ಪಕ್ಷ ಸಂಘಟಿಸಿ, ಕಾಂಗ್ರೆಸ್‌ ಗೆಲುವಿಗೆ ಶ್ರಮಿಸಿ : ಎಐಸಿಸಿ ಸದಸ್ಯೆ ಜಯಮಂಗಳಾ

ಪಟ್ಟಣದಲ್ಲಿ ತಳಮಟ್ಟದಿಂದ ಕಾಂಗ್ರೆಸ್‌ ಪಕ್ಷ ಸಂಘಟಿಸಿ ಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದು ಎಐಸಿಸಿ ಸದಸ್ಯೆ ಜಯಮಂಗಳಾ ಬೃಂಗೀಶ್‌ ತಿಳಿಸಿದರು.

Organize the party, work hard for Congress victory  AICC member Jayamangala snr

 ಸರಗೂರು :  ಪಟ್ಟಣದಲ್ಲಿ ತಳಮಟ್ಟದಿಂದ ಕಾಂಗ್ರೆಸ್‌ ಪಕ್ಷ ಸಂಘಟಿಸಿ ಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದು ಎಐಸಿಸಿ ಸದಸ್ಯೆ ಜಯಮಂಗಳಾ ಬೃಂಗೀಶ್‌ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸರಗೂರು ಪಟ್ಟಣ ಕಾಂಗ್ರೆಸ್‌ನಿಂದ ನೂತನ ಅಧ್ಯಕ್ಷ ಎಸ್‌.ಎನ್‌. ನಾಗರಾಜು ಅಧ್ಯಕ್ಷತೆಯಲ್ಲಿ ನಡೆದ ಧ್ರುವನಾರಾಯಣ ಅವರಿಗೆ ಶ್ರದ್ಧಾಂಜಲಿ ಸಭೆ, ಪಕ್ಷ ಸಂಘಟನೆ ಸಭೆಯಲ್ಲಿ ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್‌ ವಿತರಿಸಿ ಅವರು ಮಾತನಾಡಿದರು.

ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದ್ದಾಗ ಸರಗೂರು ನೂತನ ತಾಲೂಕಾಗಿ ಘೋಷಣೆಯಾಯಿತು. ಅಲ್ಲದೆ ಶಾಸಕ ಅನಿಲ್‌ ಚಿಕ್ಕಮಾದು ಅವರು ಸರಗೂರು ಪಟ್ಟಣದ ಅಭಿವೃದ್ಧಿಗೆ ಪೂರಕವಾದ ಅನುದಾನ ನೀಡಿ, ಶ್ರಮಿಸುತ್ತಿದ್ದಾರೆ. ಹೀಗಾಗಿ ಈ ಬಾರಿ ಪಟ್ಟಣದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬಲಪಡಿಸುವ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್‌ ವಿಜಯಿಯಾಗಲು ಎಲ್ಲರೂ ಮುಂದಾಗಬೇಕು ಎಂದು ಅವರು ಕರೆ ನೀಡಿದರು.

ಜಿಪಂ ಮಾಜಿ ಸದಸ್ಯ ಪಿ. ರವಿ ಮಾತನಾಡಿ, ಪಕ್ಷದ ಪಟ್ಟಣ ಅಧ್ಯಕ್ಷ ಎಸ್‌.ಎನ್‌. ನಾಗರಾಜು ಅವರು ತುಂಬಾ ಕ್ರೀಯಾಶೀಲರಾಗಿದ್ದು, ಅವರು ಸಂಘಟನಾ ಚತುರತೆಯುಳ್ಳವರಾಗಿದ್ದಾರೆ. ಇಂಥವರನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ಸಂತಸ. ಮುಂದಿನ ದಿನಗಳಲ್ಲಿ ಪಕ್ಷದ ಏಳಿಗೆಗಾಗಿ ದುಡಿಯಲಿದ್ದಾರೆ. ಅಲ್ಲದೆ ಧ್ರುವನಾರಾಯಣ ಅವರು ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಅವರು ಹೇಳಿದರು.

ಕಾಂಗ್ರೆಸ್‌ ಪಟ್ಟಣ ಅಧ್ಯಕ್ಷ ಎಸ್‌.ಎನ್‌. ನಾಗರಾಜ್‌ ಮಾತನಾಡಿ, ಎಲ್ಲರೂ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು. ಗ್ಯಾರಂಟಿ ಕಾರ್ಡ್‌ ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್‌ ಉಚಿತ ವಿದ್ಯುತ್‌, ಮನೆಯೊಡತಿಗೆ . 2 ಸಾವಿರ ಪೋ›ತ್ಸಾಹ ಧನ ನೀಡಲು ಗೃಹಲಕ್ಷ್ಮಿ ಯೋಜನೆ ಜಾರಿ, ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್‌ ಕಾರ್ಡ್‌ದಾರರಿಗೆ 10 ಕೆಜಿ ಅಕ್ಕಿ ಉಚಿತವಾಗಿ ನೀಡಬೇಕು. ಹೀಗಾಗಿ ಎಲ್ಲರೂ ಕಾಂಗ್ರೆಸ್‌ ಪಕ್ಷ ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದರು.

ಕಾಂಗ್ರೆಸ್‌ ಪಟ್ಟಣ ಘಟಕದ ಮಾಜಿ ಅಧ್ಯಕ್ಷ ಯೋಗೀಶ್‌, ಪಪಂ ಸದಸ್ಯರಾದ ಶ್ರೀನಿವಾಸ್‌, ಚಲುವಕೃಷ್ಣ, ಎಂ. ಕೆಂಡಗಣ್ಣಸ್ವಾಮಿ ಮಾತನಾಡಿ, ಸರಗೂರು ತಾಲೂಕು ಕೇಂದ್ರವಾಗಿ ಘೋಷಣೆಯಾಗಲು ಅವಿರತವಾಗಿ ಶ್ರಮಿಸಿದರು. ಗ್ರಾಮಾಂತರ ಭಾಗದ ಪ್ರತಿ ಹಳ್ಳಿಗಳಲ್ಲಿ ಅಂಬೇಡ್ಕರ್‌ ಭವನ, ವಾಲ್ಮೀಕಿ ಭವನ, ವಿಶ್ವಕರ್ಮ ಸಮುದಾಯ ಭವನ ಸೇರಿದಂತೆ ಭವನಗಳು ನಿರ್ಮಾಣಗೊಳ್ಳಲು ಧ್ರುವನಾರಾಯಣ್‌ ಅವರ ಶ್ರಮ ಅಪಾರವಾದುದು. ಅವರ ಸರಳತೆ, ನಾಯಕತ್ವ ಗುಣ, ಕಾರ್ಯವೈಖರಿ ಸ್ಮರಣೀಯ ಎಂದರು.

ಕಾಂಗ್ರೆಸ್‌ ಮುಖಂಡರಾ ಬೃಂಗೀಶ್‌, ಮುಜೀಬ್‌, ಎಸ್‌.ಎನ್‌. ನಾಗಯ್ಯ, ಶ್ರೀನಿವಾಸ್‌, ಚಲುವಕೃಷ್ಣ, ಎಂ. ಕೆಂಡಗಣ್ಣಸ್ವಾಮಿ ರಮೇಶ್‌, ವೆಂಕಟಪ್ಪ, ದಾಸರಾಜು, ಭೀಮಯ್ಯ, ಮೆಡಿಕಲ್‌ ನಿತೀನ್‌, ಹನುಮಂತಯ್ಯ, ಕೃಷ್ಣ, ಕಾಳಿಪ್ರಸಾದ್‌, ನೀಲಾಧರ್‌, ಸೂಯೆಲ್‌, ಸುಭಾನ್‌, ಮಹದೇವ, ಶಿವಲಿಂಗಯ್ಯ, ವೈಕುಂಠಯ್ಯ, ಗೋಪಾಲಯ್ಯ, ಡ್ರೈವರ್‌ ವೆಂಕಟಪ್ಪ, ಪ್ರಕಾಶ್‌, ಜನಾರ್ಧನ್‌, ಶಿವು, ನಂಜುಂಡ, ಉಮೇಶ್‌ ಮೊದಲಾದವರು ಇದ್ದರು.

ಇದಕ್ಕೂ ಮುನ್ನಾ ಇತ್ತೀಚಿಗೆ ನಿಧನರಾದ ಮಾಜಿ ಸಂಸದ ಆರ್‌. ಧ್ರುವನಾರಾಯಣ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದೇ ವೇಳೆ ಸರಗೂರು ಟೌನ್‌ನ ಕಾಂಗ್ರೆಸ್‌ಗೆ ನೂತನ ಅಧ್ಯಕ್ಷ ನೇಮಕಗೊಂಡ ಎಸ್‌.ಎನ್‌. ನಾಗರಾಜು ಅವರನ್ನು ಕಾಂಗ್ರೆಸ್‌ ಕಾರ್ಯಕರ್ತರಿಂದ ಅಭಿನಂದಿಸಲಾಯಿತು.

Latest Videos
Follow Us:
Download App:
  • android
  • ios