Asianet Suvarna News Asianet Suvarna News

ನಮ್ಮ ದೇಶದ ಬಲಿಷ್ಠ ಯುವಪಡೆ ವಿಶ್ವಕ್ಕೆ ಮಾದರಿ: ಕೇಂದ್ರ ಸಚಿವ ಭಗವಂತ ಖೂಬಾ

ದೇಶದಲ್ಲಿರುವ ಬಲಿಷ್ಠ ಯುವಶಕ್ತಿಯ ಪಡೆ ಇಂದು ವಿಶ್ವಕ್ಕೆ ಮಾದರಿಯಾಗಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು. ನಗರದಲ್ಲಿರುವ ಪ್ರತಿಷ್ಠಿತ ಶಾಲೆಯಾದ ಗ್ಲೋಬಲ್ ಸೈನಿಕ ಅಕಾಡೆಮಿ ಹಾಗೂ ಜ್ಞಾನಸುಧಾ ವಿದ್ಯಾಲಯದಲ್ಲಿ ಓಪನ್ ಜಿಮ್ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

Our countrys strong youth force is a model for the world Says Union Minister Bhagwanth Khuba gvd
Author
First Published Feb 1, 2024, 5:22 PM IST

ಬೀದರ್‌ (ಫೆ.01): ದೇಶದಲ್ಲಿರುವ ಬಲಿಷ್ಠ ಯುವಶಕ್ತಿಯ ಪಡೆ ಇಂದು ವಿಶ್ವಕ್ಕೆ ಮಾದರಿಯಾಗಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು. ನಗರದಲ್ಲಿರುವ ಪ್ರತಿಷ್ಠಿತ ಶಾಲೆಯಾದ ಗ್ಲೋಬಲ್ ಸೈನಿಕ ಅಕಾಡೆಮಿ ಹಾಗೂ ಜ್ಞಾನಸುಧಾ ವಿದ್ಯಾಲಯದಲ್ಲಿ ಓಪನ್ ಜಿಮ್ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಗೆ ಪ್ರತಿನಿತ್ಯ ಜಿಮ್ ಮಾಡುವುದು ರೂಢಿಸಿಕೊಳ್ಳಬೇಕು. ಸಮಾಜದಲ್ಲಿಯ ಜನ ನಮ್ಮ ಮಾನಸಿಕ ನೆಮ್ಮದಿ ಹಾಳು ಮಾಡಲು ಪ್ರಯತ್ನಿಸುತ್ತಾರೆ. 

ಆದರೆ ನಮ್ಮ ಶುದ್ಧ ನಡೆ, ನುಡಿಯಿಂದ ಮಾನಸಿಕವಾಗಿ ಗಟ್ಟಿಯಾಗಿರಬೇಕೆಂದು ಎಲ್ಲಾ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಜ್ಞಾನಸುಧಾ ವಿದ್ಯಾಲದಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಸ್ಥೆ ಪೂರ್ಣಿಮಾ ಜಾರ್ಜ್‌ ಮಾತನಾಡಿ, 20 ಲಕ್ಷ ವೆಚ್ಚದ ಓಪನ್ ಜಿಮ್ ನೀಡಿ, ಮಕ್ಕಳ ಆರೋಗ್ಯದ ದೃಷ್ಟಿಯಿಂದ ಭಗವಂತ ಖೂಬಾ ಅವರು ಮಾಡುತ್ತಿರುವ ಕೆಲಸ ಆದರ್ಶವಾಗಿದೆ ಎಂದರು. ಗ್ಲೋಬಲ್ ಸೈನಿಕ ಅಕಾಡೆಮಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ವಾತಾವರಣ ಕಲ್ಪಿಸಿದೆ. 

ಲೋಕಸಭೆ ಚುನಾವಣೆಯಲ್ಲಿ ಎಲ್ಲ 28 ಸೀಟ್‌ ಗೆದ್ದರೆ ಕಾಂಗ್ರೆಸ್‌ ಸರ್ಕಾರ ಇರಲ್ಲ: ಆರ್‌.ಅಶೋಕ್‌

ಶಿಸ್ತು, ಸಂಯಮ, ದೈಹಿಕ ಆರೋಗ್ಯ ಜೊತೆಗೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು ಒಳ್ಳೆಯ ಹವ್ಯಾಸಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು. ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಕಾಡೆಮಿ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೇನಪೂರೆ ಮಾತನಾಡಿದರು. ಮುಖ್ಯಶಿಕ್ಷಕಿ ಜ್ಯೋತಿ ರಾಗ, ಪಿಆರ್‌ಒ ಕಾರಂಜಿ ಸ್ವಾಮಿ, ಸುಬೇದಾರ್ ಮಡೆಪ್ಪ, ಶಿಕ್ಷಕರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಸಚಿವರು ಲಿಂಗಾಯತ, ಮರಾಠರ ಮಧ್ಯ ಜಗಳ ಹಚ್ತಾರೆ: ಕಾಂಗ್ರೆಸ್‌ನವರು ಕೆಟ್ಟ ರಾಜಕಾರಣ ಮಾಡುತ್ತಾರೆ, ಜಾತಿಗಳ ಮಧ್ಯ, ಕುಟುಂಬಗಳ ಮಧ್ಯೆ, ಬಡವರಿಗೆ ಸಾರಾಯಿ, ಹಣ ಹಂಚಿ ಚುನಾವಣೆ ಗೆಲ್ಲುತ್ತಾರೆ. ಇದೇ ಚಾಳಿಯನ್ನು ಭಾಲ್ಕಿ ಶಾಸಕರು ಹಾಗೂ ಉಸ್ತುವಾರಿ ಸಚಿವರು ಲಿಂಗಾಯತ ಮತ್ತು ಮರಾಠ ಜನರ ಮಧ್ಯೆ ಜಗಳ ಹಚ್ಚುತ್ತಾರೆ. ಚುನಾವಣೆಯಲ್ಲಿ ಹಣ, ಹೆಂಡ ಹಂಚಿ ಗೆಲ್ಲುತ್ತಿದ್ದಾರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಆರೋಪಿಸಿದರು.

ಭಾಲ್ಕಿ ತಾಲೂಕಿನ ಮದಕಟ್ಟಿ ಗ್ರಾಮದಲ್ಲಿ ಆಯೋಜಿಸಲಾದ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದಲ್ಲಿರುವ ಕೆಲವೊಂದು ಕುಟುಂಬಗಳು ಅಭಿವೃದ್ಧಿಯಾದವು, ಅದರಲ್ಲಿ ಭಾಲ್ಕಿಯ ಶಾಸಕರ ಕುಟುಂಬವೂ ಒಂದು. ಬೇರೆಯವರನ್ನು ಬೆಳೆಯಲು ಇವರು ಎಂದಿಗೂ ಬಿಟ್ಟಿಲ್ಲ. ಕೇವಲ ತನ್ನ ಕುಟುಂಬದ ಅಭಿವೃದ್ಧಿ ಮಾತ್ರ ಮಾಡಿಕೊಂಡಿದ್ದಾರೆ ಎಂದು ಕುಟುಂಬ ರಾಜಕಾರಣದ ವಿರುದ್ಧ ಹರಿಹಾಯ್ದರು.

ರೇಣುಕಾಚಾರ್ಯ ಸೇರಿ ಮಾಜಿ ಸಚಿವರ ಟೀಂ ವಿರುದ್ಧ ಬಿಜೆಪಿ ಕಾರ್ಯಕರ್ತರ ಆಕ್ರೋಶ!

ದೇಶಕ್ಕೆ ಸ್ವಾತಂತ್ರ ಬಂದಾಗ ದೇಶದ ಪ್ರಧಾನಿ ಸರ್ದಾರ್‌ ವಲ್ಲಭಭಾಯಿ ಪಟೇಲರು ಆಗಬೇಕಿತ್ತು, ಆದರೆ ದುರ್ದೈವದಿಂದ ಜವಾಹರಲಾಲ್‌ ನೆಹರು ಪ್ರಧಾನಿಯಾದರು, ನೆಹರು ಪ್ರಧಾನಿಯಾದ ಮೇಲೆ ದೇಶ ಅಭಿವೃದ್ಧಿಯಾಗಲಿಲ್ಲ ಎಂದು ನುಡಿದರು. ಕಳೆದ 60 ವರ್ಷಗಳಿಂದ ಭಾಲ್ಕಿಯಲ್ಲಿ ಒಂದೇ ಕುಟುಂಬದಿಂದ ತಂದೆಯಿಂದ ಹಿಡಿದು ಮಕ್ಕಳವರೆಗೆ ಅಧಿಕಾರದಲ್ಲಿದ್ದರು. ಬಡವರ ಮಕ್ಕಳಿಗೆ ಆಟವಾಡಲು ಒಂದು ಕ್ರೀಡಾಂಗಣ ನಿರ್ಮಿಸಲು ಆಗಿಲ್ಲ. ಭಾಲ್ಕಿಯಲ್ಲಿ ಸರ್ಕಾರಿ ಕಾಲೇಜುಗಳಿಲ್ಲ, ಸರ್ಕಾರಿ ವಸತಿ ನಿಲಯಗಳಿಲ್ಲ, ಇರುವ ವಸತಿ ನಿಲಯಗಳು ಖಾಸಗಿ ಕಟ್ಟಡದಲ್ಲಿವೆ. ಈ ಪರಿಸ್ಥಿತಿ ಭಾಲ್ಕಿಯಲ್ಲಿರುವುದಕ್ಕೆ ಕಾರಣ, ನಮ್ಮ ಪಕ್ಷದಿಂದ ಶಾಸಕರು ಇಲ್ಲದಿರುವದರಿಂದ ಎಂದು ತಿಳಿಸಿದರು.

Follow Us:
Download App:
  • android
  • ios