ಹೊನ್ನಾವರ(ಜೂ.09): ಕರಾವಳಿ ಜಿಲ್ಲೆಯ ಬಹುತೇಕ ಎಲ್ಲ ಬಂದರು ಪ್ರದೇಶ, ಕಡಲ ಕೊರೆತಕ್ಕೆ ತುತ್ತಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ರಾಜ್ಯ ಮೀನುಗಾರಿಕಾ ಸಚಿವ ಎಸ್‌. ಅಂಗಾರ ಅವರು ಹೊನ್ನಾವರ ಬಂದರಿಗೆ ಬಾರದೇ ತೆರಳಿದ್ದು, ಸ್ಥಳೀಯ ಮೀನುಗಾರರಿಗೆ ತೀವ್ರ ನಿರಾಸೆ ಉಂಟು ಮಾಡಿದೆ. 

ಸಚಿವರ ಸ್ವಾಗತಕ್ಕೆ ತಂದಿದ್ದ ಹೂ ಮಾಲೆ, ಹೂಗುಚ್ಛವನ್ನು ಕಡಲಿಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಸಚಿವರಿಗೆ ನೀಡಬೇಕೆಂದು ಸಿದ್ಧಪಡಿಸಿಕೊಂಡಿದ್ದ ಮನವಿ ಪತ್ರವನ್ನೂ ಕಡಲಿಗೆ ಅರ್ಪಿಸಿದರು. ಕಾಸರಗೋಡಿನಲ್ಲಿ ಖಾಸಗಿ ಬಂದರು ಸ್ಥಾಪನೆ ಕುರಿತಂತೆ ವಿವಾದ ನಡೆಯುತ್ತಿದ್ದು, ಇದಕ್ಕೆ ಉತ್ತರಿಸಬೇಕಾಗುತ್ತದೆ. ಮೀನುಗಾರರಿಗೆ ಸಮಜಾಯಿಷಿ ನೀಡಬೇಕಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಸಚಿವರು ಇದೇ ಮಾರ್ಗದಲ್ಲಿ ತೆರಳಿದರೂ ಬಂದರಿಗೆ ಭೇಟಿ ನೀಡಲಿಲ್ಲ ಎಂದು ಮೀನುಗಾರರು ದೂರಿದರು.

ಮಲೆನಾಡಿನಲ್ಲಿ ಎಲ್ಲೆಲ್ಲೂ ಈಗ ಹಳದಿ ಕಪ್ಪೆಗಳು!

ಹೊನ್ನಾವರ, ಕಾಸರಗೋಡು ಬಂದರು ಪ್ರದೇಶಕ್ಕೆ ಮಂಗಳವಾರ ಬೆಳಗ್ಗೆ 10.30ಕ್ಕೆ ಸಚಿವರ ಭೇಟಿ ನಿಗದಿ ಆಗಿತ್ತು. ಆದಾಗ್ಯೂ ಸಚಿವರು ಭೇಟಿ ನೀಡದೆ ಇರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.