Asianet Suvarna News Asianet Suvarna News

ಬೆಳಗಾವಿಯಿಂದ ಸಿಕಂದರಾಬಾದ್‌ಗೆ ನಿತ್ಯ ರೈಲು ಸೇವೆ: ಜೋಶಿ ಮನವಿಗೆ ಸ್ಪಂದಿಸಿದ ಸಚಿವ ವೈಷ್ಣವ್

ಬೆಳಗಾವಿಯಿಂದ ಹೊರಡುವ ರೈಲು ಖಾನಪುರ, ಲೋಂಡಾ, ಹುಬ್ಬಳ್ಳಿ, ಕೊಪ್ಪಳ, ಬಳ್ಳಾರಿ, ಗುಂತಕಲ್ಲ, ಆದೋನಿ, ಮಂತ್ರಾಲಯಂ ರೋಡ್, ರಾಯಚೂರು, ಚಿತ್ತಾಪುರ, ಮಳಖೇಡ ರೋಡ್, ವಿಕಾರಬಾದ್, ಬೇಗಂಪೇಟ ಮಾರ್ಗದ ಮೂಲಕ ಸಿಕಂದರಾಬಾದ್ ತಲುಪಲಿದೆ. 

Daily Train Service  Starts from Belagavi to Secunderabad grg
Author
First Published Jan 17, 2023, 10:57 PM IST

ಬೆಳಗಾವಿ(ಜ.17):  ಬಹು ಬೇಡಿಕೆಯ ಬೆಳಗಾವಿಯಿಂದ ಸಿಕಂದರಾಬಾದ್ ನಿತ್ಯ ರೈಲ್ವೇ ಸಂಚಾರ ಇಂದಿನಿಂದ(ಮಂಗಳವಾರ) ಆರಂಭವಾಗಿದೆ. ರೈಲ್ವೇ ಸೇವೆ ಆರಂಭಿಸಿದ್ದಕ್ಕೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. 

ಬೆಳಗಾವಿಯಿಂದ ಹುಬ್ಬಳ್ಳಿ ಮಾರ್ಗವಾಗಿ ಸಿಕಂದರಾಬಾದ್‌ವರೆಗೆ ನಿತ್ಯ ರೈಲು ಸೇವೆ ಆರಂಭಿಸುವ ಕುರಿತಂತೆ ಈ ಹಿಂದೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಒತ್ತಾಯಿಸಿದ್ದರು. ಜೋಶಿ ಅವರ ಮನವಿಗೆ ಸ್ಪಂದಿಸಿದ್ದ ವೈಷ್ಣವ್ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. 

Daily Train Service  Starts from Belagavi to Secunderabad grg

ದೆಹಲಿ,ಅಯೋಧ್ಯೆ, ಜನಕಪುರ ರೈಲು ಟಿಕೆಟ್ ಬೆಲೆ 39,995 ರೂ; 7 ದಿನದ ಪ್ರಯಾಣಕ್ಕೆ ಇಎಂಐ ಸೌಲಭ್ಯ!

ಇಂದಿನಿಂದ (ಜನವರಿ 17) ರೈಲ್ವೇ ಸೇವೆ ಆರಂಭವಾಗಿದ್ದು, ಈ ಮಾರ್ಗ ಮಧ್ಯ ಓಡಾಡುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಬೆಳಗಾವಿಯಿಂದ ಹೊರಡುವ ರೈಲು ಖಾನಪುರ, ಲೋಂಡಾ, ಹುಬ್ಬಳ್ಳಿ, ಕೊಪ್ಪಳ, ಬಳ್ಳಾರಿ, ಗುಂತಕಲ್ಲ, ಆದೋನಿ, ಮಂತ್ರಾಲಯಂ ರೋಡ್, ರಾಯಚೂರು, ಚಿತ್ತಾಪುರ, ಮಳಖೇಡ ರೋಡ್, ವಿಕಾರಬಾದ್, ಬೇಗಂಪೇಟ ಮಾರ್ಗದ ಮೂಲಕ ಸಿಕಂದರಾಬಾದ್ ತಲುಪಲಿದೆ. 

ಬೆಳಗಾವಿಯಿಂದ ಮಧ್ಯಾಹ್ನ 1.10 ಹೊರಡಲಿರುವ ರೈಲು ಬೆಳಗ್ಗೆ 5.50 ಕ್ಕೆ ಸಿಕಂದರಾಬಾದ್ ತಲುಪಲಿದೆ. ಸಿಕಂದರಾಬಾದ್‌ನಿಂದ ರಾತ್ರಿ 10:20 ಹೊರಟು ಸಂಜೆ 3.55 ಕ್ಕೆ ಬೆಳಗಾವಿ ತಲುಪಲಿದೆ. 
ಪ್ರಧಾನಿ ನರೇಂದ್ರ ಮೋದಿ ಹಾಗೂ ಈ ವಿಶೇಷ ರೈಲು ಆರಂಭಿಸುವ ನಿರ್ಧಾರ ಕೈಗೊಂಡು, ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪ್ರಲ್ಹಾದ್ ಜೋಶಿ ಧನ್ಯವಾದ ಅರ್ಪಿಸಿದ್ದಾರೆ.

Follow Us:
Download App:
  • android
  • ios