ತುಮಕೂರು (ಮಾ.21):  ಪುಟ್ಟ ಮಗುವಿನ ಶವಸಂಸ್ಕಾರಕ್ಕೆ ಕಿಡಿಗೇಡಿಗಳು ಅಡ್ಡಿ ಮಾಡಿದ್ದು, ಮಣ್ಣಲ್ಲಿ ಹೂತ ಮಗುವಿನ ಶವವನ್ನು ಹೊರ ತೆಗೆಸಲಾಗಿದೆ. 

ತುಮಕೂರು ಜಿಲ್ಲೆ ಕೊರಟ ಗೆರೆಯ ಕೈಮರದಲ್ಲಿ ಅಮಾನವೀಯ ಘಟನೆ ನಡೆದಿದೆ.

 ಅನಾರೋಗ್ಯದಿಂದ  ಮೂರು ತಿಂಗಳ ಹೆಣ್ಣು ಮಗು ಮೃತಪಟ್ಟಿತ್ತು.  ಕೈಮರ ಗ್ರಾಮದ ರಂಗರಾಜು , ನೇತ್ರಾವತಿ ದಂಪತಿ ಮಗು ಸಾವಿಗೀಡಾಗಿದ್ದು,  ನಿರ್ಮಾಣ ಹಂತದಲ್ಲಿದ್ದ  ಶಾಯಿ ಗಾರ್ಮೆಂಟ್ಸ್ ಸೆಕ್ಯೂರಿಟಿ ಶಿವಲಿಂಗಯ್ಯ ಎಂಬಾತ ಹೂತಿದ್ದ ಮಗುವಿನ ಶವವನ್ನು ಹೊರತೆಗೆಸಿ ಅಮಾನವೀಯ ವರ್ತನೆ ತೋರಿಸಿದ್ದಾನೆ. 

ಅಡುಗೆ ಮಾಡೋ ವಿಚಾರಕ್ಕೆ ಜಗಳ : ಪಶ್ಚಿಮ ಬಂಗಾಳ ಯುವಕನ ಬರ್ಬರ ಹತ್ಯೆ ...

ಗುಂಡಿ ತೋಡಿದ ಜಾಗ ಗಾರ್ಮೆಂಟ್ ಗೆ ಸೇರಿದ್ದು ಎಂದು ವಾದ ಮಾಡಿದ ಸೆಕ್ಯೂರಿಟಿ ಈ ಕೃತ್ಯ ಎಸಗಿದ್ದಾನೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೋಷಕರು ಬೇರೆ ಜಾಗದಲ್ಲಿ ಮಗುವಿನ ಶವ ಹೂತು ಹಾಕಿದ್ದಾರೆ.  

ಆದರೆ ಇದೀಗ  ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಗಾರ್ಮೆಂಟ್ ನಿರ್ಮಾಣ ಮಾಡುತ್ತಿರುವ ಆರೋಪವು ಎದುರಾಗಿದೆ. 

ತುಮಕೂರು ಜಿಲ್ಲೆ ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.