Asianet Suvarna News Asianet Suvarna News

ವಾಹನ ತಪಾಸಣೆ ವೇಳೆ ಮೂಲ ದಾಖಲೆ ಕಡ್ಡಾಯ

ದೇಶಾದ್ಯಂತ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಜಾರಿಗೆ ಬಂದಿದ್ದು, ಪ್ರತಿಯೊಬ್ಬ ವಾಹನ ಸವಾರರು ವಾಹನದ ಮೂಲ ದಾಖಲೆಯನ್ನಿಟ್ಟುಕೊಳ್ಳಬೇಕು. ಯಾವುದೇ ಕಾರಣಕ್ಕೂ ನಕಲಿ ಪ್ರತಿಗಳನ್ನು ತಪಾಸಣೆ ವೇಳೆ ಪರಿಗಣಿಸಲಾಗುವುದಿಲ್ಲ ಎಂದು ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌. ಹರ್ಷ ಹೇಳಿದ್ದಾರೆ.

original documents mandatory while vehicle checking says ips harsha
Author
Bangalore, First Published Dec 3, 2019, 8:59 AM IST

ಮಂಗಳೂರು(ಡಿ.03): ದೇಶಾದ್ಯಂತ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಜಾರಿಗೆ ಬಂದಿದ್ದು, ಪ್ರತಿಯೊಬ್ಬ ವಾಹನ ಸವಾರರು ವಾಹನದ ಮೂಲ ದಾಖಲೆಯನ್ನಿಟ್ಟುಕೊಳ್ಳಬೇಕು. ಯಾವುದೇ ಕಾರಣಕ್ಕೂ ನಕಲಿ ಪ್ರತಿಗಳನ್ನು ತಪಾಸಣೆ ವೇಳೆ ಪರಿಗಣಿಸಲಾಗುವುದಿಲ್ಲ ಎಂದು ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌. ಹರ್ಷ ಹೇಳಿದ್ದಾರೆ.

ನಗರದ ಕಮಿಷನರ್‌ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್‌-ಇನ್‌ ಕಾರ್ಯಕ್ರಮದಲ್ಲಿ ನಾಗರಿಕರೊಬ್ಬರ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.

ದೇವೇಗೌಡರ ಕುಟುಂಬಕ್ಕೆ ಚೂರಿ ಹಾಕುವವರನ್ನು ತಿರಸ್ಕರಿಸಿ: ಎಚ್‌ಡಿಕೆ

ಟ್ರಾಫಿಕ್‌ ಪೊಲೀಸರು, ಅಧಿಕಾರಿಗಳು ವಾಹನ ತಪಾಸಣೆಯ ವೇಳೆ ವಾಹನದ ಮೂಲ ದಾಖಲೆಗಳನ್ನೇ ಕೇಳುತ್ತಿದ್ದಾರೆ. ನಕಲಿ ಪ್ರತಿಗಳನ್ನು ನೀಡಿದರೂ ಪರಿಗಣಿಸದೆ ದಂಡ ವಿಧಿಸುತ್ತಾರೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು, ಮೂಲ ದಾಖಲೆ ಹಾಜರುಪಡಿಸಲು ಸಮಯ ನೀಡಬೇಕು ಎಂದಿ ನಾಗರಿಕರೊಬ್ಬರು ಕೇಳಿಕೊಂಡಿದ್ದಾರೆ.

ಇದಕ್ಕೆ ಉತ್ತರಿಸಿದ ಪೊಲೀಸ್‌ ಕಮಿಷನರ್‌ ಡಾ. ಹರ್ಷ, ತಿದ್ದುಪಡಿ ಕಾಯ್ದೆಯ ಪ್ರಕಾರ ತಪಾಸಣೆಯ ವೇಳೆ ಮೂಲ ದಾಖಲೆಯನ್ನೇ ನೀಡಬೇಕು. ನಕಲಿ ಪ್ರತಿಗಳನ್ನು ಪರಿಗಣಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಇದನ್ನು ಸಾರ್ವಜನಿಕರು ಅರ್ಥಮಾಡಿಕೊಳ್ಳಬೇಕು ಎಂದಿದ್ದಾರೆ.

ಮತ್ತೆ ಚಂಡಮಾರುತ, ರಾಜ್ಯದ ಈ ಭಾಗದಲ್ಲಿ ಇನ್ನೆರಡು ದಿನ ಭಾರೀ ಮಳೆ

‘ಮೈ ಬೀಟ್‌ ಮೈ ಪ್ರೈಡ್‌’ ಗ್ರೂಪ್‌ಗಳಲ್ಲಿ ಸಾಮಾನ್ಯ ಸಂದೇಶ ಹರಿದಾಡುವ ಬದಲು ಜನರಲ್ಲಿ ಜಾಗೃತಿ ಮೂಡಿಸುವ ಸಂದೇಶ ಹಾಕಬೇಕು. ಶಾಂತಿ ಕದಡುವ ಸಂದೇಶ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ನಾಗರಿಕರೊಬ್ಬರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಕಮಿಷನರ್‌, ನಗರದಲ್ಲಿ ‘ಮೈ ಬೀಟ್‌ ಮೈ ಪ್ರೈಡ್‌’ ಗ್ರೂಪ್‌ನಲ್ಲಿ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಈಗಾಗಲೇ 48 ಸಾವಿರ ಮಂದಿ ಸದಸ್ಯರಾಗಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೀಟ್‌ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದಿದ್ದಾರೆ.

ಕದ್ರಿಯ ತೇಜಸ್ವಿನಿ ಆಸ್ಪತ್ರೆ ಬಳಿ ರಸ್ತೆಯ ಎರಡು ಕಡೆಗಳಲ್ಲಿ ವಾಹನ ಪಾರ್ಕಿಂಗ್‌ ಮಾಡುತ್ತಿದ್ದಾರೆ. ಇದರಿಂದ ತೊಂದರೆಯಾಗುತ್ತಿದೆ ಎಂದು ನಾಗರಿಕರೊಬ್ಬರು ದೂರಿದರು. ಇದಕ್ಕೆ ಉತ್ತರಿಸಿದ ಕಮಿಷನರ್‌, ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.

ಗ್ರಾಮ ಪಂಚಾಯತ್ ನಿಂದ ಬಡವರಿಗೆ 10 ಎಕರೆ ಜಾಗ

ಕೊಟ್ಟಾರ ಚೌಕಿಯಿಂದ ಕರೆ ಮಾಡಿದ ವ್ಯಕ್ತಿಯೊಬ್ಬರು, ಫ್ಲೈಓವರ್‌ ಕೆಳಗಡೆ ವಾಹನ ಪಾರ್ಕಿಂಗ್‌ಗೆ ಅವಕಾಶ ನೀಡುತ್ತಿಲ್ಲ ಎಂದು ದೂರಿದರು. ಇದಕ್ಕೆ ಉತ್ತರಿಸಿದ ಕಮಿಷನರ್‌, ಕೊಟ್ಟಾರ ಫ್ಲೈಓವರ್‌ ಕೆಳಗಡೆ ರಾಮಕೃಷ್ಣ ಮಿಷನ್‌ ವತಿಯಿಂದ ಇಂಟರ್‌ಲಾಕ್‌ ಹಾಕಿ ಸುಂದರೀಕರಣ ಮಾಡಲಾಗಿದೆ. ಪಾರ್ಕಿಂಗ್‌ಗೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಸ್ಥಳ ಪರಿಶೀಲನೆ ನಡೆಸಿ ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ.

ರಾಜ್ಯದ ಈ ಜಿಲ್ಲೆಗಳಲ್ಲಿ 2 ದಿನ ಭಾರಿ ಮಳೆ.

ನಗರದ ಹಲವೆಡೆ ಬೀದಿ ವ್ಯಾಪಾರಿಗಳು ಫುಟ್‌ಪಾತ್‌, ರಸ್ತೆ ಅತಿಕ್ರಮಿಸಿ ವ್ಯಾಪಾರ ಮಾಡುತ್ತಿರುವ ಬಗ್ಗೆ ಫೋನ್‌-ಇನ್‌ ಕಾರ್ಯಕ್ರಮಕ್ಕೆ ದೂರುಗಳು ಬಂದಿದ್ದು, ಇದನ್ನು ಪಾಲಿಕೆ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಆ ಬಳಿಕ ಜಂಟಿ ಕಾರ್ಯಾಚರಣೆ ನಡೆಸಿ ಅತಿಕ್ರಮನ ತೆರವು ಮಾಡಲಾಗುವುದು. ಇದಕ್ಕೆ ಮಹಾನಗರ ಪಾಲಿಕೆ ಅಧಿಕಾರಿಗಳ ಸಹಕಾರ ಮುಖ್ಯ ಎಂದಿದ್ದಾರೆ.

ಡಿಸಿಪಿಗಳಾದ ಅರುಣಾಂಗ್ಳುಗಿರಿ, ಲಕ್ಷ್ಮೇ ಗಣೇಶ್‌, ಸಂಚಾರ ವಿಭಾಗದ ಎಸಿಪಿ ಮಂಜುನಾಥ ಶೆಟ್ಟಿ, ಟ್ರಾಫಿಕ್‌ ಇನ್‌ಸ್ಪೆಕ್ಟರ್‌ಗಳಾದ ಅಮಾನುಲ್ಲಾ, ಗೋಪಾಲಕೃಷ್ಣ ಭಟ್‌, ಎಸ್‌ಐ ಸುಕುಮಾರನ್‌, ಸಿಸಿಆರ್‌ಬಿ ಇನ್ಸ್‌ಪೆಕ್ಟರ್‌ ಭಜಂತ್ರಿ, ಎಎಸ್‌ಐ ಬಾಲಕೃಷ್ಣ, ಎಚ್‌ಸಿ ಪುರುಷೋತ್ತಮ ಇದ್ದರು.

Follow Us:
Download App:
  • android
  • ios