ಕೊರೊ‌‌ನಾ ಟೆಸ್ಟ್ ಮಾಡಿಸಲು ಪ್ರಯಾಣಿಕರು ನಕಾರ| ಮುಂಬೈಯಿಂದ ಯಾದಗಿರಿಗೆ ಬಂದು ತಪಾಸಣೆ ಮಾಡಿಸಿಕೊಳ್ಳದೆ ಹೊರಗೆ ಕಾಲ್ಕಿತ್ತ ನೂರಾರು ಪ್ರಯಾಣಿಕರು| ಯಾದಗಿರಿ ರೈಲು ನಿಲ್ದಾಣದಲ್ಲಿ ನಡೆದ ಘಟನೆ| 

ಯಾದಗಿರಿ(ಅ.10): ನಾನು ಯಾವ ಟೆಸ್ಟ್ ಮಾಡಿಸಲ್ಲ, ಏನು ಮಾಡ್ಕೋತೀರಿ ಮಾಡ್ಕೊಳ್ಳಿ ಎಂದು ಪ್ರಯಾಣಿಕನೊಬ್ಬ ಆರೋಗ್ಯ ಸಿಬ್ಬಂದಿಗೆ ಅವಾಜ್ ಹಾಕಿದ ಘಟನೆ ನಗರದ ರೈಲ್ವೆ ನಿಲ್ದಾಣದಲ್ಲಿ ಇಂದು(ಶನಿವಾರ) ನಡೆದಿದೆ. ಮುಂಬೈನಿಂದ ಉದ್ಯಾನ ಎಕ್ಸ್‌ಪ್ರೆಸ್‌ ಮೂಲಕ ನಗರಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಪ್ರಯಾಣಿಕರು ಆಗಮಿಸಿದ್ದಾರೆ. 

ರೂಪೇಶ್ ಎಂಬಾತನ ಹಾಗೂ ಆತನ ಕುಟುಂಬಸ್ಥರು ಕೊರೋನಾ ಟೆಸ್ಟ್ ಮಾಡಿಸಿಕೊಳ್ಳದೆ ಆರೋಗ್ಯ ಸಿಬ್ಬಂದಿಯ ಜೊತೆ ಕಿರಿಕ್ ತೆಗೆದಿದ್ದಾರೆ. ಹೀಗೆ ಕ್ಯಾತೆ ತೆಗೆದ ಪ್ರಯಾಣಿಕನ ಜೊತೆ ಇತರೇ ಪ್ರಯಾಣಿಕರು ಕೂಡ ಎಸ್ಕೇಪ್‌ ಆಗಿದ್ದಾರೆ. 

ವಿಜಯಪುರ: ಆರೋಗ್ಯ ಸಿಬ್ಬಂದಿಗೆ ಆವಾಜ್‌ ಹಾಕಿದ ಅಜ್ಜಿ

ತಪಾಸಣೆ ಮಾಡಿಸಿಕೊಳ್ಳದೆ ನೂರಾರು ಪ್ರಯಾಣಿಕರು ನಗರಕ್ಕೆ ನುಗ್ಗಿದ ಹಿನ್ನೆಲೆಯಲ್ಲಿ ಮಹಾಮಾರಿ ಕೊರೋನಾ ಸೋಂಕಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ.