ಪಂಚಮಸಾಲಿಗೆ ಮೀಸಲಾತಿ ಕೊಡದಿದ್ದರೆ ಬಿಜೆಪಿಗೆ ದೊಡ್ಡ ನಷ್ಟ: ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ

ಮಾಧ್ಯಮದ ವರದಿ ಪ್ರಕಾರ ಪಂಚಮಸಾಲಿ ಸಮುದಾಯಕ್ಕೆ ಮಿಸಲಾತಿ ಕೊಡದಿದ್ದರೆ ಬಿಜೆಪಿಗೆ ದೊಡ್ಡಮಟ್ಟದಲ್ಲೇ ಹಿನ್ನಡೆಯಾಗುತ್ತದೆ ಅಂದಿದೆ. 57 ಲಕ್ಷ ಜನಸಂಖ್ಯೆ ‌ಪಂಚಮಸಾಲಿ ಸಮುದಾಯದವರಿದ್ದಾರೆ. ಸರ್ಕಾರ ಮೀಸಲಾತಿ ಕೊಡದಿದ್ದಲ್ಲಿ ನಷ್ಟವಾಗುವುದಂತೂ ಯಾರಿಂದಲೂ ತಪ್ಪಿಸಲಾಗಲ್ಲ ಎಂದರು. ಪಂಚಮಸಾಲಿ ಜಗದ್ಗುರು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು. 

Panchamasali reservation issue jayamrityunjayaswamiji statement at shivvamogga rav

ಶಿವಮೊಗ್ಗ (ಫೆ.13) : ಪಂಚಮಸಾಲಿಗೆ ಮೀಸಲಾತಿ ಕೊಡದಿದ್ದರೆ ಬಿಜೆಪಿ ನಷ್ಟವಾಗಲಿದೆ ಪಂಚಮಸಾಲಿ ಜಗದ್ಗುರು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು. 

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಪಂಚಮಸಾಲಿ ಸಮುದಾಯ(Panchamasali community)ಕ್ಕೆ ಮೀಸಲಾತಿ(reservation) ಕೊಡುವಂತೆ ಕಳೆದ 30 ದಿನದಿಂದ ಫ್ರೀಡಂ ಪಾರ್ಕ್‌(Freedom park)ನಲ್ಲಿ ಹೋರಾಟ ಮಾಡುತ್ತಿದ್ದೇವೆ. ಇದು ಇಡೀ ದೇಶದ ಗಮನ ಸೆಳೆದ ಹೋರಾಟವಾಗಿದೆ. ಸರ್ಕಾರ ಮೀಸಲಾತಿ ಕೊಡಲು ಮೀನಾಮೇಷ ಎಣಿಸುತ್ತಿದೆ. ಇದು ಮುಂದಿನ ಚುನಾವಣೆಯಲ್ಲಿ ಬಿಜೆಪಿಗೇ ನಷ್ಟವಾಗಲಿದೆ ಎಂದರು.

Panchamasali Reservation: ಕೇಂದ್ರ ಭರವಸೆ ನೀಡಿದರೆ ಪ್ರತಿಭಟನೆ ವಾಪಸ್: ಜಯ ಮೃತ್ಯುಂಜಯ ಶ್ರೀಗಳು

ಪಂಚಮಸಾಲಿ ಸಮುದಾಯಕ್ಕೆ ಮಿಸಲಾತಿ ಕೊಡಲು ಹಿಂದೇಟು ಹಾಕಿದಲ್ಲಿ ಕನಿಷ್ಟ 70 ಕ್ಷೇತ್ರದಲ್ಲಿ ಸೋಲುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿವೆ. ಸರ್ಕಾರ ಮೀಸಲಾತಿ ನೀಡುತ್ತದೆ ಎಂದು ನಮ್ಮ ಸಮುದಾಯ ಎರಡು ವರ್ಷದಿಂದ ಹೋರಾಟ ಮಾಡುತ್ತಿದ್ದೇವೆ. ಸಿಎಂ ಬಸವರಾಜ ಬೊಮ್ಮಾಯಿ(CM Basavaraj bommai) ಆಯೋಗದ ವರದಿ ಬಂದ ಬಳಿಕ ಮೀಸಲಾತಿ ಎಂದು ಹೇಳಿದ್ದರು. ಆದರೆ ಮೀಸಲಾತಿ ವರದಿ ಮುಂದಿಟ್ಟುಕೊಂಡು ಕಾಲಹರಣ ಮಾಡುತ್ತಿದ್ದಾರೆ ಎಂದು ದೂರಿದರು.

ಸಿಎಂ ಬಸವರಾಜ ಬೊಮ್ಮಾಯಿ ತಾಯಿ‌ ಮೇಲೆ ಆಣೆ ಮಾಡಿ ಹೇಳ್ತೇನೆ ಮೀಸಲಾತಿ ಕೊಡುತ್ತೇನೆ ಹೋರಾಟ ನಿಲ್ಲಿಸಿ ಮನೆಗೆ ಹೋಗಿ ಎಂದು 29ನೇ ತಾರೀಖಿನಂದು ಹೇಳಿದ್ದರು. ಆದರೆ ಕೊನೆಗೆ 2D ಮೀಸಲಾತಿ(2D reservation) ಎಂದು ಅಂತ ಮಾತು ಬದಲಿಸಿದರು. ಈಗ ನಮ್ಮ ಸತ್ಯಾಗ್ರಹ ಶುರು ಆಗಿ, 30 ದಿನ ಕಳೆದಿದೆ. ಆದರೆ ಸರ್ಕಾರದ ಯಾರೊಬ್ಬರೂ ತುಟಿಕ್ ಪಿಟಿಕ್ ಅನ್ನಲಿಲ್ಲ. ನಮ್ಮ ಸಮುದಾಯ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಧ್ಯಮದ ವರದಿ ಪ್ರಕಾರ ಪಂಚಮಸಾಲಿ ಸಮುದಾಯಕ್ಕೆ ಮಿಸಲಾತಿ ಕೊಡದಿದ್ದರೆ ಬಿಜೆಪಿಗೆ ದೊಡ್ಡಮಟ್ಟದಲ್ಲೇ ಹಿನ್ನಡೆಯಾಗುತ್ತದೆ ಅಂದಿದೆ. 57 ಲಕ್ಷ ಜನಸಂಖ್ಯೆ ‌ಪಂಚಮಸಾಲಿ ಸಮುದಾಯದವರಿದ್ದಾರೆ. ಸರ್ಕಾರ ಮೀಸಲಾತಿ ಕೊಡದಿದ್ದಲ್ಲಿ ನಷ್ಟವಾಗುವುದಂತೂ ಯಾರಿಂದಲೂ ತಪ್ಪಿಸಲಾಗಲ್ಲ ಎಂದರು.

ಪಂಚಮಸಾಲಿಗಳ ಮೀಸಲಾತಿ ಸಂಬಂಧ ಸೃಷ್ಟಿಯಾಗಿರುವ ಜಟಿಲ ಸಮಸ್ಯೆಯನ್ನು ಸರಿಪಡಿಸಿ ಸಾಮಾಜಿಕ ನ್ಯಾಯ ಕೊಡಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಒಂದು‌ ತಿಂಗಳ ಒಳಗೆ ಸಮುದಾಯಕ್ಕೆ ‌ನ್ಯಾಯ‌ಕೊಡಬೇಕು. ಇಲ್ಲದಿದ್ದರೆ ‌ಹೋರಾಟವನ್ನು‌ ಮತ್ತಷ್ಟು ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಕೆ ಕೊಟ್ಟರು.

ಮೀಸಲಾತಿ ಸಂಬಂಧ ನಾಳೆ ನಾಡಿದ್ದು ಸಭೆ ಕರೆದು ಮುಂದಿನ‌ ಹೋರಾಟದ ರೂಪುರೇಷೆ ತಯಾರಿಸುತ್ತೇವೆ. ಪಂಚಮಸಾಲಿ ಮೀಸಲಾತಿಗೆ ನಡೆಯುತ್ತಿರುವ ಹೋರಾಟ ಕೇವಲ ಹೊರಗಿನ ಹೋರಾಟವಷ್ಟೇ ಅಲ್ಲ, ಅಧಿವೇಶನದಲ್ಲಿ‌ ಶಾಸಕರು, ಸಚಿವರು ಬೆಂಬಲ‌ ಸೂಚಿಸಬೇಕು. ಸಮುದಾಯದ ಪರ ಧ್ವನಿ ಎತ್ತಬೇಕು. ಇಲ್ಲದಿದ್ದರೇ‌ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸುತ್ತೇವೆ ಎಂದು ಖಡಕ್ ಆಗಿ ಎಚ್ಚರಿಕೆ ನೀಡಿದರು.

 ಶಿವಮೊಗ್ಗ ವಿಮಾನ ನಿಲ್ದಾಣ ಪ್ರಸ್ತಾಪಿಸಿದ ಸ್ವಾಮೀಜಿ ಅವರು,  ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಹೆಸರಿಡೋದ್ರ ಬಗ್ಗೆ ಚರ್ಚೆ ನಡೀತಿದೆ. ಕ್ರಾಂತಿಕಾರಿ ಬಸವಣ್ಣನವರ ಹೆಸರಿಡಿಲು ಮೃತ್ಯುಂಜಯ ಸ್ವಾಮೀಜಿ ಮನವಿ ಮಾಡಿದರು.

ಬಿಜೆಪಿಗೆ ಶೇ.80 ರಷ್ಟು ಬೆಂಬಲ ನಮ್ಮ ಸಮುದಾಯವೇ ನೀಡಿದೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ವಿಶ್ವಗುರು ಬಸವಣ್ಣನವರ ಹೆಸರು ಇದುವರೆಗೂ ಯಾವ ವಿಮಾನ ನಿಲ್ದಾಣಕ್ಕೂ ಇಟ್ಟಿಲ್ಲ. ಅಕ್ಕಮಹಾದೇವಿ, ಅಲ್ಲಮಪ್ರಭುರಂತಹ ಹೆಸ್ರುಗಳು ಇಟ್ಟಿಲ್ಲ. ಇವರಲ್ಲಿ ಯಾರ ಹೆಸರಾದರೂ ಶಿವಮೊಗ್ಗ ನಿಲ್ದಾಣಕ್ಕೆ ಹೆಸರಿಡುವಂತೆ ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಮನವಿ ಮಾಡಿದರು.

Latest Videos
Follow Us:
Download App:
  • android
  • ios