ಬಸ್‌ ಟಿಕೆಟ್‌ಗೆ ಯುಪಿಐ ಪಾವತಿ ವ್ಯವಸ್ಥೆ: ಪ್ರಯಾಣಿಕರು ಖುಷ್..!

ಫೋನ್ ಪೆ, ಗೂಗಲ್ ಪೇ ಸೇರಿದಂತೆ ಇತರೆ ಯಾವುದೇ ಯುಪಿಐ ಅಪ್ಲಿಕೇಷನ್ ಮೂಲಕ ಹಣ ಪಾವತಿಸಿ ಪ್ರಯಾಣಿಕರು ಸರಾಗವಾಗಿ ಪ್ರಯಾಣ ಬೆಳೆಸುವಲ್ಲಿ ನೆಮ್ಮದಿ ಕಂಡಿದ್ದಾರೆ.

Passengers Happy For UPI Payment System for NWKRTC Bus Ticket in Bagalkot grg

ರಬಕವಿ-ಬನಹಟ್ಟಿ(ಫೆ.21):  ಬಸ್‌ಗಳಲ್ಲಿ ಚಿಲ್ಲರೆ ಗಲಾಟೆ ಸಾಮಾನ್ಯ. ಈಗ ವಾಕರಾಸಸಂ ಬಸ್‌ಗಳಲ್ಲಿ ಯುಪಿಐ ಪಾವತಿ ವ್ಯವಸ್ಥೆ ಜಾರಿ ಮಾಡಿರುವುದರಿಂದ ಪ್ರಯಾಣಿಕರು ಫುಲ್‌ ಖುಷಿಯಾಗಿದ್ದಾರೆ. ನೇಕಾರ ನಗರಿ ರಬಕವಿ-ಬನಹಟ್ಟಿ ತಾಲೂಕಿಗೂ ಆನ್‌ಲೈನ್‌ ಪೇಮೆಂಟ್‌ ವ್ಯವಸ್ಥೆ ಆವರಿಸಿದ್ದು, ಚಿಲ್ಲರೆ ಸಮಸ್ಯೆಯಿಂದ ಹೂರಾಣಾಗಿದ್ದ ಜನತೆಗೆ ನಿಟ್ಟುಸಿರು ಬಿಡುವಂತಾಗಿದೆ.

ಟಿಕೆಟ್ ಪಡೆಯುವ ವೇಳೆ ಚಿಲ್ಲರೆ ಹಣದ ಸಮಸ್ಯೆ ವಿಪರೀತವಾಗಿದೆ. ಬಹಳಷ್ಟು ಬಾರಿ ಪ್ರಯಾಣಿಕರು ಇಳಿಯುವ ಸ್ಥಳ ಬಂದರೂ ನಿರ್ವಾಹಕರಿಗೆ ಚಿಲ್ಲರೆ ಹಣ ಮರಳಿ ಕೊಡುವುದು ಕಷ್ಟವಾಗುತ್ತಿತ್ತು. ಇದರಿಂದ ಪ್ರಯಾಣಿಕರು, ನಿರ್ವಾಹಕರ ನಡುವೆ ಚಿಲ್ಲರೆಗಾಗಿ ಸಂಘರ್ಷ ನಡೆಯುತ್ತಿರುವುದು ಸಾಮಾನ್ಯವಾಗಿದೆ.

ಬಿಜೆಪಿ ಜಗತ್ತಿನ ಅತ್ಯಂತ ಬಲಿಷ್ಠ ಹಾಗೂ ದೊಡ್ಡಪಕ್ಷ: ರೋಹಿತ್ ಚಕ್ರತೀರ್ಥ

ಈ ಸಮಸ್ಯೆ ಪರಿಹಾರಕ್ಕೆ ಫೋನ್ ಪೆ, ಗೂಗಲ್ ಪೇ ಸೇರಿದಂತೆ ಇತರೆ ಯಾವುದೇ ಯುಪಿಐ ಅಪ್ಲಿಕೇಷನ್ ಮೂಲಕ ಹಣ ಪಾವತಿಸಿ ಪ್ರಯಾಣಿಕರು ಸರಾಗವಾಗಿ ಪ್ರಯಾಣ ಬೆಳೆಸುವಲ್ಲಿ ನೆಮ್ಮದಿ ಕಂಡಿದ್ದಾರೆ.
ಹಂತ-ಹಂತವಾಗಿ ಎಲ್ಲ ಬಸ್‌ಗಳಲ್ಲಿಯೂ ಆನಲೈನ್‌ ಪಾವತಿ ವ್ಯವಸ್ಥೆ ಮಾಡಲಾಗುವುದು. ನಿರ್ವಾಹಕರು ಮತ್ತು ಪ್ರಯಾಣಿಕರಿಗೆ ಚಿಲ್ಲರೆ ಅಭಾವ ಸಮಸ್ಯೆ ತಪ್ಪಲಿದೆ ಎಂದು ಬನಹಟ್ಟಿ ಸಾರಿಗೆ ನಿಯಂತ್ರಕರು ಗಿರೀಶ ಮರನೂರ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios