ಬೆಂಗಳೂರು(ಜು.26): ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮೂರು ಸಾವಿರಕ್ಕೂ ಅಧಿಕ ಸೊಂಕಿತರ ಮೂಲವೇ ಪತ್ತೆಯಾಗಿಲ್ಲ ಎಂಬ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ.

ಮೂರು ಸಾವಿರಕ್ಕೂ ಹೆಚ್ಚು ಜನರು ಸೋಂಕಿತರ ಮೂಲವೇ ತಿಳಿದಿಲ್ಲ. ಅವರ ಮೂಲ ಕಂಡುಹಿಡಿಯಲು ಪ್ರಯತ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರಲ್ಲಿ ಕೊರೋನಾ ಸೋಂಕಿತ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ 14 ದಿನಗಳಲ್ಲಿ 16 ಸಾವಿರದಿಂದ ಸುಮಾರು 27 ಸಾವಿರದಷ್ಟು ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ.

ಕೋವಿಡ್ 19: ಎಲ್ಲಾ ಲೆಕ್ಕಾಚಾರವನ್ನು ಉಲ್ಟಾ ಮಾಡಿದ ಮಹಾಮಾರಿ

ಕರ್ನಾಟಕದಲ್ಲಿ ದೃಢಪಡುತ್ತಿರುವ ಕೊರೋನಾ ಪ್ರಕರಣಗಳ ಅರ್ಧದಷ್ಟು ಪ್ರಕರಣಗಳು ಬೆಂಗಳೂರಿನಲ್ಲಿಯೇ ಪಯತ್ತೆಯಾಗುತ್ತಿರುವುದು ಆತಂಕಕಾರಿ ವಿಚಾರ. ತಪ್ಪಿಹೋಗುತ್ತಿರುವ ಕೊರೋನಾ ಸೋಂಕಿತರನ್ನು ಎಷ್ಟೇ ಪ್ರಯತ್ನಿಸಿದರೂ ಪತ್ತೆ ಹಚ್ಚಲಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರ ಸಹಾದಿಂದ ಸ್ವಲ್ಪ ಜನರ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ. ಆದರೆ 3,338 ಕೊರೋನಾ ಸೋಂಕಿತರ ಮೂಲ ಇನ್ನೂ ದೃಢಪಟ್ಟಿಲ್ಲ. ಕೆಲವರು ಕೊರೋನಾ ಟೆಸ್ಟ್ ಮಾಡಿಸುವ ಸಂದರ್ಭ ತಪ್ಪು ವಿಳಾಸ, ತಪ್ಪು ಮೊಬೈಕ್ ಸಂಖ್ಯೆ ನೀಡಿದ್ದಾರೆ. ಕೊರೋನಾ ಫಲಿತಾಂಶ ಕೈ ಸೇರಿದ ಮೇಲೆ ಸೋಂಕಿತರು ಕಾಣೆಯಾಗುತ್ತಿದ್ದಾರೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಎನ್. ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಗೊರವನಹಳ್ಳಿ ಲಕ್ಷ್ಮಿ ದೇವಸ್ಥಾನದ ಸಿಬ್ಬಂದಿಗೆ ಕೊರೋನಾ..!

ಅಧಿಕಾರಿಗಳು ಸೋಂಕಿತರನ್ನು ಪತ್ತೆ ಹಚ್ಚಲು ಮೂಲವೇ ಸಿಗುತ್ತಿಲ್ಲ ಎಂದು ಕೈಚೆಲ್ಲುತ್ತಿದ್ದಾರೆ. ಅವರು ಸ್ವತಃ ಕ್ವಾರೆಂಟೈನ್ ಆಗಿದ್ದಾರಾ ಎಂಬ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲ. ಪತ್ತೆಯಾದ ಪ್ರತಿ ಸೋಂಕಿತರ ಮೂಲವೂ ಇದೆ, ಅವರನ್ನು ಸಂಪರ್ಕಿಸಲೂ ಸಾಧ್ಯವಾಗುತ್ತದೆ ಎಂದುದನ್ನು ದೃಢಪಡಿಸಿಕೊಳ್ಳಬೇಕಿದೆ. ಹಾಗಾಗಿ ನಾವು ಸೋಂಕಿತರ ಮೂಲ ಪತ್ತೆಯನ್ನೇ ಗುರಿಯಾಗಿಸಿಕೊಂಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಬೇರೆ ಬೇರೆ ಇಲಾಖೆಗಳ ಶೇ.75ರಷ್ಟು ಸಿಬ್ಬಂದಿಗೆ ಕೊರೋನಾ ಡ್ಯೂಟಿ

ಕರ್ನಾಟಕದಲ್ಲಿ ಶನಿವಾರ 5 ಸಾವಿರಕ್ಕೂ ಹೆಚ್ಚು ಕೊರೋನಾ ಸೋಂಕಿತರು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 90 ಸಾವಿರ ತಲುಪಿದೆ. ಬೆಂಗಳೂರಲ್ಲಿ 2,036 ಸೋಂಕಿತರು ಪತ್ತೆಯಾಗಿದ್ದು, ಒಟ್ಟು 43,503 ಸೋಂಕಿತರು ಪತ್ತೆಯಾಗಿದ್ದಾರೆ.