ರಸ್ತೆ ಬದಿ ಅಸ್ವಸ್ಥನಾಗಿ ಬಿದ್ದಿದ್ದ ವ್ಯಕ್ತಿಯನ್ನು ಪ್ರಾಣಿಗಳಂತೆ ಕಸ ತುಂಬುವ ವಾಹನದಲ್ಲಿ ಸಾಗಿಸಲಾಗಿದೆ. ಕಸ ವಿಲೇವಾರಿ ಮಾಡುವ ಸಿಬ್ಬಂದಿ ರೋಗಿಯನ್ನು ಕಸದ ವಾಹನದಲ್ಲಿ ಹಾಕಿಕೊಂಡು ಸರ್ಕಾರಿ ಆಸ್ಪತ್ರೆಗೆ ದಾಖಲು. 

ಬೆಂಗಳೂರು(ಜು.28): ರಸ್ತೆ ಪಕ್ಕದಲ್ಲಿ ಅಸ್ವಸ್ಥನಾಗಿದ್ದ ರೋಗಿಯನ್ನು ಕಸ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿದ ಘಟನೆ ರಾಜಧಾನಿ ಬೆಂಗಳೂರಿಗೆ ಸಮೀಪದ ನೆಲಮಂಗಲದಲ್ಲಿ ಗುರುವಾರ ನಡೆದಿದೆ.

ರಸ್ತೆ ಬದಿ ಅಸ್ವಸ್ಥನಾಗಿ ಬಿದ್ದಿದ್ದ ವ್ಯಕ್ತಿಯನ್ನು ಪ್ರಾಣಿಗಳಂತೆ ಕಸ ತುಂಬುವ ವಾಹನದಲ್ಲಿ ಸಾಗಿಸಲಾಗಿದೆ. ಕಸ ವಿಲೇವಾರಿ ಮಾಡುವ ಸಿಬ್ಬಂದಿ ರೋಗಿಯನ್ನು ಕಸದ ವಾಹನದಲ್ಲಿ ಹಾಕಿಕೊಂಡು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. 

ಬೆಂಗಳೂರು: ಎರಡೇ ವರ್ಷಕ್ಕೆ ಸ್ಥಗಿತವಾದ ಮನೆ ಬಾಗಿಲಿಗೆ ಶಾಲೆ ಬಿಬಿಎಂಪಿ ಯೋಜನೆ

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸತ್ತ ಪ್ರಾಣಿಗಳನ್ನು ಕಾರ್ಪೋರೇಷನ್‌ ವಾಹನದಲ್ಲಿ ತುಂಬಿಕೊಂಡು ಹೋಗುವಂತೆ ಜೀವಂತ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿರೋದು ನಿಜಕ್ಕೂ ದುರ್ದೈವ ಸಂಗತಿ ಆಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.