Asianet Suvarna News Asianet Suvarna News

ಕೊಪ್ಪಳ: ವಿವಾದಾತ್ಮಕ ಹೇಳಿಕೆ, ರಾಯರಡ್ಡಿ ವಿರುದ್ಧ ಆಕ್ರೋಶ

* ಹಾಲಪ್ಪ ಆಚಾರ್‌ ಕುರಿತು ಪರೋಕ್ಷವಾಗಿ ವೈಯಕ್ತಿಕವಾಗಿ ನಿಂದನೆ
* ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌
* ಸಚಿವ ಹಾಲಪ್ಪ ಆಚಾರ್‌ಗೆ ಪತ್ರ ಬರೆದ ರಾಯರಡ್ಡಿ
 

Outrage against Congress Leader Basavaraj Rayareddy for Controversial statement in Koppal grg
Author
Bengaluru, First Published Aug 26, 2021, 3:31 PM IST

ಕೊಪ್ಪಳ(ಆ.26):  ಮಾತಿನ ಭರಾಟೆಯಲ್ಲಿ ತಾಳತಪ್ಪಿದ ಮಾಜಿ ಸಚಿವ ಬಸವರಾಜ ರಾಯರಡ್ಡಿ ಈಗ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಈ ರೀತಿಯಾಗಿ ಮಾತನಾಡುವುದು ಸರಿಯಲ್ಲ ಎನ್ನುವ ಆಕ್ರೋಶ ಸೋಷಿಯಲ್‌ ಮೀಡಿಯಾದಲ್ಲಿ ವ್ಯಕ್ತವಾಗಿದೆ.

ಆಗಿದ್ದೇನು?

ಯಲಬುರ್ಗಾ ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುವ ವೇಳೆಯಲ್ಲಿ, ತನಗೆ ಅನುಭವಿದೆ ಎನ್ನುವುದನ್ನು ಹೇಳುವಾಗ, ಇದಕ್ಕೆ ಹಳ್ಳಿಯಲ್ಲಿ ಏನೋ ಹೇಳ್ತಾರಲ್ಲ ಎನ್ನುತ್ತಾರೆ ರಾಯರಡ್ಡಿ, ಇದಕ್ಕೆ ಕಾರ್ಯಕರ್ತರು ಆರು ಹಡದಾಕಿ ಮುಂದೆ ಮೂರು ಹಡಾದಾಕೆ ಧಿಮಾಕು ಮಾಡ್ತಾಳೆ ಎನ್ನುತ್ತಾರೆ. ಅದನ್ನು ಇವರು ಮುಂದುವರಿಸಿ, ಆರು ಹಡದಾಕೆ, ಮೂರು ಹಡದಾಕೆಗೆ ಏನು ಹೇಳುತ್ತಾರೆ ಎನ್ನುತ್ತಾರೆ. ಇಷ್ಟಕ್ಕೆ ಸುಮ್ಮನಾಗದೆ ಮೂರಲ್ಲೋ, ಒಂದು ಇಲ್ಲ ಎನ್ನುವ ಮೂಲಕ ಹಾಲಪ್ಪ ಆಚಾರ್‌ ಅವರ ಹೆಸರು ಹೇಳದೆಯೇ ವೈಯಕ್ತಿಕ ತೇಜೋವಧೆ ಮಾಡಿದ್ದಾರೆ. ರಾಯರಡ್ಡಿ ಅವರ ಈ ಹೇಳಿಕೆ ವಿವಾದಕ್ಕೀಡಾಗಿದೆ.

ಬಾಯಿ ತಪ್ಪಿ ಬಂದಿದೆ:

ಇದಾದ ಮೇಲೆ ಅವರು ತಮಗೆ ಇದರ ತಪ್ಪಿನ ಅರಿವಾದಂತೆ ಕಾಣುತ್ತಿದೆ. ತಕ್ಷಣ ಸಚಿವ ಹಾಲಪ್ಪ ಆಚಾರ್‌ ಅವರಿಗೆ ಪತ್ರ ಬರೆದಿದ್ದಾರೆ. ನಾನು ಹಾಲಪ್ಪ ಆಚಾರ್‌ ಅವರನ್ನು ತೇಜೋವಧೆ ಮಾಡುವ ಉದ್ದೇಶದಿಂದ ಈ ರೀತಿ ಹೇಳಿಲ್ಲ. ಮಾತಿನ ಭರಾಟೆಯಲ್ಲಿ ಬಂದಿದೆ. ನನಗೆ ಅವರ ಬಗ್ಗೆ ಅಪಾರ ಗೌರವವಿದೆ. ಹೀಗಾಗಿ, ತಪ್ಪು ತಿಳಿದುಕೊಳ್ಳಬೇಡಿ ಎಂದಿದ್ದಾರೆ. ಇದು, ಉದ್ದೇಶಪೂರ್ವಕವಾಗಿ ಆಗಿರುವ ತಪ್ಪಲ್ಲ, ಬಾಯಿ ತಪ್ಪಿನಿಂದ ಆಗಿದ್ದು, ಅಷ್ಟಕ್ಕೂ ನಿಮ್ಮ ಹೆಸರನ್ನು ನಾನು ಆಗ ಹೇಳಿಯೇ ಇಲ್ಲ. ಇದನ್ನು ತಪ್ಪಾಗಿ ಅರ್ಥೈಸುವುದು ಬೇಡ ಎಂದಿದ್ದಾರೆ.

'ಮಾಜಿ ಸಚಿವ ರಾಯರಡ್ಡಿಗೆ ಬುದ್ಧಿ ಭ್ರಮಣೆಯಾಗಿದೆ'

ಡಿಕೆಶಿ, ಇವರೆಲ್ಲಾ ಜೂನಿಯರ್ಸ್‌:

ನಾನು ಹಿರಿತನ ಹೊಂದಿದ್ದೇನೆ. ಯಡಿಯೂರಪ್ಪ, ಸಿದ್ದರಾಮಯ್ಯ, ದೇಶಪಾಂಡೆ ಅವರು ಎಂಎಲ್‌ಎ ಆಗಿದ್ದ ವೇಳೆಯಲ್ಲಿಯೇ ನಾನು ಎಂಎಲ್‌ಎ ಆಗಿದ್ದೇನೆ. ಅನೇಕರು ನನ್ನ ಜತೆಗಿದ್ದವರು ರಿಟೈರ್ಡ್‌ ಆಗಿದ್ದಾರೆ. ಆ ಕಾಲಕ್ಕೆ ನಾನು ಎಂಎಲ್‌ಎ ಆದವನು ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದ್ದಾರೆ.

ಯಡಿಯೂರಪ್ಪ, ಸಿದ್ದರಾಮಯ್ಯ, ದೇಶಪಾಂಡೆ ಅವರು 1983 ರಲ್ಲಿ ಶಾಸಕರಾಗಿದ್ದರು. ನಾನು 1985 ರಲ್ಲಿ ಶಾಸಕನಾದೆ. ನಾನು ಲೋಕಸಭೆ ಸದಸ್ಯನಾಗಿಯೇ ಈಗ 25 ವರ್ಷವಾಗಿದೆ ಎನ್ನುತ್ತಾರೆ.

ಈಗ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆಶಿ, ಉಳಿದವರೆಲ್ಲ ನನಗಿಂತ ಜೂನಿಯರ್ಸ್‌, ನಾನು ಯಡಿಯೂರಪ್ಪ, ಸಿದ್ದರಾಮಯ್ಯ, ದೇಶಪಾಂಡೆ ಅವರ ಸಮಕಾಲೀನ. ನಾನು ಎಂಪಿ ಆಗಿದ್ದಾಗ ವಾಜಪೇಯಿ, ಮುರಳಿ ಮನೋಹರ ಜೋಷಿ, ಅಡ್ವಾಣಿ ಅವರು ಇದ್ದರು ಎಂದಿದ್ದಾರೆ. ಈ ವೀಡಿಯೋ ಈಗ ಫುಲ್‌ ವೈರಲ್‌ ಆಗುತ್ತಿದೆ.
 

Follow Us:
Download App:
  • android
  • ios