Asianet Suvarna News Asianet Suvarna News

ಆಸ್ಕರ್ ಆರೋಗ್ಯ ವಿಚಾರಿಸಿ ಕೊಂಕಣ ರೈಲ್ವೆ ಕೆಲಸ ನೆನೆದ ಪೂಜಾರಿ

* ಕಾಂಗ್ರೆಸ್ ಹಿರಿಯ ಮುಖಂಡ ಆಸ್ಕರ್ ಫರ್ನಾಂಡಿಸ್ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆ 
* ಮಂಗಳೂರಿನ ಯೆನೇಪೋಯಾ ಆಸ್ಪತ್ರೆಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ವಿಸಿಟ್
* ಆಸ್ಕರ್ ಆರೋಗ್ಯ ವಿಚಾರಿಸಿದ ಕೋಟಾ ಶ್ರೀನಿವಾಸ ಪೂಜಾರಿ
* ಆಸ್ಕರ್ ರನ್ನ ಕಂಡ ಬಳಿಕ ಕುಟುಂಬಸ್ಥರ ಜೊತೆ ಮಾತನಾಡಿ ಧೈರ್ಯ ತುಂಬಿದ ಪೂಜಾರಿ

Oscar Fernandes continues to be critical karnataka minister kota srinivas poojary visits hospital mah
Author
Bengaluru, First Published Jul 25, 2021, 8:39 PM IST
  • Facebook
  • Twitter
  • Whatsapp

ಮಂಗಳೂರು(ಜು. 25) ಕಾಂಗ್ರೆಸ್ ಹಿರಿಯ ಮುಖಂಡ ಆಸ್ಕರ್ ಫರ್ನಾಂಡಿಸ್ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಗಳೂರಿನ ಯೆನೇಪೋಯಾ ಆಸ್ಪತ್ರೆಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

ಆಸ್ಕರ್ ಆರೋಗ್ಯ ವಿಚಾರಿಸಿದ ಕೋಟಾ ಶ್ರೀನಿವಾಸ ಪೂಜಾರಿ ಆಸ್ಕರ್ ರನ್ನ ಕಂಡ ಬಳಿಕ ಕುಟುಂಬಿಕರ ಜೊತೆ ಮಾತನಾಡಿ ಧೈರ್ಯ ತುಂಬಿದ್ದಾರೆ.

ಆಸ್ಕರ್ ಕುಟುಂಬಕ್ಕೆ ಸೋನಿಯಾ ಪೋನ್

ಕೊಂಕಣ ರೈಲ್ವೇ, ಹೆದ್ದಾರಿ ಅಭಿವೃದ್ಧಿ ಸೇರಿ ಹಲವು ಅಭಿವೃದ್ಧಿಗೆ ಆಸ್ಕರ್ ‌ಕಾರಣಕರ್ತರು. ಒಂದು ಆದರ್ಶ ಮತ್ತು ವಿಶ್ವಾಸಾರ್ಹ ರಾಜಕಾರಣಿಗಳಲ್ಲಿ ಆಸ್ಕರ್ ಒಬ್ಬರು. ಬಹಳ ಸಾತ್ವಿಕ ‌ಮತ್ತು ಸಜ್ಜನರಾಗಿರೋ ಅವರ ಬಗ್ಗೆ ವ್ಯಕ್ತಿಗತ ಗೌರವವಿದೆ ಎಂದು ಪೂಜಾರಿ ತಿಳಿಸಿದ್ದಾರೆ.

ಅವರು ಅನಾರೋಗ್ಯಕ್ಕೆ ತುತ್ತಾಗಿರೋದು ಬಹಳ ನೋವು ತಂದಿದೆ. ಅವರು ಬಹುಬೇಗನೇ ಗುಣಮುಖರಾಗಿ ಬರಲಿ, ಮತ್ತೆ ನಮ್ಮ ಜೊತೆ ಹೆಜ್ಜೆ ಇಡಲಿ ಎಂದು  ಹಾರೈಸಿದ್ದಾರೆ. 

 

Follow Us:
Download App:
  • android
  • ios