ಈವರೆಗೆ ಟ್ರ್ಯಾಕ್‌ನಲ್ಲಿ ಶವ ಎಸೆದು ಹೋಗುತ್ತಿದ್ದ ಪ್ರಕರಣಗಳು ಸಾಮಾನ್ಯವಾಗಿದ್ದವು. ಆದರೆ, ಕಳೆದ ಮೂರು ತಿಂಗಳಲ್ಲಿ ರೈಲ್ವೆ ನಿಲ್ದಾಣದಲ್ಲಿ ಶವಗಳನ್ನು ಬಿಟ್ಟು ಹೋಗುವ ಪ್ರಕರಣಗಳು ಘಟಿಸಿವೆ. ಒಂದರ ಹಿಂದೊಂದರಂತೆ ಡಿಸೆಂಬರ್‌ನಲ್ಲಿ ವಿಶ್ವೇಶ್ವರಯ್ಯ, ಯಶವಂತಪುರ (ಜ.4), ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದಲ್ಲಿ (ಮಾ.13) ರಂದು 30-35 ವಯೋಮಾನದ ಮಹಿಳೆಯರ ಶವ ಸಿಕ್ಕಿವೆ. ಒಂದರ ಹಿಂದೊಂದರಂತೆ ಘಟಿಸಿರುವ ಈ ಪ್ರಕರಣಗಳು ರೈಲ್ವೆ ಪ್ರಯಾಣಿಕರನ್ನು ಆತಂಕಕ್ಕೀಡು ಮಾಡಿವೆ.

ಮಯೂರ್‌ ಹೆಗಡೆ

ಬೆಂಗಳೂರು(ಮಾ.16):  ರೈಲ್ವೆ ನಿಲ್ದಾಣಗಳಲ್ಲಿ ಸರಣಿಯಂತೆ ಅಪರಿಚಿತ ಮಹಿಳೆಯರ ಶವ ಪತ್ತೆಯಾಗಿರುವುದು ಭದ್ರತೆ ಬಗ್ಗೆ ಪ್ರಶ್ನೆ ಮೂಡಿಸಿದೆ. ಪ್ಲಾಟ್‌ಫಾರ್ಮ್‌ಗಳಲ್ಲಿ ಸಿಸಿ ಕ್ಯಾಮೆರಾಗಳ ಸಂಖ್ಯೆ ಹೆಚ್ಚಿಸುವುದು ಹಾಗೂ ಸಮರ್ಪಕ ನಿರ್ವಹಣೆಗೆ ಒತ್ತಾಯ ಹೆಚ್ಚಾಗಿದೆ.

ಈವರೆಗೆ ಟ್ರ್ಯಾಕ್‌ನಲ್ಲಿ ಶವ ಎಸೆದು ಹೋಗುತ್ತಿದ್ದ ಪ್ರಕರಣಗಳು ಸಾಮಾನ್ಯವಾಗಿದ್ದವು. ಆದರೆ, ಕಳೆದ ಮೂರು ತಿಂಗಳಲ್ಲಿ ರೈಲ್ವೆ ನಿಲ್ದಾಣದಲ್ಲಿ ಶವಗಳನ್ನು ಬಿಟ್ಟು ಹೋಗುವ ಪ್ರಕರಣಗಳು ಘಟಿಸಿವೆ. ಒಂದರ ಹಿಂದೊಂದರಂತೆ ಡಿಸೆಂಬರ್‌ನಲ್ಲಿ ವಿಶ್ವೇಶ್ವರಯ್ಯ, ಯಶವಂತಪುರ (ಜ.4), ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದಲ್ಲಿ (ಮಾ.13) ರಂದು 30-35 ವಯೋಮಾನದ ಮಹಿಳೆಯರ ಶವ ಸಿಕ್ಕಿವೆ. ಒಂದರ ಹಿಂದೊಂದರಂತೆ ಘಟಿಸಿರುವ ಈ ಪ್ರಕರಣಗಳು ರೈಲ್ವೆ ಪ್ರಯಾಣಿಕರನ್ನು ಆತಂಕಕ್ಕೀಡು ಮಾಡಿವೆ.

ಬೆಂಗಳೂರು: ರೈಲು ನಿಲ್ದಾಣ ಬಳಿ ಡ್ರಮ್‌ನಲ್ಲಿ ಮಹಿಳೆ ಶವ ಪತ್ತೆ, ತನಿಖೆಗೆ 3 ತಂಡ

ಸಿ.ಸಿ.ಕ್ಯಾಮೆರಾ:

ನಗರದ ಕೆಎಸ್‌ಆರ್‌ ನಿಲ್ದಾಣದ ಪ್ರವೇಶ ದ್ವಾರ, ನಿರ್ಗಮನ, ಹತ್ತು ಪ್ಲಾಟ್‌ಫಾರ್ಮ್‌ಗಳು ಸೇರಿ 83 ಸಿಸಿ ಕ್ಯಾಮೆರಾಗಳಿವೆ. ಇವುಗಳಲ್ಲಿ ಸದ್ಯ 4 ದುರಸ್ತಿಯಲ್ಲಿವೆ. ಯಶವಂತಪುರದಲ್ಲಿರುವ 6 ಪ್ಲಾಟ್‌ಫಾರಂ ಸೇರಿ 48 ಸಿಸಿ ಕ್ಯಾಮೆರಾಗಳಿದ್ದು, ಪ್ರಸ್ತುತ 38 ಕಾರ್ಯ ನಿರ್ವಹಿಸುತ್ತಿವೆ. 10 ದುರಸ್ತಿಯಲ್ಲಿವೆ. ಉಳಿದಂತೆ ಬೆಂಗಳೂರು ದಂಡು ನಿಲ್ದಾಣದಲ್ಲಿ 29, ಬಂಗಾರಪೇಟೆ 35, ಕೆ.ಆರ್‌.ಪುರ ನಿಲ್ದಾಣದಲ್ಲಿ 30, ಸತ್ಯಸಾಯಿ ಪ್ರಶಾಂತಿ ನಿಲಯ ನಿಲ್ದಾಣದಲ್ಲಿ 28, ಬಾಣಸವಾಡಿಯಲ್ಲಿ 25, ವಿಶ್ವೇಶ್ವರಯ್ಯ ಟರ್ಮಿನಲ್‌ನಲ್ಲಿ 63 ಸಿಸಿ ಕ್ಯಾಮೆರಾಗಳಿವೆ.

ಆದರೆ, ಇಷ್ಟುಸಂಖ್ಯೆಯ ಸಿಸಿ ಕ್ಯಾಮೆರಾ ಸಾಕಾಗಲ್ಲ. ಇವುಗಳ ಸಂಖ್ಯೆ ಹೆಚ್ಚಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ. ಆಗಮನ, ನಿರ್ಗಮನ ಮಾತ್ರವಲ್ಲದೆ ಪ್ಲಾಟ್‌ಫಾರ್ಮ್‌ಗಳಲ್ಲಿ ಹೆಚ್ಚು ಕ್ಯಾಮೆರಾ ಅಳವಡಿಸಿ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ನಗರದಿಂದ ನಿಲ್ದಾಣಕ್ಕೆ ಪ್ರವೇಶಿಸುವವರ ಜೊತೆಗೆ ರೈಲ್ವೆ ಮೂಲಕ ಬರುವ ಪ್ರಯಾಣಿಕರ ಮೇಲೆಯೂ ಹೆಚ್ಚಿನ ನಿಗಾ ಇಡಬೇಕಿದೆ. ಇಲ್ಲಿಯೂ ಬ್ಯಾಗ್‌ ಸ್ಕ್ಯಾನರ್‌ ಮೂಲಕ ತಪಾಸಣೆ ಇರಬೇಕು. ಹೊರ ರಾಜ್ಯಗಳಿಂದ ಬರುವ ಕಾರ್ಮಿಕರ ಮೇಲೆ ಕಣ್ಣಿಡಬೇಕು. ಆರ್‌ಪಿಎಫ್‌ ಸಿಬ್ಬಂದಿಯ ಗಸ್ತು ಹೆಚ್ಚಿಸಬೇಕು. ಟ್ರ್ಯಾಕ್‌ಗಳ ಮೂಲಕವಾಗಿ ನಿಲ್ದಾಣ ಪ್ರವೇಶಿಸುವ ಸಾಧ್ಯತೆಯನ್ನು ಆದಷ್ಟುತಡೆಯಬೇಕು ಎಂದು ರೈಲ್ವೆ ಹೋರಾಟಗಾರ ಕೃಷ್ಣ ಪ್ರಸಾದ್‌ ಅಭಿಪ್ರಾಯ ಪಡುತ್ತಾರೆ.

ಪೊಲೀಸರಿಂದ ಪತ್ರ

ಯಶವಂತಪುರ ನಿಲ್ದಾಣ ಶವ ಪತ್ತೆ ಪ್ರಕರಣದಲ್ಲಿ ಸಿ.ಸಿ.ಕ್ಯಾಮೆರಾ ವೈಫಲ್ಯ ತನಿಖೆಗೆ ಅಡ್ಡಿಯಾಗಿತ್ತು. ಹೀಗಾಗಿ ಹೆಚ್ಚಿನ ಸಿಸಿ ಕ್ಯಾಮೆರಾ ಅಳವಡಿಸುವಂತೆ ರಾಜ್ಯ ರೈಲ್ವೆ ಪೊಲೀಸರು ನೈಋುತ್ಯ ರೈಲ್ವೆಗೆ ಪತ್ರವನ್ನೂ ಬರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೈಯಪ್ಪನಹಳ್ಳಿ ನಿಲ್ದಾಣದ ಸಿಸಿ ಕ್ಯಾಮೆರಾದಲ್ಲಿ ಒಂದಿಷ್ಟು ಸುಳಿವು ದೊರೆತಿದೆ. ನಾಲ್ವರು ಇದರಲ್ಲಿ ಭಾಗಿಯಾಗಿರುವ ಶಂಕೆಯಿದೆ. ಮಾ.12ರಂದು ರಾತ್ರಿ 11.30ಕ್ಕೆ ಬಂದವರಿಂದ ಈ ಕೃತ್ಯ ಆಗಿರಬಹುದು. ಶವ ದೊರೆತ ಡಬ್ಬದ ಪಕ್ಕವೇ ಇವರು ಕುಳಿತ್ತಿದ್ದ ಫುಟೇಜ್‌ನಲ್ಲಿದೆ. ಅದನ್ನು ರೈಲ್ವೆ ಪೊಲೀಸರಿಗೆ ನೀಡಲಾಗಿದೆ ಎಂದು ನೈಋುತ್ಯ ರೈಲ್ವೆ ಮೂಲಗಳು ತಿಳಿಸಿವೆ.

ಯಶವಂತಪುರ ಪ್ರಕರಣದಲ್ಲಿ ರೈಲಿನ ಮೂಲಕವೇ ಶವ ತಂದು ಪ್ಲಾಟ್‌ಫಾಮ್‌ರ್‍ನಲ್ಲಿ ಇಟ್ಟು ಹೋಗಿದ್ದು ಕಂಡುಬಂದಿತ್ತು. ಈ ಹಂತದಲ್ಲಿ ಪೊಲೀಸರು ಹಳಿಗುಂಟ ಬರುವ ನಿಲ್ದಾಣಗಳಿಗೆ ತೆರಳಿ ಅಲ್ಲಿದ್ದ ಸಿಸಿ ಕ್ಯಾಮೆರಾಗಳ ಫುಟೇಜ್‌ ಪಡೆದು ಪರಿಶೀಲಿಸಲಾಗಿದೆ. ಸುತ್ತಲಿನ ಪ್ರದೇಶಗಳ ನಾಪತ್ತೆ ಪ್ರಕರಣಗಳನ್ನೂ ಪರಿಶೀಲಿಸಿದ್ದರು. ಆದರೆ, ಶವದ ಕುರಿತು ಹೆಚ್ಚಿನ ಮಾಹಿತಿ ಈವರೆಗೆ ಪತ್ತೆಯಾಗಿಲ್ಲ.

Andhra Pradesh: ಡ್ರಮ್‌ನಲ್ಲಿ ಸಿಕ್ತು ಮಹಿಳೆಯ ಡೆಡ್‌ಬಾಡಿ ಪೀಸ್‌; ವರ್ಷದ ಹಿಂದೆ ಪತ್ನಿ ಕೊಂದಿದ್ದ ಪಾಪಿ ಪತಿ..!

ಇಷ್ಟು ವರ್ಷ ಇಂತಹ ಪ್ರಕರಣಗಳು ಆಗಿರಲಿಲ್ಲ. ರೈಲ್ವೆ ನಿಲ್ದಾಣದ ಭದ್ರತೆ ವಿಚಾರದಲ್ಲಿ ಯಾವುದೇ ರಾಜಿಯಾಗಿಲ್ಲ. ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಭದ್ರತೆ ಹೆಚ್ಚಳಕ್ಕೆ ಅಗತ್ಯ ಕ್ರಮ ವಹಿಸಲಾಗುವುದು ಅಂತ ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕಿ ಕುಸುಮಾ ಹರಿಪ್ರಸಾದ್‌ ತಿಳಿಸಿದ್ದಾರೆ.

ಖಂಡಿತವಾಗಿಯೂ ನಗರದ ರೈಲ್ವೆ ನಿಲ್ದಾಣಗಳಲ್ಲಿ ಸಿ.ಸಿ.ಕ್ಯಾಮೆರಾ ಕಡಿಮೆ ಇವೆ. ತನಿಖೆಗೆ ಸಹಕಾರಿ ಆಗುವಂತೆ ಹೆಚ್ಚು ಅಳವಡಿಕೆ ಮಾಡಲು ನೈಋುತ್ಯ ರೈಲ್ವೆ ಅಧಿಕಾರಿಗಳಿಗೆ ಪತ್ರ ಬರೆದಿದ್ದೆವು. ಸಭೆಯಲ್ಲೂ ತಿಳಿಸಲಾಗಿದೆ ಅಂತ ರೈಲ್ವೆ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌.ಕೆ.ಸೌಮ್ಯಲತಾ ತಿಳಿಸಿದ್ದಾರೆ.