ಅಯ್ಯೋ ವಿಧೀಯೇ! ಆರತಕ್ಷತೆಯಲ್ಲೇ ಕೊನೆಯುಸಿರೆಳೆದ ವಧು, ಸಾವಿನಲ್ಲೂ ಸಾರ್ಥಕತೆ ಮೆರೆದ ಚೈತ್ರಾ
* ಆರತಕ್ಷತೆಯಲ್ಲಿ ಅಸ್ವಸ್ಥಳಾಗಿ ಬಿದ್ದಿದ್ದ ಚೈತ್ರಾ
* ಚೈತ್ರಾ ಬ್ರೈನ್ ಡೆಡ್ ಎಂದು ನಿಮ್ಹಾನ್ಸ್ ವೈದ್ಯರಿಂದ ಘೋಷಣೆ
* ಈ ಬಗ್ಗೆ ಸ್ವತಃ ಮಾಹಿತಿ ನೀಡಿದ ಆರೋಗ್ಯ ಸಚಿವ ಡಾ.ಸುಧಾಕರ್
ಕೋಲಾರ(ಫೆ.12): ಆರತಕ್ಷತೆಯಲ್ಲಿ ಮದುಮಗಳೊಬ್ಬಳು ಕುಸಿದು ಬಿದ್ದು ಅಸ್ವಸ್ಥಳಾದ ಘಟನೆ ಕೋಲಾರದಲ್ಲಿ ನಿನ್ನೆ (ಶುಕ್ರವಾರ) ನಡೆದಿದೆ. ಚೈತ್ರಾ (26) ಎಂಬುವರೇ ಆರತಕ್ಷತೆಯಲ್ಲಿ ಅಸ್ವಸ್ಥಳಾಗಿ ಬಿದ್ದಿದ್ದಳು. ತಕ್ಷಣ ಚೈತ್ರಾ ಅವರನ್ನ ಬೆಂಗಳೂರಿನ ನಿಮ್ಹಾನ್ಸ್‌ಗೆ ದಾಖಲಿಸಲಾಗಿತ್ತು. ಆದರೆ, ಚೈತ್ರಾ ಅವರ ಬ್ರೈನ್ ಡೆಡ್ ಎಂದು ನಿಮ್ಹಾನ್ಸ್ ವೈದ್ಯರಿಂದ ಘೋಷಿಸಿದ್ದರು.
ಚೈತ್ರಾಳ ಅವರ ಮೆದುಳು ನಿಷ್ಕ್ರೀಯಗೊ೦ಡಿದ್ದರಿಂದ ಅಂಗಾಂಗ ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದರು. ಮೃತ ಚೈತ್ರಾ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಮೂಲದವರು ಎಂದು ತಿಳಿದು ಬಂದಿದೆ. ಈ ಬಗ್ಗೆ ಸ್ವತಃ ಆರೋಗ್ಯ ಸಚಿವ ಡಾ.ಸುಧಾಕರ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು.
ಸಾವಿನಲ್ಲೂ ಸಾರ್ಥಕತೆ... ಆರು ಜನರ ಬಾಳಿಗೆ ಬೆಳಕಾದ ದರ್ಶನ್
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಕೊಡಚೆರವು ಗ್ರಾಮದ ಕೃಷಿಕ ರಾಮಪ್ಪ ಎಂಬುವರ ಮಗಳು ಚೈತ್ರಾ ಎಂಎಸ್ಸಿ ಬಯೋಕೆಮಿಸ್ಟ್ರಿ ಮಾಡಿ ಕೈವಾರ ಬಳಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರು. ಫೆ.6 ರಂದು ಸಂಜೆ ಶ್ರೀನಿವಾಸಪುರ ಪಟ್ಟಣದಲ್ಲಿ ಘಟನೆ ನಡೆದಿತ್ತು.
ಹೊಸಕೋಟೆ ಮೂಲದ ಯುವಕನೊಂದಿಗೆ ಚೈತ್ರಾ ಅವರ ಮದುವೆ ನಿಶ್ಚಯವಾಗಿತ್ತು. ಆರತಕ್ಷೆ ಸಮಯದಲ್ಲಿ ಕುಸಿದು ಬಿದ್ದಿದ್ದರಿಂದ ಮದುವೆ ಮನೆಯಿಂದ ನೇರ ಆಸ್ಪತ್ರೆಗೆ ಹೋಗಿದ್ದರು. ಚಿಕಿತ್ಸೆ ಫಲಿಸದೆ ನಿನ್ನೆ(ಶುಕ್ರವಾರ) ನಿಮ್ಹಾನ್ಸ್ ವೈದ್ಯರು ಬ್ರೈನ್ ಡೆಡ್ ಎಂದು ಘೋಷಿಸಿದ್ದರು.
ಕೊಡಗು ಯುವಕನ ಅಂಗಾಂಗ ದಾನ: ಸುಧಾಕರ್ ಶ್ಲಾಘನೆ
ಬೆಂಗಳೂರು: ರಸ್ತೆ ಅಪಘಾತಕ್ಕೀಡಾಗಿ(Accident) ಮೆದುಳು ನಿಷ್ಕ್ರೀಯಗೊಂಡಿದ್ದ ಯುವಕ ಅಂಗಾಂಗ ದಾನಕ್ಕೆ ನಿರ್ಧರಿಸಿರುವ ಕುಟುಂಬಸ್ಥರ ನಡೆಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಕೊಡಗಿನ(Kodagu) ಕುಶಾಲನಗರದಲ್ಲಿ ಪ್ರಜ್ವಲ್ ಎಂಬ 21 ವರ್ಷದ ಯುವಕ ಇತ್ತೀಚೆಗೆ ರಸ್ತೆ ಅಪಘಾತಕ್ಕೀಡಾಗಿ ಮೆದುಳು ನಿಷ್ಕ್ರೀಯವಾಗಿತ್ತು. ಕುಟುಂಬಸ್ಥರು ಅಂಗಾಂಗ ದಾನಕ್ಕೆ ನಿರ್ಧರಿಸಿದ್ದಾರೆ. ಈ ಅಂಗಾಂಗಗಳ ದಾನದಿಂದ ಹಲವು ಜೀವಗಳು ಉಳಿಯುತ್ತವೆ. ಕುಟುಂಬಸ್ಥರ ಈ ಉದಾತ್ತಾ ನಡಾವಳಿಕೆಗೆ ಧನ್ಯವಾದಗಳು ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಸಾವಿನಲ್ಲೂ 6 ಜನಕ್ಕೆ ಜೀವದಾನ ಮಾಡಿದ ಯುವಕ
ಬೆಂಗಳೂರು: ನಗರದಲ್ಲಿ ಅಪಘಾತಕ್ಕೀಡಾಗಿ(Accident) ಮೆದುಳು ನಿಷ್ಕ್ರೀಯಗೊಂಡಿದ್ದ(Brain Dead) ಯುವಕನೊಬ್ಬ ಬಹು ಅಂಗಾಂಗ ದಾನ(Multiple Organ Donation) ಮಾಡುವ ಮೂಲಕ ಆರು ಜನರರಿಗೆ ಜೀವದಾನ ನೀಡಿದ ಘಟನೆ ಜ.28 ರಂದು ನಡೆದಿತ್ತು.
19 ವರ್ಷದ ಕಲಬುರಗಿ ಯುವಕನ ಬ್ರೇನ್ ಡೆಡ್, ಝೀರೋ ಟ್ರಾಫಿಕ್ ಮೂಲಕ ಅಂಗಾಂಗ ರವಾನೆ!
ಕಳೆದ ಎರಡು ವಾರಗಳ ಹಿಂದೆ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಬೆಂಗಳೂರು(Bengaluru) ಮೂಲದ 26 ವರ್ಷದ ಯುವಕ ತುರ್ತು ಚಿಕಿತ್ಸೆಗಾಗಿ(Treatment) ವರ್ತೂರು ರಸ್ತೆಯ ಮಣಿಪಾಲ್ ಆಸ್ಪತ್ರೆಗೆ(Manipal Hospital) ದಾಖಲಿಸಲಾಗಿತ್ತು. ಹಲವಾರು ಪರೀಕ್ಷೆಗಳು ಮತ್ತು ಚಿಕಿತ್ಸೆಗಳ ನಂತರವೂ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಚೇತರಿಕೆ ಕಂಡುಬರಲಿಲ್ಲ. ಹೀಗಾಗಿ ಆ ವ್ಯಕ್ತಿಯ ಮೆದುಳು ನಿಷ್ಕ್ರೀಯವಾಗಿದೆ ಎಂದು ವೈದ್ಯರು(Doctors) ಘೋಷಿಸಿದ್ದರು. ಬಳಿಕ ಅಂಗಾಂಗ ದಾನಕ್ಕೆ ಯುವಕನ ಕುಟುಂಬದ ಸದಸ್ಯರ ಮನವೊಲಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದರು.
‘ಮೃತ ಯುವಕನ ದೇಹದಿಂದ ಆರು ಅಂಗಗಳನ್ನು ತೆಗೆದುಕೊಳ್ಳಲಾಗಿದ್ದು, ಅಂಗಾಂಗ ವೈಫಲ್ಯದಿಂದಾಗಿ ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದವರಿಗೆ ಕಸಿ ಮಾಡಲಾಗಿದೆ. ವ್ಯಕ್ತಿಯ ಹೃದಯವನ್ನು(Heart) ಹಳೇ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಹಾಸ್ಪಿಟಲ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 38 ವರ್ಷದ ಪುರುಷನಿಗೆ, ಯಕೃತ್(Liver) ಅನ್ನು 66 ವರ್ಷದ ಹಿರಿಯ ನಾಗರಿಕರೊಬ್ಬರಿಗೆ, ಒಂದು ಮೂತ್ರ ಪಿಂಡವನ್ನು(Kidney) ವರ್ತೂರು ರಸ್ತೆಯ ಮಣಿಪಾಲ್ ಹಾಸ್ಪಿಟಲ್‌ಗೆ ದಾಖಲಾಗಿದ್ದ 61 ವರ್ಷದ ರೋಗಿಗೆ(Patient), ಮತ್ತೊಂದು ಮೂತ್ರಪಿಂಡವನ್ನು 48 ವರ್ಷದ ಪುರುಷರೊಬ್ಬರಿಗೆ ಅಳವಡಿಸಲಾಗಿದೆ. ಕಾರ್ನಿಯಾಗಳನ್ನು ಶಂಕರ ನೇತ್ರಾಲಯಕ್ಕೆ ಕಳುಸಿಕೊಡಲಾಗಿದ್ದು, ಇಬ್ಬರು ಅಂಧರಿಗೆ ನೀಡಬಹುದು’ ಎಂದು ಮಣಿಪಾಲ್ ಆಸ್ಪತ್ರೆ ವೈದ್ಯರು ತಿಳಿಸಿದ್ದರು.