ಗೂಬೆಯನ್ನೇ ಬಂಡವಾಳ ಮಾಡಿಕೊಂಡು ರಾಜಕಾರಣಿಗಳು ಹಾಗೂ ಶ್ರೀಮಂತರನ್ನು  ವಂಚಿಸಿ ಹಣ ದೋಚುತ್ತಿದ್ದ ಕುಖ್ಯಾತ ವಂಚಕರ ತಂಡವನ್ನ  ಸುವರ್ಣ ನ್ಯೂಸ್​​​ ಕವರ್ ಸ್ಟೋರಿ ತಂಡ ಬಯಲಿಗೆಳೆದಿದೆ. ಆದ್ರೆ ಈ ಪ್ರಕರಣದಲ್ಲಿ ಹಾಲಿ ಸಚಿವರೊಬ್ಬರ ಹೆಸರು ಕೇಳಿಬಂದಿದೆ.

ತುಮಕೂರು, [ಡಿ.08]: ಜನರು ಅಪಶಕುನ ಎಂದು ನಂಬುವ ಗೂಬೆಯನ್ನೇ ಬಂಡವಾಳ ಮಾಡಿಕೊಂಡು ರಾಜಕಾರಣಿಗಳು ಹಾಗೂ ಶ್ರೀಮಂತರನ್ನು ವಂಚಿಸಿ ಹಣ ದೋಚುತ್ತಿದ್ದ ಕುಖ್ಯಾತ ವಂಚಕರ ತಂಡವನ್ನ ಸುವರ್ಣ ನ್ಯೂಸ್​​​ ಕವರ್ ಸ್ಟೋರಿ ತಂಡ ಬಯಲಿಗೆಳೆದಿದೆ. 

ಐದು ಬೆರಳುಳ್ಳ ವಿಶೇಷ ಗೂಬೆಯನ್ನ ಎರಡು ಲಕ್ಷ ರೂಪಾಯಿಗೆ ಮಾರುತಿದ್ದ ಖದೀಮರನ್ನ ಕೊರಟಗೆರೆಯ ಕಾಶಾಪುರದ ಬಳಿ ತಮ್ಮ ತಂಡ ರೆಡ್​ ಹ್ಯಾಂಡ್​ ಆಗಿ ಸೆರೆಹಿಡಿದಿದೆ.

ಇನ್ನು ಗೂಬೆ ಗ್ಯಾಂಗ್ ತನಿಖೆ ವೇಳೆ ರಾಜ್ಯದ ಕೃಷಿ ಸಚಿವ ಶಿವಶಂಕರ್​ ರೆಡ್ಡಿ ಅವರು ಸಹ ಗೂಬೆಯನ್ನ ಖರೀದಿಸಿಯೇ ಗೆದ್ದಿದ್ದು ಎಂದು ಬಂಧಿತ ತಿಮ್ಮ ಅಲಿಯಾಸ್ ಆನಂದ್, ದೀಪು ಮತ್ತು ಜಯಕುಮಾರ್ ಹೇಳಿಕೊಂಡಿದ್ದು, ಗೂಬೆ ಗ್ಯಾಂಗ್​ ಗೂ ಹಾಲಿ ಸಚಿವರಿಗೂ ಲಿಂಕ್ ಇದ್ಯಾ​ ಎನ್ನುವ ಅನುಮಾನಗಳು ಶುರುವಾಗಿವೆ.

ಈ ಪ್ರಕರಣದ ಕುರಿತು ಸುವರ್ಣನ್ಯೂಸ್​ ಸಚಿವ ಶಿವಶಂಕರ್​ ರೆಡ್ಡಿ ಅವರ ಬಳಿ ಹೋಗಿ ಕೇಳಿದ್ರೆ, ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, ಪ್ರಶ್ನೆ ಕೇಳುತ್ತಿದ್ದಂತೆ ಅದು ಬೇಡ ಎಂದು ಗಾಬರಿಯಿಂದ ಕಾರು ಹತ್ತಿ ನಿರ್ಗಮಿಸಿದ್ದಾರೆ.

ಒಟ್ಟಿನಲ್ಲಿ ಈ ಗೂಬೆ ಗ್ಯಾಂಗ್ ಸದಸ್ಯನ ಹೇಳಿಕೆ ಈಗ ಹಾಲಿ ಸಚಿವರ ಕುತ್ತಿಗೆಗೆ ಬಂದಿದ್ದು, ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ರೀತಿ ಪಡೆದುಕೊಳ್ಳುತ್ತೆ ಎನ್ನುವುದನ್ನ ಕಾದುನೋಡಬೇಕಿದೆ.