ಬೇಲೂರು (ನ.13) :  ಪಟ್ಟಣದ ಚನ್ನಕೇಶವ ದೇವಾಲಯದ ಎದುರು ವಾಹನ ಪಾರ್ಕಿಂಗ್‌ ಶುಲ್ಕ ರದ್ದು ಪಡಿಸಿ ಹಲವು ತಿಂಗಳುಗಳೇ ಕಳೆದಿವೆ. ಆದರೆ ಈಗ ವಾಹನ ಪೂಜೆ ಸೇವಾ ಶುಲ್ಕದ ರಸೀದಿಯನ್ನಾಗಿ ಬಳಸಿಕೊಂಡು ಹಣ ವಸೂಲಿ ಮಾಡುತ್ತಿರುವ ದೂರು ಕೇಳಿ ಬಂದಿದೆ.

ಬೇಲೂರು ಐತಿಹಾಸಿಕ ಪ್ರಸಿದ್ಧ ಚನ್ನಕೇಶವ ದೇವಾಲಯದ ವೀಕ್ಷಣೆಗೆ ಜಿಲ್ಲೆ ಸೇರಿದಂತೆ ನೆರ ರಾಜ್ಯಗಳಿಂದ ಪ್ರತಿದಿನ ನೂರಾರು ಮಂದಿ ಪ್ರವಾಸಿಗರು ಆಗಮಿಸುತ್ತಾರೆ. ಈವೇಳೆ ವಾಹನ ನಿಲುಗಡೆ ಮನಬಂದಂಗೆ ಪಾರ್ಕಿಂಗ್‌ ಶುಲ್ಕ ವಸೂಲಿ ಮಾಡಲಾಗುತ್ತಿತ್ತು. ಇದರಿಂದ ಪ್ರವಾಸಿಗರಿಗೆ ಕಿರಿಕಿರಿ ಉಂಟಾಗಿ ಹಣ ವಸೂಲಿ ಮಾಡುವುದನ್ನು ಸ್ಥಗಿತಗೊಳಿಸಲಾಗಿತ್ತು. 

ಸಾವಿರಾರು ಬಿಲ್ ಬಾಕಿ: ರಾಜ್ಯದ ಪ್ರಸಿದ್ಧ ದೇಗುಲದ ವಿದ್ಯುತ್‌ ಸಂಪರ್ಕ ಕಟ್

ಆದರೆ ಇದೀಗ ದೇವಾಲಯ ನೀಡುವ ವಾಹನ ಸೇವಾ ಪೂಜೆ ರಸೀದಿಯನ್ನು ಪಾರ್ಕಿಂಗ್‌ ರಶೀದಿಯನ್ನಾಗಿ ಹಣ ವಸೂಲಿ ಮಾಡುತ್ತಿದ್ದಾರೆ. ಈ ಸಂಬಂಧ ಪ್ರವಾಸಿಗರಿಗೆ ತೊಂದರೆ ಉಂಟಾಗುತ್ತಿರುವುದರಿಂದ ಕೂಡಲೇ ಜಿಲ್ಲಾ​ಧಿಕಾರಿ ಹಣ ಲೂಟಿ ಮಾಡುತ್ತಿರುವ ಬಗ್ಗೆ ಕ್ರಮ ಕೈಗೊಳ್ಳಬೇಕು. ದೇವಾಲಯದ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಮೂರು ಯಂತ್ರಗಳು ವರ್ಷ ಕಳೆಯುತ್ತಾ ಬಂದರೂ ಇತ್ತ ಯಾವ ಅಧಿ​ಕಾರಿಗಳು ಗಮನ ಹರಿಸುತ್ತಿಲ್ಲ. ದೇವಾಲಯಕ್ಕೆ ಬರುವ ಪ್ರವಾಸಿಗರಿಗೆ ತೊಂದರೆ ಉಂಟಾಗಿದೆ. ಇದನ್ನು ಬೇಗ ಸರಿಪಡಿಸಬೇಕು ಎಂದು ಸಾರ್ವಜನಿಕರು ಹಾಗೂ ಪ್ರವಾಸಿಗರು ಒತ್ತಾಯಿಸಿದ್ದಾರೆ.