರ್ಶನ್‌ ಅವರ ವೈದ್ಯಕೀಯ ದಾಖಲೆಗಳನ್ನು ನೋಡಿದ ಕೋರ್ಟ್‌, ಸರ್ಜರಿಗೆ ಯಾವುದೇ ಸಮಸ್ಯೆ ಆಗುವ ಆರೋಗ್ಯ ಸಮಸ್ಯೆ ಇದ್ದಂತೆ ಕಾಣುತ್ತಿಲ್ಲ ಎಂದು ಮೌಖಿಕವಾಗಿ ಹೇಳಿದೆ.

ಈ ನಡುವೆ ದರ್ಶನ್‌ ತಮಗೆ ಬೆನ್ನು ನೋವಿನ ಸರ್ಜರಿ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಅದರೊಂದಿಗೆ ಅವರು ಹೈಕೋರ್ಟ್‌ಗೆ ಯಾಮಾರಿಸಿ ಮಧ್ಯಂತರ ಜಾಮೀನು ಪಡೆದುಕೊಂಡಿದ್ದಾರೆ ಎನ್ನುವುದು ಸತ್ಯವಾದಂತಾಗಿದೆ. ಸರ್ಜರಿಗೆ ಒಪ್ಪಿಗೆ ಸೂಚಿಸದ ದರ್ಶನ್‌, ತಮಗೆ ಫಿಸಿಯೋಥೆರಪಿಯನ್ನೇ ಮುಂದುವರಿಸಿ ಎಂದು ಕೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.

Latest Videos
Follow Us:
Download App:
  • android
  • ios