Asianet Suvarna News Asianet Suvarna News

Pralhad Joshi: ನಮ್ಮ ಸಂಸ್ಕೃತಿ ಪರಂಪರೆ ಮರೆಯಬಾರದು: ಪ್ರಲ್ಹಾದ್ ಜೋಶಿ

ನಮ್ಮ ಸಂಸ್ಕೃತಿ, ಪರಂಪರೆ ಮರೆಯಬಾರದು, ಭಾರತದ ಭಾಷೆ, ಸಂಸ್ಕೃತಿ, ಕೌಟುಂಬಿಕ ಪದ್ಧತಿ ತೆಗೆದು ಹಾಕಿ, ವಿದೇಶಿ ಸಂಸ್ಕೃತಿಯನ್ನು ನಮ್ಮ ಮೇಲೆ ಹೇರುವ ಕೆಲಸ ನಡೆಯಿತು. ಅದನ್ನು ತಡೆಯುವ ಕೆಲಸ ಈಗಿನ ಸರ್ಕಾರ ಮಾಡಿದೆ ಎಂದು ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

Our cultural heritage should not be forgotten says Prahlad Joshi rav
Author
First Published Jan 20, 2023, 10:48 AM IST

ಚಿಕ್ಕಮಗಳೂರು (ಜ.20) : ನಮ್ಮ ಸಂಸ್ಕೃತಿ, ಪರಂಪರೆ ಮರೆಯಬಾರದು, ಭಾರತದ ಭಾಷೆ, ಸಂಸ್ಕೃತಿ, ಕೌಟುಂಬಿಕ ಪದ್ಧತಿ ತೆಗೆದು ಹಾಕಿ, ವಿದೇಶಿ ಸಂಸ್ಕೃತಿಯನ್ನು ನಮ್ಮ ಮೇಲೆ ಹೇರುವ ಕೆಲಸ ನಡೆಯಿತು. ಅದನ್ನು ತಡೆಯುವ ಕೆಲಸ ಈಗಿನ ಸರ್ಕಾರ ಮಾಡಿದೆ ಎಂದು ಕೇಂದ್ರದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಗುರುವಾರ ನಗರದ ಎಐಟಿ ಕಾಲೇಜಿನ ಮೈದಾನದಲ್ಲಿ ಏರ್ಪಡಿಸಿರುವ ಜ್ಞಾನ ವೈಭವ ಮೇಳ ವೀಕ್ಷಿಸಿದ ಬಳಿಕ ಜಿಲ್ಲಾ ಆಟದ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮಲ್ಲಿ ಜಾತಿ ವ್ಯವಸ್ಥೆ ಇರಲಿಲ್ಲ, ಆದರೆ, ಜಾತಿ ಜಾತಿಯಿಂದ ಒಡೆದರು, ನಮ್ಮನ್ನು ಭಾಷೆ ಭಾಷೆಯಲ್ಲಿ ಒಡೆದರು, ಅದರ ಪರಿಣಾಮ ನಮ್ಮ ದೇಶದಲ್ಲಿ ಒಂದು ಎನ್ನುವ ಭಾವನೆ ಕಡಿಮೆಯಾಯಿತು ಎಂದ ಸಚಿವರು. ಏಕ್‌ ಭಾರತ್‌ ಶ್ರೇಷ್‌್ಠ ಭಾರತ್‌ ಅಡಿಯಲ್ಲಿ ಈ ರೀತಿಯ ಕಾರ್ಯಕ್ರಮ ನಡೆಸುವ ಮೂಲಕ ಎಲ್ಲರನ್ನೂ ಒಟ್ಟುಗೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಬೆಳಗಾವಿಯಿಂದ ಸಿಕಂದರಾಬಾದ್‌ಗೆ ನಿತ್ಯ ರೈಲು ಸೇವೆ: ಜೋಶಿ ಮನವಿಗೆ ಸ್ಪಂದಿಸಿದ ಸಚಿವ ವೈಷ್ಣವ್

ಸಂಸ್ಕೃತಿ ಒಗ್ಗೂಡಿಸಿ, ಪರಂಪರೆ ಮುಂದುವರೆಸಲು ಈ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಅತಿ ಮುಖ್ಯ. ಭಾರತ ಸಂಶೋಧನೆ, ಮೆಡಿಕಲ್‌, ಮಿಲಿಟರಿ ಸಂಶೋಧನೆಯಲ್ಲಿ ಮುಂದುವರೆಯುತ್ತಿದೆ. ಚೈನಾದವರು ಭಾರತವನ್ನು ಹೆದರಿಸಿ ಭೂಮಿ ತೆಗೆದುಕೊಂಡು ಹೋಗುತ್ತಿದ್ದರು. ಆದರೆ, ಕಳೆದ 8 ವರ್ಷದಲ್ಲಿ ಒಂದಿಂಚು ಭೂಮಿಯನ್ನು ಭಾರತೀಯ ಸೈನಿಕರು ಬಿಟ್ಟುಕೊಡಲಿಲ್ಲ ಎಂದು ಹೇಳಿದರು.

ಕೊರೋನಾ ಸಂದರ್ಭದಲ್ಲಿ ನಮ್ಮ ರಕ್ಷಣೆಗಾಗಿ ವ್ಯಾಕ್ಸಿನ್‌ ಕಂಡು ಹಿಡಿಯಲಾಯಿತು. ಭಾರತ ಆರ್ಥಿಕವಾಗಿ ಸುರಕ್ಷಿತವಾಗಿ ಮುನ್ನಡೆಯುತ್ತಿದೆ. ಜಗತ್ತಿನಲ್ಲಿ ಭಾರತ ಆರ್ಥಿಕವಾಗಿ 5ನೇ ಸ್ಥಾನದಲ್ಲಿದೆ. ನಾವು ಭಾರತೀಯರೆಲ್ಲಾ ಒಂದು. ಇಂತಹ ಹಬ್ಬಗಳು ನಡೆಯಬೇಕು. ಎಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕು. ನಾವು ಕಲಾವಿದರಾದರೆ ನಮ್ಮ ಮಕ್ಕಳಲ್ಲೂ ಈ ಕಲೆಯನ್ನು ಕಲಿಸಬೇಕು ಎಂದರು. ಚಿಕ್ಕಮಗಳೂರು ಸುಂದರವಾದ ಜಿಲ್ಲೆ, ಜಲಪಾತ, ಅರಣ್ಯ ಪ್ರದೇಶ, ಪಂಚ ನದಿಗಳ ಉಗಮ ಸ್ಥಾನ. ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳು ಇಲ್ಲಿವೆ. ಇದು ಪ್ರವಾಸಿ ಕೇಂದ್ರವಾಗಿ ಬೆಳೆಯಲಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೇಂದ್ರದ ಮೀನುಗಾರಿಕೆ, ಪಶು ಸಂಗೋಪನಾ ರಾಜ್ಯ ಸಚಿವ ಡಾ. ಎಲ್‌. ಮುರುಗನ್‌, ಶಾಸಕರಾದ ಸಿ.ಟಿ. ರವಿ, ಬೆಳ್ಳಿ ಪ್ರಕಾಶ್‌, ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಪಿ. ವೆಂಕಟೇಶ್‌, ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್‌, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ. ಆನಂದ್‌, ಜಿಲ್ಲಾಧಿಕಾರಿ ಕೆ.ಎನ್‌. ರಮೇಶ್‌, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್‌, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಉಪಸ್ಥಿತರಿದ್ದರು.

ಜಿಲ್ಲಾ ಉತ್ಸವಕ್ಕೆ ಮೆರಗು ನೀಡಿದ ವೈಭವ ಮೇಳ

ಚಿಕ್ಕಮಗಳೂರು: ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿರುವ ಚಿಕ್ಕಮಗಳೂರು ಹಬ್ಬದ ಎರಡನೇ ದಿನದ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಪಾಲ್ಗೊಂಡಿದ್ದರು. ಕೇಂದ್ರದ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ವಾದ್‌ ಜೋಶಿ, ಕೇಂದ್ರದ ವಾರ್ತಾ, ಮೀನುಗಾರಿಕೆ ಹಾಗೂ ಪಶು ಸಂಗೋಪನೆ ರಾಜ್ಯ ಸಚಿವ ಡಾ.ಎಲ್‌. ಮುರುಗನ್‌ ಅವರು ಗುರುವಾರ ನಗರಕ್ಕೆ ಆಗಮಿಸಿ ಕೃಷಿ ವಸ್ತು ಪ್ರದರ್ಶನವನ್ನು ವೀಕ್ಷಿಸಿದ ಬಳಿಕ ಜಿಲ್ಲಾ ಆಟದ ಮೈದಾನದಲ್ಲಿ ಸಂಜೆ ನಡೆದ ಜಿಲ್ಲಾ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶ್ರೀ ಬೋಳರಾಮೇಶ್ವರ ದೇವಾಲಯದಿಂದ ಬೆಳಿಗ್ಗೆ ಹೊರಟ ಎತ್ತಿನಗಾಡಿ ಮೆರವಣಿಗೆ ಹಾಗೂ ಸಿರಿಧಾನ್ಯ ನಡಿಗೆ ಕಾರ್ಯಕ್ರಮಕ್ಕೆ ಶಾಸಕ ಸಿ.ಟಿ. ರವಿ ಚಾಲನೆ ನೀಡಿದರು.

ಬರೀ ಚಾಲನೆ ಮಾತ್ರವಲ್ಲ, ಶ್ರೀ ಬೋಳರಾಮೇಶ್ವರ ದೇವಾಲಯದಿಂದ ಎಐಟಿ ಕಾಲೇಜಿನ ಮೈದಾನದವರೆಗೆ ಎತ್ತಿನ ಗಾಡಿ ಓಡಿಸುತ್ತಾ ಬಂದರು, ಅವರಿಗೆ ತಮಿಳುನಾಡಿನ ರಾಜ್ಯ ಬಿಜೆಪಿ ಅಧ್ಯಕ್ಷ, ನಿವೃತ್ತ ಐಎಎಸ್‌ ಅಧಿಕಾರಿ ಕೆ. ಅಣ್ಣಾಮಲೈ ಅವರು ಸಾಥ್‌ ನೀಡಿದ್ದರು.

ಮೊದಲ ಎತ್ತಿನಗಾಡಿಯನ್ನು ಸಿ.ಟಿ. ರವಿ ಓಡಿಸುತ್ತಿದ್ದರೆ, ಹಿಂಬದಿಯ ಗಾಡಿಗಳಲ್ಲಿ ಜಿಲ್ಲಾಧಿಕಾರಿ ಕೆ.ಎನ್‌. ರಮೇಶ್‌, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್‌, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಉಪ ಅರಣ್ಯ ಸಂರಕ್ಷಣಾಧಿಕಾರಿ ಇ.ಎನ್‌. ಕ್ರಾಂತಿ, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್‌ ಇದ್ದರು. ವಿವಿಧ ಕಲಾ ತಂಡಗಳು ಮಹಿಳೆಯರು ಪೂರ್ಣಕುಂಭದೊಂದಿಗೆ ಮೆರವಣಿಗೆಯಲ್ಲಿ ಸಾಗಿದರು.

ಬಂಟ ಸಮಾಜದವರು ಶಿಸ್ತಿನ ಸಂಕೇತ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

ಆಜಾದ್‌ ಪಾರ್ಕ್ ವೃತ್ತದಲ್ಲಿ ಏರ್ಪಡಿಸಲಾಗಿದ್ದ ಚಿಣ್ಣರ ಉತ್ಸವವನ್ನು ನಿವೃತ್ತ ಐಎಎಸ್‌ ಅಧಿಕಾರಿ ಕೆ. ಅಣ್ಣಾಮಲೈ ಉದ್ಘಾಟಿಸಿದರು. ನಗರದ ಹೊಸಮನೆ ಬಡಾವಣೆಯಲ್ಲಿ ರಾಗಿ ಮುದ್ದೆ ಹಾಗೂ ಖಡಕ್‌ ರೊಟ್ಟಿಊಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಚಿಕ್ಕಮಗಳೂರು ನಗರದ ಹನುಮಂತಪ್ಪ ಸರ್ಕಲ್‌ನಲ್ಲಿ ಜಿಲ್ಲಾ ಉತ್ಸವ ಅಂಗವಾಗಿ ಏರ್ಪಡಿಸಿದ್ದ ಬೀದಿ ಉತ್ಸವಕ್ಕೆ ಶಾಸಕ ಸಿ.ಟಿ. ರವಿ ಅವರು ಚಾಲನೆ ನೀಡಿದರು.

Follow Us:
Download App:
  • android
  • ios