ರೋಗಿಗಳಿಗೆ ಹೊರಗಿನಿಂದ ಔಷಧಿ ತರಲು ಚೀಟಿ ಕೊಡಬೇಡಿ, ಉಪಾಹಾರ, ಔಷಧಿ ಇಲ್ಲೇ ಕೊಡಬೇಕು: ಸಚಿವ ವೈದ್ಯ ಸೂಚನೆ
ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾದ ಒಳರೋಗಿಗಳಿಗೆ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನ, ರಾತ್ರಿ ಊಟ ನೀಡುವ ವ್ಯವಸ್ಥೆಗೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಚಾಲನೆ ನೀಡಿದರು.
ಭಟ್ಕಳ (ಜೂ.25) : ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾದ ಒಳರೋಗಿಗಳಿಗೆ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನ, ರಾತ್ರಿ ಊಟ ನೀಡುವ ವ್ಯವಸ್ಥೆಗೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಗೆ ಬಡವರೇ ಹೆಚ್ಚು ಬರುತ್ತಿದ್ದು, ಒಳರೋಗಿಯಾಗಿ ದಾಖಲಾದವರಿಗೆ ಅನುಕೂಲವಾಗಲು ಉಚಿತವಾಗಿ ಊಟ, ಉಪಹಾರ ನೀಡುವ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ. ಹೊನ್ನಾವರದಲ್ಲೂ ರೋಗಿಗಳಿಗೆ ಊಟ, ಉಪಹಾರ ನೀಡಲು ಸೂಚಿಸಲಾಗಿದೆ. ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲೂ ಒಳರೋಗಿಗಳಿಗೆ ಉಚಿತವಾಗಿ ಊಟೋಪಚಾರ ಸಿಗುವಂತಾಗಬೇಕು. ಇದರಲ್ಲಿ ಯಾವುದೇ ರಾಜಕೀಯ ಮಾಡುವುದು ಸರಿಯಲ್ಲ. ಗುಣಮಟ್ಟದ ಆಹಾರವನ್ನು ಯಾರು ವಿತರಿಸುತ್ತಾರೋ ಮುಂದಿನ ದಿನಗಳಲ್ಲಿ ಅವರಿಗೆ ಟೆಂಡರು ಕೊಡಲು ಸಹ ಸೂಚಿಸಲಾಗಿದೆ ಎಂದರು.
ಮೀನುಗಾರರಿಗೆ ಪರಿಹಾರ ವಿಳಂಬವಾದರೆ ಅಧಿಕಾರಿಗಳೇ ಹೊಣೆ: ಸಚಿವ ಮಾಂಕಾಳ ವೈದ್ಯ
ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದವರಿಗೆ ಹೊರಗಿನಿಂದ ಔಷಧಿ ತರಲು ಚೀಟಿ ಕೊಡಬಾರದು. ಬಡವರೇ ಹೆಚ್ಚಾಗಿ ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ. ಹೊರಗಿನಿಂದ ಔಷಧಿ ತರುವಂತೆ ಚೀಟಿ ಕೊಟ್ಟರೆ ಅವರಿಗೆ ಕಷ್ಟವಾಗಲಿದೆ. ಹೀಗಾಗಿ ಯಾವುದೇ ವೈದ್ಯರು ರೋಗಿಗಳಿಗೆ ಹೊರಗಿನಿಂದ ಔಷಧಿ ತರುವಂತೆ ಚೀಟಿ ಕೊಡಬಾರದು. ಸರ್ಕಾರಿ ಆಸ್ಪತ್ರೆಯಲ್ಲಿನ ಔಷಧಿಯೇ ಕೊಡುವಂತಾಗಬೇಕು. ಸರ್ಕಾರ ಸರಕಾರಿ ಆಸ್ಪತೆಯಲ್ಲಿ ಚಿಕಿತ್ಸೆಗೆ ಸಂಬಂಧಿಸಿದಂತೆ ಎಲ್ಲಾ ಸೌಲಭ್ಯ ವಿತರಿಸಲು ಸಿದ್ದವಿದೆ ಎಂದರು.
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಮಾತನಾಡಿ, ಹಿಂದೆಯೂ ಆಸ್ಪತ್ರೆಯಲ್ಲಿ ಉಚಿತ ಊಟೋಪಚಾರ ನೀಡಲಾಗುತ್ತಿತ್ತು. ಆದರೆ ಕಾರಣಾಂತರದಿಂದ ಅದನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಸಚಿವ ಮಂಕಾಳ ವೈದ್ಯರ ಬಳಿ ಚರ್ಚಿಸಿ ಅವರ ಸೂಚನೆಯಂತೆ ರೋಗಿಗಳಿಗೆ ಊಟ, ಉಪಹಾರ ನೀಡಲು ಚಾಲನೆ ನೀಡಲಾಗಿದೆ ಎಂದರು.
ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆಗೆ ಸಂಬಂಧಿಸಿದಂತೆ ಎಲ್ಲಾ ವ್ಯವಸ್ಥೆಗಳಿದ್ದರೂ ಲ್ಯಾಬ್ ಟೆಕ್ನಿಷಿಯನ್ ಇಲ್ಲ. ಇದರಿಂದ ಬಡರೋಗಿಗಳಿಗೆ ರಕ್ತ ತಪಾಸಣೆಗೆ ತೊಂದರೆಯಾಗುತ್ತಿದೆ ಎಂದು ಡಾ. ಸವಿತಾ ಕಾಮತ್ ಸಚಿವರ ಗಮನಕ್ಕೆ ತಂದಾಗಿ ಸಚಿವರು, ಸ್ಥಳಂದಿಲೇ ಡಿಎಚ್‌ಒಗೆ ಕರೆ ಮಾಡಿ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಲ್ಯಾಬ್ ಟೆಕ್ನಿಷಿಯನ್ ಹುದ್ದೆ ಭರ್ತಿಗೊಳಿಸುವಂತೆ ಸೂಚಿಸಿದರು. ವೈದ್ಯರಾದ ಲಕ್ಷ್ಮೇಶ ನಾಯ್ಕ, ಸತೀಶ, ಸುರಕ್ಷಿತ ಶೆಟ್ಟಿ, ಕಮಲಾ ನಾಯಕ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ, ಸಾರ್ವಜನಿಕರು ಉಪಸ್ಥಿತರಿದ್ದರು.
24ಬಿಕೆಲ್3: ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಸಚಿವ ಮಂಕಾಳ ವೈದ್ಯರು ರೋಗಿಗಳಿಗೆ ಉಚಿತ ಉಪಹಾರ ಮತ್ತು ಊಟದ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದರು.
ನಾಮಧಾರಿ ಸಮಾಜದಿಂದ ಸ್ವಾರ್ಥರಹಿತ ರಾಜಕಾರಣ ಸಾಧ್ಯ: ಮಂಕಾಳ ವೈದ್ಯ
24ಬಿಕೆಲ್4: ಭಟ್ಕಳದ ಹೆಬಳೆಯ ಶೇಡಬರಿಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿ ಮುಖ್ಯಶಿಕ್ಷಕರು,ಶಿಕ್ಷಕರೊಡನೆ ಚರ್ಚೆ ನಡೆಸಿದ ಸಚಿವ ಮಂಕಾಳ ವೈದ್ಯರು ವಿದ್ಯಾರ್ಥಿಗಳೊಂದಿಗೆ ಮಧ್ಯಾಹ್ನದ ಊಟ ಮಾಡಿದರು.