ಪ್ರೀತಿಸಿ ಮದುವೆಯಾದ 3ನೇ ದಿನಕ್ಕೆ ಪತ್ನಿಯ ಕೊಲೆ: ಪ್ರಿಯಕರನ ಮನೆ ಮುಂದೆ ಯುವತಿ ಶವವಿಟ್ಟು ಪೋಷಕರ ಪ್ರತಿಭಟನೆ

ಮೂರು ವರ್ಷದಿಂದ ಪ್ರೀತಿಸಿ ಬಳಿಕ ಮದುವೆಯಾದ ನಾಲ್ಕೇ ದಿನದಲ್ಲಿ ದಾರುಣವಾಗಿ ಮೃತಪಟ್ಟಿದ್ದ ದಲಿತ ಯುವತಿ ಅಕ್ಷಿತಾಳ ಶವವನ್ನು ಆರನೇ ಹೊಸಕೋಟೆಯ ಪ್ರಿಯಕರನ ಮನೆಯ ಮುಂದೆ ಇರಿಸಿ ಅಕ್ಷಿತಾ ಪೋಷಕರು ಗುರುವಾರ ಪ್ರತಿಭಟನೆ ನಡೆಸಿದ ಪ್ರಸಂಗ ನಡೆಯಿತು.

Parents protest after young womans body was found in front of lovers house at kodagu gvd

ವರದಿ: ರವಿ.ಎಸ್.ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಮಾ.16): ಮೂರು ವರ್ಷದಿಂದ ಪ್ರೀತಿಸಿ ಬಳಿಕ ಮದುವೆಯಾದ ನಾಲ್ಕೇ ದಿನದಲ್ಲಿ ದಾರುಣವಾಗಿ ಮೃತಪಟ್ಟಿದ್ದ ದಲಿತ ಯುವತಿ ಅಕ್ಷಿತಾಳ ಶವವನ್ನು ಆರನೇ ಹೊಸಕೋಟೆಯ ಪ್ರಿಯಕರನ ಮನೆಯ ಮುಂದೆ ಇರಿಸಿ ಅಕ್ಷಿತಾ ಪೋಷಕರು ಗುರುವಾರ ಪ್ರತಿಭಟನೆ ನಡೆಸಿದ ಪ್ರಸಂಗ ನಡೆಯಿತು. ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಆರನೇ ಹೊಸಕೋಟೆಯಲ್ಲಿ ಒಕ್ಕಲಿಗ ಸಮುದಾಯದ 30 ವರ್ಷದ ಯುವಕ ಹೇಮಂತ್ ಮತ್ತು ಆತನ ಪೋಷಕರೇ ತಮ್ಮ ಮಗಳನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಮೃತ ಅಕ್ಷಿತಾ ಪೋಷಕರು ಅಕ್ಷಿತಾಳ ಶವವನ್ನು ಹೇಮಂತ ಅವರ ಮನೆ ಬಳಿ ಇರಿಸಿ ಪ್ರತಿಭಟಿಸಿದರು. 

ಆರೋಪಿಗಳಾದ ಹೇಮಂತ್, ಆತನ ತಂದೆ ದಶರಥ ಹಾಗು ತಾಯಿ ಗಿರಿಜಾ ಅವರನ್ನು ಬಂಧಿಸಿ ಈ ಸ್ಥಳಕ್ಕೆ ಕರೆತರುವವರೆಗೆ ನಾವು ಮೃತದೇಹ ತೆಗೆಯುವುದಿಲ್ಲ ಎಂದು ಯುವಕನ ಮನೆಯ ಬಾಗಿಲಲ್ಲಿ ಶವವಿರಿಸಿ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಹೇಂತನ ಮನೆಯ ಮುಂದೆಯೇ ಶವ ಹೂಳಲಾಗುವುದು ಎಂದು ಪಟ್ಟುಹಿಡಿದು ಕುಳಿತರು. ಪೋಷಕರು ಹಾಗೂ ಗ್ರಾಮಸ್ಥರಿಗೆ ಬೆಂಬಲವಾಗಿ ಸ್ಥಳಕ್ಕೆ ದಲಿತಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದಂತೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಪರಿಸ್ಥಿತಿ ನಿರ್ಮಾಣವಾಯಿತು. 

ಒಕ್ಕಲಿಗ ಯುವಕನ ಮದುವೆಯಾದ ಐದೇ ದಿನಕ್ಕೆ ಮಸಣ ಸೇರಿದ ದಲಿತ ಯುವತಿ: ಕೊಡಗಿನಲ್ಲಿ ನಡೆಯಿತಾ ಮರ್ಯಾದ ಹತ್ಯೆ?

ಆದರೆ ಯಾವುದೇ ಅವಘಡ ಸಂಭವಿಸದಂತೆ ಪೊಲೀಸ್ ಇಲಾಖೆ ಹೆಚ್ಚಿನ ಸಂಖ್ಯೆಯ ಸಿಬ್ಬಂದಿಯನ್ನು ನಿಯೋಜಿಸಿತ್ತು.  ಕುಶಾಲನಗರ ಡಿವೈಎಸ್ಪಿ ಸೇರಿದಂತೆ ವಿವಿಧ ಅಧಿಕಾರಿಗಳು ಶವ ಸಂಸ್ಕಾರ ಮಾಡುವಂತೆ ಅಕ್ಷಿತಾ ಪೋಷಕರನ್ನು ಮನವೊಲಿಸಿದರೂ ಅದು ಆರಂಭದಲ್ಲಿ ಪ್ರಯೋಜನವಾಗಲಿಲ್ಲ. ಹೀಗಾಗಿ ಸ್ಥಳಕ್ಕೆ ಬಂದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಅವರು ಸಾಕಷ್ಟು ಸಮಯ ಅಕ್ಷಿತಾ ಪೋಷಕರು, ಸಂಬಂಧಿಕರು ಹಾಗೂ ದಲಿತಪರ ಸಂಘಟನೆಗಳ ಮುಖಂಡರೊಂದಿಗೆ ಮಾತುಕತೆ ನಡೆಸಿ ಶವ ಸಂಸ್ಕಾರಕ್ಕೆ ಒಪ್ಪಿಸಿದರು. ಆದರೆ ಮನೆಯ ಮುಂಭಾಗದಲ್ಲೇ ಶವ ಹೂಳುವ ನಿರ್ಧಾರದಿಂದ ಜನರು ಹಿಂದೆ ಸರಿಯಲಿಲ್ಲ. 

ಮನೆ ಬಾಗಿಲಿನಲ್ಲಿ ಶವ ಹೂತರೆ ಗ್ರಾಮದೊಳಗೆ ಅವರ ಮನೆ ಇರುವುದರಿಂದ ಬೇರೆಯವರಿಗೂ ಇದರಿಂದ ತೊಂದರೆ ಆಗಲಿದೆ ಎಂಬುದನ್ನು ಹೆಚ್ಚುವರಿ ಎಸ್ಪಿ ಸುಂದರ್ ರಾಜ್ ಅವರು ಜನರಿಗೆ ಮನವರಿಕೆ ಮಾಡಿದರು. ನಂತರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಅವರ ಮಾತಿನಿಂದ ಮನಸ್ಸು ಬದಲಾಯಿಸಿದ ಮೃತ ಅಕ್ಷಿತಾ ಕುಟುಂಬಸ್ಥರು ಹೇಮಂತ್ ಅವರ ಮನೆಯ ಪಕ್ಕದಲ್ಲಿಯೇ ಇರುವ ಪ್ರಿಯಕರನ ತಂದೆಯ ಜಮೀನಿನಲ್ಲಿ ಶವ ಸಂಸ್ಕಾರ ಮಾಡಿದರು. ಸ್ಥಳಕ್ಕೆ ಬಂದಿದ್ದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಜಶೇಖರ್ ಅವರು ಇಲಾಖೆಯಿಂದ ಕೊಡಬಹುದಾಗಿದ್ದ ಪರಿಹಾರದ ಮೊದಲ ಹಂತದ ಮೊತ್ತವನ್ನು ಮೃತ ಅಕ್ಷಿತಾ ಅವರ ಸಂಬಂಧಿಕರಿಗೆ ವಿತರಿಸಿದರು. 

ರಾಹುಲ್‌ ಗಾಂಧಿ ದೇಶದ ಜನರ ಕ್ಷಮೆ ಕೇಳಲಿ: ಕೇಂದ್ರ ಸಚಿವೆ ಸಾಧ್ವಿ ನಿರಂಜನ ಜ್ಯೋತಿ

ಮುಂದೆ ನಮ್ಮ ಮಗಳ ಸಮಾಧಿಗೆ ಪೂಜೆ ಮಾಡುವುದಕ್ಕಾಗಲಿ ಅಥವಾ ಅದನ್ನು ನೋಡಲು ಬರುವುದಕ್ಕಾಗಲಿ ಯಾವುದೇ ತೊಂದರೆಯಾಗದಂತೆ ರಕ್ಷಣೆ ನೀಡಲಾಗುವುದು. ಜೊತೆಗೆ ಅಪರಾಧಿಗಳನ್ನು ಬಂಧಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆಯನ್ನು ಪೊಲೀಸ್ ಇಲಾಖೆ ನೀಡಿದ್ದರಿಂದ ಅಂತ್ಯ ಸಂಸ್ಕಾರಕ್ಕೆ ಒಪ್ಪಿರುವುದಾಗಿ ಮೃತ ಅಕ್ಷಿತಾ ಪೋಷಕರು ತಿಳಿಸಿದರು. ಒಟ್ಟಿನಲ್ಲಿ ಬಾಳಿ ಬದುಕಬೇಕಾಗಿದ್ದ ತಮ್ಮ ಮಗಳನ್ನು ಕಳೆದುಕೊಂಡ ರಾಜು, ವನಜಾಕ್ಷಿ ದಂಪತಿ ಮತ್ತು ಸಂಬಂಧಿಕರು ಕಣ್ಣೀರು ಸುರಿಸುತ್ತಲೇ ತಮ್ಮ ಮಗಳ ಅಂತ್ಯ ಸಂಸ್ಕಾರವನ್ನು ನೆರೆವೇರಿಸಿದರು. 

Latest Videos
Follow Us:
Download App:
  • android
  • ios