ಕಲಬುರಗಿ(ಜು.12): ಪ್ರಯಾಣಿಕರಿಬ್ಬರು ಮಹಿಳಾ ಕಂಡಕ್ಟರ್‌ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಘಟನೆ ಶನಿವಾರ ನಗರದಲ್ಲಿ ನಡೆದಿದೆ.

ಸುಮಿತ್ರಾ ಶಿವಾಜಿ ಹಲ್ಲೆಗೊಳಗಾದ ಮಹಿಳಾ ಕಂಡಕ್ಟರ್‌. ನಗರದ ಅಂಕುಶ್‌ ಮತ್ತು ಮಹೇಶ್‌ ಎಂಬುವವರು ಸುಮಿತ್ರಾ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದರಿಂದ ಅವರ ವಿರುದ್ಧ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕ ಕಾಂಗ್ರೆಸ್‌ನ ಮತ್ತೋರ್ವ ಶಾಸಕನಿಗೆ ಕೊರೋನಾ ಅಟ್ಯಾಕ್..!

ವಿಜಯಪುರ-ಹುಮನಾಬಾದ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ನಗರದ ಅಂಕುಶ್‌ ಮತ್ತು ಮಹೇಶ್‌ ನಗರದ ಆಳಂದ ಸರ್ಕಲ್‌ ಬಳಿ ಬಸ್‌ ನಿಲುಗಡೆ ಮಾಡುವಂತೆ ಕೋರಿದ್ದಾರೆ. ಈ ವೇಳೆ ಸುಮಿತ್ರಾ ಇದು ನಿಲುಗಡೆ ಸ್ಥಳವಲ್ಲ, ಬಸ್‌ ನಿಲುಗಡೆ ಮಾಡಲು ಬರುವುದಿಲ್ಲ ಎಂದಿದ್ದಕ್ಕೆ ಅವರೊಂದಿಗೆ ವಾಗ್ವಾದಕ್ಕಿಳಿದು ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಅಂಕುಶ್‌ ಮತ್ತು ಮಹೇಶ್‌ ವಿರುದ್ಧ ಸುಮಿತ್ರಾ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.