ನಿಪ್ಪಾಣಿಯಲ್ಲಿ ಪಂಚಮಸಾಲಿ ಮೀಸಲು ಹೋರಾಟ ಶುರು: ಜಯಮೃತ್ಯುಂಜಯ ಸ್ವಾಮೀಜಿ

ಬಿಜೆಪಿ ಸರ್ಕಾರ ನೀಡಿರುವ 2ಡಿ ಮೀಸಲಾತಿ ನ್ಯಾಯಾಲಯದಲ್ಲಿದೆ, ಕಾಂಗ್ರೆಸ್‌ ಸರ್ಕಾರ 2ಎ ಮೀಸಲಾತಿ ನೀಡಲಿ. ಒಂದು ವೇಳೆ ಮೀಸಲಾತಿ ನೀಡದಿದ್ದರೆ ಸರ್ಕಾರ ವಿರುದ್ಧ ಇನ್ನಷ್ಟು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ ಬಸವಜಯಮೃತ್ಯುಂಜಯ ಶ್ರೀಗಳು 

Panchmasali Reservation struggle started in Nippani Says Jayamrutunjaya Swamiji grg

ಬೆಳಗಾವಿ/ಚಿಕ್ಕೋಡಿ(ಸೆ.11): ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹಾಗೂ ಲಿಂಗಾಯತ ಉಪಪಂಗಡಗಳಿಗೆ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗೆ ಶಿಫಾರಸಿಗೆ ಆಗ್ರಹಿಸಿ ಮತ್ತೆ ಹೋರಾಟ ಆರಂಭಗೊಂಡಿದೆ. ಬೆಳಗಾವಿ ಜಿಲ್ಲೆ ನಿಪ್ಪಾಣಿಯ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೂಡಲ ಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿಯವರು ಇಷ್ಟಲಿಂಗ ಪೂಜೆಯನ್ನು ಮಾಡುವ ಪಂಚಮ ಲಿಂಗಾಯತ ಸಮಾಜಕ್ಕೆ 2ಎ ಮೀಸಲಾತಿಗಾಗಿ ಆಗ್ರಹಿಸಿದರು.

ನಿಪ್ಪಾಣಿಯ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಪ್ರತಿಮೆಗೆ ಬಸವಜಯಮೃತ್ಯುಂಜಯ ಶ್ರೀಗಳು ಮಾಲಾರ್ಪಣೆ ಮಾಡಿದರು. ನಂತರ ಅವರು ನಿಪ್ಪಾಣಿಯ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ಆಗಮಿಸಿದರು. ನಂತರ ಛತ್ರಪತಿ ಶಿವಾಜಿ ಮಹಾರಾಜ ಸಾಂಸ್ಕೃತಿಕ ಭವನಕ್ಕೆ ಆಗಮಿಸಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಛತ್ರಪತಿ ಶಿವಾಜಿ ಮಹಾರಾಜ ಸಾಂಸ್ಕೃತಿಕ ಭವನದಲ್ಲಿ ಸಮಾವೇಶ ನಡೆಸಿದರು. ಸಮಾವೇಶ ಬಳಿಕ ರಾಷ್ಟ್ರೀಯ ಹೆದ್ದಾರಿ 4ರವರೆಗೆ ಪಾದಯಾತ್ರೆ ನಡೆಸಿ, ಬಳಿಕ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಮಾಡಿ, ಹೋರಾಟಕ್ಕೆ ಚಾಲನೆ ನೀಡಿದರು.

ಪಂಚಮಸಾಲಿ ಸಮಾಜಕ್ಕೆ ಕೆಲಸ ಮಾಡಿದವರಿಗೆ ಸಚಿವ ಸ್ಥಾನ ಸಿಗಲಿ: ಜಯಮೃತ್ಯುಂಜಯ ಸ್ವಾಮೀಜಿ

ನಂತರ ಮಾತನಾಡಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಸರ್ಕಾರ ಮೀಸಲಾತಿ ನೀಡಬೇಕು. ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರನ್ನು ನಿಯೋಗದೊಂದಿಗೆ ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಬಿಜೆಪಿ ಸರ್ಕಾರ ನೀಡಿರುವ 2ಡಿ ಮೀಸಲಾತಿ ನ್ಯಾಯಾಲಯದಲ್ಲಿದೆ, ಕಾಂಗ್ರೆಸ್‌ ಸರ್ಕಾರ 2ಎ ಮೀಸಲಾತಿ ನೀಡಲಿ. ಒಂದು ವೇಳೆ ಮೀಸಲಾತಿ ನೀಡದಿದ್ದರೆ ಸರ್ಕಾರ ವಿರುದ್ಧ ಇನ್ನಷ್ಟು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈಗಾಗಲೇ ಜಿಲ್ಲೆ ಜಿಲ್ಲೆಯಲ್ಲಿ ಇಷ್ಟಲಿಂಗ ಪೂಜೆ ನಡೆಯುತ್ತಿದೆ. ಒಂದು ವೇಳೆ ಸರ್ಕಾರ ಮೀಸಲಾತಿ ನೀಡದಿದ್ದರೆ ಧಾನಸಭಾದಲ್ಲಿ ನಾವು ಇಷ್ಟಲಿಂಗ ಪೂಜೆ ಮಾಡುತ್ತೇವೆ. ಸರ್ಕಾರ ಪ್ರತಿಭಟನೆಗೆ ಅವಕಾಶ ಕಲ್ಪಿಸದೇ ನಮಗೆ ಮೀಸಲಾತಿ ನೀಡಬೇಕು. ಯಾವುದೇ ಸರ್ಕಾರದ ವಿರುದ್ಧ ನಮ್ಮ ಪ್ರತಿಭಟನೆ ಅಲ್ಲ. ಪಂಚಮಸಾಲಿ ಮೀಸಲಾತಿಗೋಸ್ಕರ ನಮ್ಮ ಪ್ರತಿಭಟನೆ ಎಂದು ಹೇಳಿದರು.

ಹೋರಾಟದಲ್ಲಿ ಭಾಗಿಯಾಗಿದ್ದ ಶಾಸಕ ವಿನಯ ಕುಲಕರ್ಣಿ ಮಾತನಾಡಿ, ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆರನೇ ಹಂತದ ಹೋರಾಟ ಶುರುವಾಗಿದೆ. ಆದರೆ, ಈ ಹೋರಾಟದಲ್ಲಿ ಭಾಗವಹಿಸಿದ ಸಮುದಾಯದ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹಲವಾರು ನಮ್ಮ ಶಾಸಕರು ಈ ಸಮಾಜದ ಲಾಭ ಪಡೆದಿದ್ದಾರೆ. ಸಮಾಜ ಕಷ್ಟದಲ್ಲಿದ್ದಾಗ ಎಲ್ಲಾ ಶಾಸಕರು ಹೋರಾಟದಲ್ಲಿ ಬಂದು ನಿಲ್ಲಬೇಕು. ಸಮಾಜದ ವೋಚ್‌ ಪಡೆಯುತ್ತೀರಿ. ವೋಚ್‌ ಹಾಕಿಸಿಕೊಳ್ಳುವ ಮುನ್ನ ಈ ವೇದಿಕೆ ಲೈನ… ಸಾಲುತ್ತಿರಲಿಲ್ಲ. ಆದರೆ, ಇವತ್ತು ಎಲ್ಲರೂ ಎಲ್ಲಿದ್ದಾರೆ? ಇವತ್ತು ಎಲ್ಲರೂ ಏಕೆ ಬಂದಿಲ್ಲ? ಇದನ್ನು ನೋಡಿದರೆ ತುಂಬಾ ನೋವು ಅನಿಸುತ್ತದೆ. ಸಮಾಜದ ಬಗ್ಗೆ ಕಳಕಳಿ ಇರಬೇಕು ಎಂದರು.

ಇವತ್ತು ನಾನು ನನ್ನ ಸಮಾಜ ಎಂದೂ ಬಂದಿಲ್ಲ. ಶಾಸಕರನ್ನು ಸುಮ್ಮನೆ ಮಾಡಿರಲ್ಲ, ಕಷ್ಟದಲ್ಲಿ ಇದ್ದವರ ಜೊತೆ ನಿಲ್ಲಲು ಶಾಸಕರಾಗಿರುತ್ತೇವೆ. ನಾನು ನನ್ನ ಮನೆಯ ಸಲುವಾಗಿ ಹೆಂಡತಿ ಮಕ್ಕಳ ಸಲುವಾಗಿ ಶಾಸಕನಾಗಿಲ್ಲ. ಯಾವುದೇ ಸಮಾಜ ಕಷ್ಟದಲ್ಲಿದ್ದರೂ ಹೋಗಿ ನಿಲ್ಲುವುದು ನಮ್ಮ ಧರ್ಮ. ನಿಪ್ಪಾಣಿ ಭಾಗದಲ್ಲಿ ನಮ್ಮ ಸಮಾಜದ ಸಂಘಟನೆ ಇರಲಿಲ್ಲ. ಈ ಭಾಗದ ಮುಖಂಡರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಕೇವಲ ಪಂಚಮಸಾಲಿ ಸಮುದಾಯ ಮೀಸಲಾತಿಗೆ ಹೋರಾಟವಲ್ಲ. ಉಳಿದ ಲಿಂಗಾಯತ ಚತುರ್ಥ, ಮಲೆಗೌಡ ಸೇರಿ ಉಳಿದ ಪಂಗಡಗಳ ಮೀಸಲಾತಿಗೆ ಹೋರಾಟವಾಗಿದೆ. ಕೂಡಲಸಂಗಮ ಶ್ರೀಗಳ ನೇತೃತ್ವದಲ್ಲಿ ನಿಜವಾದ ಹೋರಾಟ ಶುರುವಾಗಿದೆ. ಒಬ್ಬ ಶಾಸಕನಾಗಿ ಕೆಲಸ ಮಾಡುವ ಸಂದರ್ಭದಲ್ಲಿ ನಮ್ಮ ಸಮಾಜದ ವಿದ್ಯಾರ್ಥಿಗಳಿಗೆ ಹಾಸ್ಟೆಲ… ಕೊಡಿಸಲು ಸಾಧ್ಯವಾಗಿರಲಿಲ್ಲ. ನೌಕರಿಯಲ್ಲಿಯೂ ನಮ್ಮ ಸಮಾಜದ ಯುವಕರಿಗೆ ತಾರತಮ್ಯವಾಗುತ್ತಿದೆ. ಲಿಂಗಾಯತ ಸಮುದಾಯದ 99 ಉಪಪಂಗಡಗಳಿಗೆ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಸಿಗಬೇಕಿದೆ ಎಂದು ಹೇಳಿದರು.

ಪಂಚಮಸಾಲಿ ಮೀಸಲಾತಿಗೆ ಮತ್ತೆ ಹೋರಾಟ: ಬಸವಜಯ ಮೃತ್ಯುಂಜಯ ಸ್ವಾಮೀಜಿ

ಮುಖ್ಯಮಂತ್ರಿ ಗಮನ ಸೆಳೆದು ತಕ್ಷಣವೇ ಒಬಿಸಿ ಮೀಸಲಾತಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸಿಗೆ ಮನವಿ ಮಾಡಲಾಗುವುದು. ಮೊನ್ನೆ ಕಾಂಗ್ರೆಸ್‌ ಸಭೆಯಲ್ಲಿಯೂ ನಾನು ಹೇಳಿದ್ದೇನೆ. ಶ್ರೀಗಳು ಲಿಂಗ ಪೂಜೆ ಮಾಡಿ ಸರ್ಕಾರಕ್ಕೆ ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಮಟ್ಟದಲ್ಲಿ ನಾವು ಹೋರಾಟಮಾಡಲು ಸಿದ್ಧರಿದ್ದೇವೆ ಎಂದು ಹೇಳಿದರು.

ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ವಿಧಾನ ಪರಿಷತ ಸದಸ್ಯ ಪ್ರಕಾಶ ಹುಕ್ಕೇರಿ, ಶಾಸಕ ವಿನಯ ಕುಲಕರ್ಣಿ, ಮಾಜಿ ಸಚಿವ ಶಶಿಕಾಂತ ನಾಯಿಕ, ಧರೆಪ್ಪಾ ಟಕ್ಕನವರ, ಆರ್‍.ಕೆ.ಪಾಟೀಲ, ರಮೇಶ ಪಾಟೀಲ, ಅಂಬರೀಶ ನಾಗನೂರ, ಮಹಾಲಿಂಗ ಕೋಟಿವಾಲೆ,ಕಿರಣ ಪಾಂಗೇರೆ ಇನ್ನಿತರರು ಇದ್ದರು.

Latest Videos
Follow Us:
Download App:
  • android
  • ios