ಮೈಸೂರು-ಬೆಂಗಳೂರು ಹೆದ್ದಾರಿಯ ಎರಡೂ ಕಡೆ ಪೆಟ್ರೋಲಿಂಗ್‌: ಎಡಿಜಿಪಿ ಅಲೋಕ್‌ ಕುಮಾರ್‌

ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ನಡೆಯುತ್ತಿರುವ ಅಪರಾಧಗಳನ್ನು ತಡೆಯಲು ಎರಡೂ ಕಡೆ ಹೈವೇ ಪೆಟ್ರೋಲಿಂಗ್‌ ವಾಹನಗಳು ಸಂಚರಿಸುವಂತೆ ವ್ಯವಸ್ಥೆ ಮಾಡಬೇಕು ಎಂದು ಎಡಿಜಿಪಿ ಅಲೋಕ್‌ಕುಮಾರ್‌ ಜಿಲ್ಲಾ ಪೊಲೀಸ್‌ ಅಧೀಕ್ಷಕ ಎನ್‌.ಯತೀಶ್‌ ಅವರಿಗೆ ಸೂಚನೆ ನೀಡಿದರು.

Patrolling both sides of Mysuru Bengaluru Highway Says ADGP Alok Kumar gvd

ಮಂಡ್ಯ (ಜು.01): ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ನಡೆಯುತ್ತಿರುವ ಅಪರಾಧಗಳನ್ನು ತಡೆಯಲು ಎರಡೂ ಕಡೆ ಹೈವೇ ಪೆಟ್ರೋಲಿಂಗ್‌ ವಾಹನಗಳು ಸಂಚರಿಸುವಂತೆ ವ್ಯವಸ್ಥೆ ಮಾಡಬೇಕು ಎಂದು ಎಡಿಜಿಪಿ ಅಲೋಕ್‌ಕುಮಾರ್‌ ಜಿಲ್ಲಾ ಪೊಲೀಸ್‌ ಅಧೀಕ್ಷಕ ಎನ್‌.ಯತೀಶ್‌ ಅವರಿಗೆ ಸೂಚನೆ ನೀಡಿದರು. ಹೆದ್ದಾರಿ ಪರಿಶೀಲನೆ ನಡೆಸುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಹೈವೇ ಪೆಟ್ರೋಲ್‌ನವರು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಹೆದ್ದಾರಿಯಲ್ಲಿ ಕೆಟ್ಟುನಿಂತ ವಾಹನಗಳ ಕಡೆ ಹೆಚ್ಚು ಗಮನಹರಿಸಬೇಕು. ಅವುಗಳಿಗೆ ಕಡ್ಡಾಯವಾಗಿ ರೇಡಿಯಂ ಸ್ಟಿಕ್ಕರ್‌ ಹಾಕಿರಬೇಕು. 

ಸ್ಟಿಕ್ಕರ್‌ಗಳಿಲ್ಲದ ಕಾರಣ ವಾಹನ ನಿಂತಿರುವುದು ಗೊತ್ತಾಗದೆ ಅಪಘಾತಗಳು ಸಂಭವಿಸಿ ಬಹಳಷ್ಟುಜನ ಸುಮ್ಮನೆ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದರು. ಟೋಲ್‌ ಬಳಿ ವಾಹನಗಳನ್ನು ತಪಾಸಣೆ ಮಾಡುತ್ತೇವೆ. ಯಾವ ವಾಹನಗಳಿಗೆ ಸ್ಟಿಕ್ಕರ್‌ ಇರುವುದಿಲ್ಲವೋ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರು ಪೊಲೀಸ್‌ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ನುಡಿದರು.

ರಾಜ್ಯದ ವಿವಿಧೆಡೆ ಲೋಕಾಯುಕ್ತ ದಾಳಿ: ಎಂಟಿಬಿ ನಾಗರಾಜ್‌ ಶ್ಲಾಘನೆ

ಸ್ಪೀಡ್‌ ಗನ್‌ ಅಳವಡಿಕೆ: ಹೆದ್ದಾರಿಯ ಅಲ್ಲಲ್ಲಿ ಸ್ಪೀಡ್‌ ಗನ್‌ಗಳನ್ನು ಇನ್ನೊಂದು ವಾರದೊಳಗೆ ಅಳವಡಿಸಲಾಗುವುದು. ಅದರ ಮೂಲಕ ಯಾವ ವಾಹನ ಎಷ್ಟುವೇಗದಲ್ಲಿ ಬರುತ್ತಿದೆ ಎನ್ನುವುದನ್ನು ಬಹುದೂರದಿಂದಲೇ ಗುರುತಿಸಬಹುದಾಗಿರುತ್ತದೆ. ನಿಗದಿತ ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ಬರುತ್ತಿದ್ದರೆ ಆ ವಾಹನಗಳ ಫೋಟೋ ತೆಗೆದು ಕಳುಹಿಸುತ್ತದೆ. ಅಂತಹ ವಾಹನ ಚಾಲಕರ ಮೇಲೆ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಹೆದ್ದಾರಿಯಲ್ಲಿ ಪ್ರಯಾಣಿಸುವ ವಾಹನಗಳ ಚಾಲಕರು ತಮ್ಮ ವೇಗದ ಮಿತಿಯನ್ನು 80 ರಿಂದ 90 ಕಿ.ಮೀ.ವರೆಗೆ ಇಟ್ಟುಕೊಂಡರೆ ಸಂಭವನೀಯ ಅಪಘಾತಗಳನ್ನು ತಪ್ಪಿಸಬಹುದು. 

120 ರಿಂದ 150 ಕಿ.ಮೀ. ವೇಗದಲ್ಲಿ ಸಾಗುವುದರಿಂದ ಅಪಘಾತಗಳು ಹೆಚ್ಚು ಸಂಭವಿಸುತ್ತಿವೆ. ಬಹಳಷ್ಟುಜನರಿಗೆ ವಾಹನಗಳ ಮೇಲೆ ನಿಯಂತ್ರಣವಿರುವುದಿಲ್ಲ. ಮಧ್ಯದಲ್ಲಿ ಬ್ರೇಕ್‌ ಹಾಕಿದಾಗ ಅಪಘಾತಗಳು ಸಂಭವಿಸುತ್ತವೆ. ವೇಗ ಮಿತಿಯನ್ನು ನಿಯಂತ್ರಿಸುವ ಸಲುವಾಗಿ ಸ್ಪೀಡ್‌ಗನ್‌ ಅಳವಡಿಸಲಾಗುತ್ತಿದೆ. ವೇಗದ ಮಿತಿ ಮೀರಿದರೆ ದಂಡ ಹಾಕುವುದರ ಜೊತೆಗೆ ಅವರ ಲೈಸೆನ್ಸ್‌ ರದ್ದುಗೊಳಿಸಲಾಗುತ್ತದೆ ಎಂದರು. ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಚಾಲನಾ ಪರಿಣತಿ ಹೊಂದಿರುವವರಿಗೆ ಮಾತ್ರ ಲೈಸೆನ್ಸ್‌ ನೀಡಬೇಕು. ನೈಪುಣ್ಯತೆ ಇಲ್ಲದವರಿಗೆ ಲೈಸೆನ್ಸ್‌ ಕೊಡಬಾರದು ಎಂದು ನೇರವಾಗಿ ಹೇಳಿದ ಅವರು, ಸದ್ಯಕ್ಕೆ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನಗಳು ಸಂಚರಿಸುತ್ತಿವೆ. ದ್ವಿಚಕ್ರ ವಾಹನಗಳ ರದ್ದಿಗೆ ಗೆಜೆಟ್‌ ನೋಟಿಫಿಕೇಷನ್‌ ಮಾಡುವ ಪ್ರಕ್ರಿಯೆ ನಡೆದಿದೆ ಎಂದು ಮಾಹಿತಿ ನೀಡಿದರು.

5 ಕಿಮೀ.ಗೊಂದು ಫೋನ್‌ ಬೂತ್‌: ಹೆದ್ದಾರಿಯಲ್ಲಿ 5 ಕಿ.ಮೀ.ಗೊಂದು ಫೋನ್‌ ಬೂತ್‌ ಅಳವಡಿಸುವಂತೆ ಸೂಚಿಸಿದ ಎಡಿಜಿಪಿ ಅಲೋಕ್‌ಕುಮಾರ್‌, ಇದರಿಂದ ಅಪಘಾತಗಳು ಸಂಭವಿಸಿದಾಗ ಆದಷ್ಟುಬೇಗ ಪೊಲೀಸರಿಗೆ ಮಾಹಿತಿ ತಿಳಿಸಲು ಅನುಕೂಲವಾಗಲಿದೆ. ಕೆಲವರ ಬಳಿ ಫೋನ್‌ ಇರುವುದಿಲ್ಲ. ಅಂತಹವರು ಫೋನ್‌ಬೂತ್‌ ಮೂಲಕ ಮಾಹಿತಿ ನೀಡಲಿದ್ದಾರೆ ಎಂದರು.

Ramanagara: ಜನ​ಪ್ರ​ತಿ​ನಿ​ಧಿ​ಗಳ ಸಹ​ಕಾರವಿದ್ದರೆ ಆಂಗ್ಲ ಶಾಲೆಗೆ ಶಂಕು: ಶಾಸಕ ಬಾಲಕೃಷ್ಣ

ಫೆನ್ಸಿಂಗ್‌ ಮುರಿದರೆ ಕಠಿಣ ಕ್ರಮ: ಹೆದ್ದಾರಿಗೆ ಸಾರ್ವಜನಿಕರು ಓಡಾಡದಂತೆ ಅಡ್ಡಲಾಗಿ ಕಬ್ಬಿಣದ ಫೆನ್ಸಿಂಗ್‌ಗಳನ್ನು ಅಳವಡಿಸಲಾಗಿದೆ. ಆದರೆ, ಬಹುತೇಕ ಕಡೆಗಳಲ್ಲಿ ಫೆನ್ಸಿಂಗ್‌ಗಳನ್ನು ಮುರಿದುಹಾಕಿರುವುದನ್ನು ವೀಕ್ಷಿಸಿದ ಎಡಿಜಿಪಿ ಅಲೋಕ್‌ಕುಮಾರ್‌, ಕಬ್ಬಿಣದ ಫೆನ್ಸಿಂಗ್‌ಗಳನ್ನು ಮುರಿದು ಒಳಬರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

Latest Videos
Follow Us:
Download App:
  • android
  • ios