Asianet Suvarna News Asianet Suvarna News

Wind Turbine in Kappatagudda: ಕಪ್ಪತಗುಡ್ಡಕ್ಕೆ ‘ಪವನಶಕ್ತಿ’ ಮಾರಕ: ಪರಿಸರವಾದಿಗಳ ಆಕ್ರೋಶ

*  ಅರಣ್ಯ ಇಲಾಖೆ ಅಧಿಕಾರಿಗಳ ಮೌನ
*  ಮಳೆಯ ಮಾರುತಕ್ಕೆ ಕಪ್ಪತ್ತಗುಡ್ಡದ ಕೊಡುಗೆ ಅನನ್ಯ
*  ಕಪ್ಪತಗುಡ್ಡವನ್ನು 2017ರಲ್ಲಿ ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಣೆ 
 

Outrage of Environmentalists For Wind Turbine at Kappatagudda in Gadag grg
Author
Bengaluru, First Published Dec 13, 2021, 1:44 PM IST

ರಿಯಾಜ್‌ ಅಹಮ್ಮದ್‌ ಎಂ. ದೊಡ್ಡಮನಿ

ಗದಗ(ಡಿ.13):  ಉತ್ತರ ಕರ್ನಾಟಕದ(North Karnataka) ಸಹ್ಯಾದ್ರಿ, ಔಷಧ ಸಸ್ಯಗಳ ಕಾಶಿ, ಶುದ್ಧ ಗಾಳಿಯ ಕೇಂದ್ರ ಎನಿಸಿದ ಕಪ್ಪತ್ತಗುಡ್ಡದಲ್ಲಿ(Kappatagudda) ಕಳೆದ ವರ್ಷ ಅಗ್ನಿ(Fire) ದುರಂತಗಳು ಸಂಭವಿಸಿ ಸಾಕಷ್ಟು ಹಾನಿಯಾಗಿದೆ. ಜತೆಗೆ ಕಪ್ಪತಗುಡ್ಡದಲ್ಲಿ ಅಳವಡಿಸಿರುವ ಗಾಳಿಯಂತ್ರಗಳಿಂದ ಪರಿಸರಕ್ಕೆ ಭಾರೀ ಹೊಡೆತ ಬಿದ್ದಿರುವುದು ಪರಿಸರವಾದಿಗಳ(Environmentalists) ಕೆಂಗಣ್ಣಿಗೆ ಗುರಿಯಾಗಿದೆ.

ಕಪ್ಪತಗುಡ್ಡದಲ್ಲಿ ಗಾಳಿಯಂತ್ರಗಳ(Wind Turbine) ಅಳವಡಿಕೆಯಿಂದಾಗಿ ಕಪ್ಪತ್ತಗುಡ್ಡದ ಮೇಲ್ತುದಿಯವರೆಗೆ ಬೃಹತ್‌ ರಸ್ತೆಗಳು ನಿರ್ಮಾಣವಾಗಿವೆ. ಇದರಿಂದ ಲಕ್ಷಾಂತರ ಔಷಧೀಯ ಗಿಡಗಳು(Pharmaceutical Plants) ಮಾರಣಹೋಮವಾಗಿವೆ. ಇದು ಸಂಭವಿಸಿ 30 ವರ್ಷ ಗತಿಸಿದೆ. ಗಾಳಿಯಂತ್ರ ಅಳವಡಿಸಿದ ಕಂಪನಿಗಳಿಂದ ಅಷ್ಟೇ ಪ್ರಮಾಣದಲ್ಲಿ ಗಿಡಗಳನ್ನು ಬೆಳೆಸಬೇಕಾಗಿತ್ತು. ಆದರೆ ಯಾವುದೇ ಗಿಡ ನೆಡದೇ ಸಮಯ ವ್ಯರ್ಥಪಡಿಸಿವೆ. ಈ ಬಗ್ಗೆ ಯಾವ ಅಧಿಕಾರಿಗಳೂ ವಿಚಾರಿಸದೇ ಇರುವುದಕ್ಕೆ ಪರಿಸರವಾದಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಕಪ್ಪತಗುಡ್ಡವ ಆಯುರ್ವೇದ ಔಷಧಿಗಳ ತಾಣ'

ಕಪ್ಪತಗುಡ್ಡದಲ್ಲಿ ಹಲವು ಕಂಪನಿಗಳು ಗಾಳಿಯಂತ್ರ ಅಳವಡಿಸಿವೆ. ಈ ಅವಧಿ ಮೀರುತ್ತಾ ಬಂದಿದೆ. ಪುನಃ ಸರ್ಕಾರ ಗಾಳಿಯಂತ್ರಗಳ ಅಳವಡಿಕೆಗೆಯಾಗಲೀ ಗಾಳಿಯಂತ್ರಗಳ ನವೀಕೃತ ಸಮಯಕ್ಕಾಗಲೀ ಅವಕಾಶ ಕೊಡಬಾರದು. ಕಪ್ಪತಗುಡ್ಡದಿಂದ ಅವುಗಳ ತೆರವಿಗೆ ಕ್ರಮ ಕೈಗೊಳ್ಳಬೇಕು ಎನ್ನುವುದು ಆ ಭಾಗದ ಪರಿಸರ ಸಂರಕ್ಷಣಾ ಹೋರಾಟ ಸಮಿತಿಗಳ ಅಭಿಪ್ರಾಯ.

ಮಳೆ ಪ್ರಮಾಣ ಕುಸಿತ:

ಕಪ್ಪತಗುಡ್ಡಕ್ಕೆ ಹೊಂದಿಕೊಂಡಂತಿರುವ ಧಾರವಾಡ(Dharwad), ಕೊಪ್ಪಳ(Koppal), ಹಾವೇರಿ(Haveri) ಜಿಲ್ಲೆಗಳ ಮಳೆಯ ಮಾರುತಕ್ಕೆ ಕಪ್ಪತ್ತಗುಡ್ಡದ ಕೊಡುಗೆ ಅನನ್ಯ. ಈ ಭಾಗದಲ್ಲಿ ಸತತ ಮಳೆ(Rain) ಸುರಿಯುತ್ತಾ ಭೂಮಿಯನ್ನು ಸಾಕಷ್ಟುತಂಪುಗೊಳಿಸಿದೆ. ಇದರಿಂದ ಹರಿದು ಬರುವ ನೀರಿನ ಜತೆ ಫಲವತ್ತಾದ ಮಣ್ಣಿನಿಂದ ಕೃಷಿಗೆ(Agriculture) ಲಾಭದಾಯಕವಾಗಿತ್ತು. ಇನ್ನು ಗುಡ್ಡದಿಂದ ಹರಿಯುವ ನೀರು ಸುತ್ತಮುತ್ತಲಿನ ಗ್ರಾಮಗಳ ಕೆರೆಗಳು ಭರ್ತಿಯಾಗುತ್ತಿತ್ತು. ಬೆಳೆಗಳು ಸಮೃದ್ಧವಾಗಿ ಬೆಳೆಯಲು ಸಾಧ್ಯವಾಗುತ್ತಿತ್ತು. ಆದರೆ ಬೃಹತ್‌ ಆಕಾರದ ನೂರಾರು ಗಾಳಿಯಂತ್ರಗಳ ಅಳವಡಿಕೆಯ ನಂತರ ಮಳೆಯ ಮೋಡಗಳು ಚದುರುತ್ತಿವೆ.

ಇದರಿಂದ ಪ್ರತಿಕೂಲ ವಾತಾವರಣ ನಿರ್ಮಾಣವಾಗಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ. ನಿರಂತರವಾಗಿ ಮಳೆ ಪ್ರಮಾಣ ಇಳಿಮುಖವಾಗುತ್ತಿದೆ. ಇದರಿಂದ ಕಪ್ಪತಗುಡ್ಡದ ಕೆಲ ಸಸ್ಯ ಸಂಪತ್ತು ಕಳೆಗುಂದಿವೆ. ಈ ಭಾಗದ ರೈತರಿಗೆ ಸರಿಯಾದ ಸಮಯಕ್ಕೆ ಮಳೆಯಾಗದೆ ರೈತರು(Farmers) ಬೆಳೆಗಳನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ತುತ್ತಾಗುತ್ತಿದ್ದಾರೆ. ಸರ್ಕಾರ ಗಾಳಿಯಂತ್ರಗಳ ಅಳವಡಿಕೆಯ ನವೀಕರಣಕ್ಕೆ ಪ್ರಾಶಸ್ತ್ಯ ಕೊಡದೆ ಪರಿಸರ ಮತ್ತು ರೈತರ ಹಿತ ಕಾಯಲು ಮುಂದಾಗಬೇಕು ಎನ್ನುವುದು ರೈತ ಸಂಘಟನೆಗಳ ಆಗ್ರಹ.

ಗದಗ: ಕಪ್ಪತ್ತಗುಡ್ಡದ ಸಸ್ಯ ಆಹುತಿ ಪಡೆಯುತ್ತಿರುವ ಬೆಂಕಿ..!

ಕಪ್ಪತಗುಡ್ಡವನ್ನು 2017ರಲ್ಲಿ ಸಂರಕ್ಷಿತ ಅರಣ್ಯ(Forest) ಪ್ರದೇಶವೆಂದು ಘೋಷಿಸಲಾಗಿದೆ. ವನ್ಯಜೀವಿ(Wildlife) ಸ್ಥಾನಮಾನ ನೀಡಲಾಗಿದ್ದರೂ ಇಲಾಖೆ ಸಮರ್ಪಕವಾಗಿ ಗಿಡ ಬೆಳೆಸಿಲ್ಲ. ಕೇವಲ ಕಡತಗಳಲ್ಲಿ ಮಾತ್ರ ಗಿಡಗಳನ್ನು ಬೆಳೆಸುವ ಕೆಲಸ ಮಾಡಲಾಗುತ್ತಿದೆ. ಈ ಭಾಗದ ಜನಪ್ರತಿನಿಧಿಗಳ ಅಭಯ ಇರುವುದರಿಂದ ಯಾವುದೇ ಭಯವಿಲ್ಲದೆ ಅಧಿಕಾರಿಗಳು ಕಡು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಒಂದೆಡೆ, ಗಿಡಗಳನ್ನು ನೆಡದೆ ಇರುವುದು, ಮತ್ತೊಂದೆಡೆ ಗಾಳಿಯಂತ್ರಗಳ ಕಂಪನಿಗಳಿಗೆ ಅನೂಕೂಲವಾಗುವ ರೀತಿಯಲ್ಲಿ ಅಕ್ರಮಕ್ಕೆ ದಾರಿ ತೋರಿಸಲಾಗಿದೆ. ಇಲ್ಲಿನ ಸಸ್ಯ ಸಂಪತ್ತು ಧಕ್ಕೆ ತರುವ ರೀತಿಯಲ್ಲಿ ಗಿಡಗಳನ್ನು ಮಾರಣಹೋಮ ಮಾಡಲಾಗುತ್ತಿದೆ. ವ್ಯಾಪ್ತಿ ಮೀರಿ ಗಾಳಿಯಂತ್ರ ಅಳವಡಿಸುತ್ತಿದ್ದರು. ಸರಿಯಾದ ಮಾಹಿತಿ ನೀಡದೇ ಸರ್ಕಾರಕ್ಕೆ ದೋಷಯುಕ್ತ ವರದಿ ಸಲ್ಲಿಸಲಾಗಿದೆ. ರಕ್ಷಿಸಬೇಕಾಗಿದ್ದ ಅಧಿಕಾರಿಗಳೇ ಭಕ್ಷಣೆಗೆ ಇಳಿದಿದ್ದಾರೆ ಎನ್ನುತ್ತಾರೆ ಪರಿಸರವಾದಿಗಳು.

ಗಾಳಿಯಂತ್ರಗಳಿಂದ ಕಪ್ಪತಗುಡ್ಡ ಪರಿಸರಕ್ಕೆ ಹೊಡೆತ ಬಿದ್ದಿದೆ. ಮುಂಡರಗಿ, ಶಿರಹಟ್ಟಿಭಾಗದಲ್ಲಿ ಮಳೆ ಕ್ಷೀಣಿಸಿದೆ. ಗಾಳಿಯಂತ್ರಗಳ ಒಪ್ಪಂದದ ಅವಧಿ ಮೀರುತ್ತಿದೆ. ಕೂಡಲೇ ಗಾಳಿಯಂತ್ರಗಳನ್ನು ಅಲ್ಲಿಂದ ತೆರವುಗೊಳಿಸಬೇಕು ಅಂತ ಹಿರಿಯ ಹೋರಾಟಗಾರ ವೈ.ಎನ್‌. ಗೌಡರ ತಿಳಿಸಿದ್ದಾರೆ. 
 

Follow Us:
Download App:
  • android
  • ios