Asianet Suvarna News Asianet Suvarna News

ವಿಜಯಪುರ: ಆರೋಗ್ಯ ಸಿಬ್ಬಂದಿಗೆ ಆವಾಜ್‌ ಹಾಕಿದ ಅಜ್ಜಿ

ಅಜ್ಜಿಯ ಆವಾಜ್‌ಗೆ ತಬ್ಬಿಬ್ಬಾದ ತಹಸೀಲ್ದಾರ| ವಿಜಯಪುರ ಜಿಲ್ಲೆಯ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ತಾಂಡಾದಲ್ಲಿ ನಡೆದ ಘಟನೆ| ಆರೋಗ್ಯ ಸಿಬ್ಬಂದಿನೋಡುತ್ತಿದ್ದಂತೆಯೇ ಅವರನ್ನು ಕರೆದುಕೊಂಡು ಹೋಗಿ 2 ತಿಂಗಳು ಬಿಡಬೇಡಿ. ನಿಮಗೆ ಯಾರು ಹೇಳಿದ್ದಾರೋ ಅವರನ್ನು ನಾನು ಸುಮ್ಮನೆ ಬಿಡೋದಿಲ್ಲ. ಅವರನ್ನು ಮುಗಿಸಿಬಿಡುತ್ತೇನೆ ಎಂದು ಕೂಗಾಡಿದ ಅಜ್ಜಿ|

Grandmother Did Not Care about Health Department Officers
Author
Bengaluru, First Published Jun 7, 2020, 2:40 PM IST

ವಿಜಯಪುರ(ಜೂ.07): ಕೊರೋನಾ ಪಾಸಿಟಿವ್‌ ಬಂದ ವ್ಯಕ್ತಿಗಳನ್ನು ಕರೆತರಲು ತೆರಳಿದ್ದ ತಹಸೀಲ್ದಾರ ಹಾಗೂ ಆರೋಗ್ಯ ಸಿಬ್ಬಂದಿಗೆ ಅಜ್ಜಿಯೊಬ್ಬರು ಆವಾಜ್‌ ಹಾಕಿದ ಘಟನೆ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ತಾಂಡಾದಲ್ಲಿ ಶನಿವಾರ ನಡೆದಿದೆ. 

ಮಹಾರಾಷ್ಟ್ರದಿಂದ ಮರಳಿದವರನ್ನು 14 ದಿನ ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗಿತ್ತು. ನಂತರ ಅವರನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಅವರ ಥ್ರೋಟ್‌ ಸ್ಕ್ವಾಯಬ್‌ ವರದಿ ಪಾಸಿಟಿವ್‌ ಬಂದ ಹಿನ್ನೆಲೆಯಲ್ಲಿ ತಹಸೀಲ್ದಾರ ನೇತೃತ್ವದಲ್ಲಿ ಆರೋಗ್ಯ ಸಿಬ್ಬಂದಿ ತಾಂಡಾಕ್ಕೆ ತೆರಳಿದಾಗ ಮನೆಯಲ್ಲಿನ ಅಜ್ಜಿಯೊಬ್ಬರು ಜೋರಾಗಿ ಗಲಾಟೆ ಮಾಡಿದ್ದಾರೆ. ಅಜ್ಜಿಯ ಆವಾಜ್‌ಗೆ ತಹಸೀಲ್ದಾರ ತಬ್ಬಿಬ್ಬಾಗಿದ್ದಾರೆ. ಆರೋಗ್ಯ ಸಿಬ್ಬಂದಿಯನ್ನು ನೋಡುತ್ತಿದ್ದಂತೆಯೇ ಅಜ್ಜಿ, ‘ಅವರನ್ನು ಕರೆದುಕೊಂಡು ಹೋಗಿ 2 ತಿಂಗಳು ಬಿಡಬೇಡಿ. ನಿಮಗೆ ಯಾರು ಹೇಳಿದ್ದಾರೋ ಅವರನ್ನು ನಾನು ಸುಮ್ಮನೆ ಬಿಡೋದಿಲ್ಲ. ಅವರನ್ನು ಮುಗಿಸಿಬಿಡುತ್ತೇನೆ ಎಂದು ಕೂಗಾಡಿದ್ದಾರೆ. ಕೊನೆಗೂ ಆ ಮನೆಯವರನ್ನು ಅಧಿಕಾರಿಗಳು ಆಸ್ಪತ್ರೆಗೆ ಕರೆದುಕೊಂಡು ಹೋಗುವಲ್ಲಿ ಸಫಲರಾದರು.

ವಿಜಯಪುರ: ಕ್ವಾರಂಟೈನ್‌ಗೆ ಒಪ್ಪದ ಯುವತಿ, ಅಧಿಕಾರಿಗಳ ಜೊತೆ ಕಿರಿಕ್‌

‘ನಮ್ಮ ತಲೆ ಮೇಲೆ ರೇವಣಸಿದ್ದೇಶ್ವರ ದೇವರಿದ್ದಾನೆ. ನಮಗೆ ಏನೂ ಆಗುವುದಿಲ್ಲ. ನಮಗೆ ಸಾವು ಬರುವುದಿಲ್ಲ. ಮಂದಿ ಮಾತು ಕೇಳಿ ಮನೆಗೆ ಬಂದಿದ್ದೀರಿ. ಕೊರೋನಾ ಬಂದರೆ ನಮಗೆ ಬರಲಿ ಬಿಡಿ’ ಎಂದು ಅಜ್ಜಿ ಅಧಿಕಾರಿಗಳಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಕೊನೆಗೂ ಆ ಮನೆಯವರನ್ನು ಅಧಿಕಾರಿಗಳು ಆಸ್ಪತ್ರೆಗೆ ಕರೆದುಕೊಂಡು ಹೋಗುವಲ್ಲಿ ಸಫಲರಾದರು.
 

Follow Us:
Download App:
  • android
  • ios