Asianet Suvarna News Asianet Suvarna News

ವರುಣದಿಂದಲೇ ಸಿದ್ದು ಸ್ಪರ್ಧೆ: ಯಡಿಯೂರಪ್ಪ

ತುಮಕೂರು: ಸಿದ್ದರಾಮಯ್ಯ ಅವರು ವರುಣ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತಾರೆಂದು ಮಾಜಿ ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.

Competition from Varuna itself: Yediyurappa snr
Author
First Published Mar 19, 2023, 5:01 AM IST

 ಯಡಿಯೂರಪ್ಪ :  ತುಮಕೂರು: ಸಿದ್ದರಾಮಯ್ಯ ಅವರು ವರುಣ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತಾರೆಂದು ಮಾಜಿ ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.

ತಿಪಟೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ಸಿದ್ದರಾಮಯ್ಯ ಅವರ ಬಗ್ಗೆ ಒಂದು ಮಾತನಾಡಿದ್ದೆ. ಅವರು ಅನಗತ್ಯವಾಗಿ ಅಲ್ಲಿ ಇಲ್ಲಿ ಕೋಲಾರ ಅಂತ ಕಥೆ ಹೇಳುತ್ತಿದ್ದಾರೆ. ಆದರೆ ಇದರಲ್ಲಿ ಸತ್ಯಾಂಶ ಇಲ್ಲ. ಅವರು ವರುಣಾದಲ್ಲಿ ನಿಲ್ಲುತ್ತಾರೆಂದು ಹಿಂದೆಯೇ ಹೇಳಿದ್ದೆ. ಬಹುಶಃ ನನ್ನ ಮಾತು ನಿಜ ಆಗಬಹುದು. ಪಟ್ಟಿಬಿಡುಗಡೆಯಾದ ಮೇಲೆ ನೀವೇ ನೋಡುತ್ತೀರಾ. ಅನಗತ್ಯವಾಗಿ ಈ ರೀತಿ ಕೋಲಾರ ಮತ್ತೊಂದು ಅಂತ ಹೇಳುವ ಅಗತ್ಯ ಇರಲಿಲ್ಲ ಎಂದರು.

ಬಿಜೆಪಿ 135-140 ಸ್ಥಾನ ಗೆದ್ದು ಸರ್ಕಾರ ಮಾಡುವುದು ನಿಶ್ಚಿತ ಅನ್ನೋ ವಾತಾವರಣ ಮೂಡಿದೆ. ಎಲ್ಲಾ ಕಡೆ ವಾತಾವರಣ ನಮ್ಮ ನಿರೀಕ್ಷೆ ಮೀರಿ ಇದೆ. ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಕಾಂಗ್ರೆಸ್‌ ಸೇರುವ ವಿಚಾರ ಇದು ಸತ್ಯಕ್ಕೆ ದೂರವಾದದ್ದು. ನಡ್ಡಾಜಿ ಅವರ ನೇತೃತ್ವದಲ್ಲಿ ನಡೆದ ಎಲ್ಲಾ ಚುನಾವಣೆಗಳಲ್ಲಿ ನಾವು ಜಯಭೇರಿ ಬಾರಿಸಿದ್ದೇವೆ ಎಂದರು.

ಕೋಲಾರದಿಂದ ಸ್ಪರ್ಧೆ ಇಲ್ಲ

ನವದೆಹಲಿ(ಮಾ.18): ನಿಮಗೆ ಕೋಲಾರ ಸೂಕ್ತ ಅಲ್ಲ, ನೀವು ವರುಣಾದಿಂದಲೇ ಸ್ಪರ್ಧೆ ಮಾಡಿ, ನಿಮ್ಮ ಪ್ರತಿ ಒಂದು ನಿಮಿಷವೂ ಪಕ್ಷಕ್ಕೆ ಅಗತ್ಯವಾಗಿದೆ. ನಾಮಪತ್ರ ಹಾಕಿ ಬೇರೆ ಕಡೆ ಪ್ರಚಾರ ಮಾಡಿ ಅಂತ ಸ್ವತಃ ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಅವರೇ ಸಿದ್ದರಾಮಯ್ಯಗೆ ಸೂಚನೆ ನೀಡಿದ್ದಾರೆ.

ರಾಹುಲ್ ಗಾಂಧಿ ಅವರ ಸೂಚನೆಗೆ ಸಿದ್ದರಾಮಯ್ಯ ಸಹಮತ ವ್ಯಕ್ತಪಡಿಸಿದ್ದಾರೆ ಅಂತ ತಿಳಿದು ಬಂದಿದೆ. ಪಕ್ಷದ ನಾಯಕರ ಜೊತೆಗೆ ಹೋಗಿ ಚರ್ಚೆ ಮಾಡ್ತೇನೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ.

ಸಿದ್ದರಾಮಯ್ಯಗೆ ಗೆಲುವಿನ ಗ್ಯಾರಂಟಿ ಇಲ್ಲ, ಇತರರನ್ನು ಹೇಗೆ ಗೆಲ್ಲಿಸುತ್ತಾರೆ: ಎಚ್‌.ಡಿ.ಕುಮಾರಸ್ವಾಮಿ

ಹೀಗಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವುದು ಖಚಿತವಾಗಿದೆ. ರಾಹುಲ್ ಗಾಂಧಿ ಅವರ ಸಲಹೆಗೆ ಸಿದ್ದರಾಮಯ್ಯ ಸಹಮತ ವ್ಯಕ್ತಪಡಿಸಿದ್ದಾರೆ. 

ಇನ್ನು ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಿನ್ನೆಯ ಸಭೆಯಲ್ಲೇ ನನ್ನ ಟಿಕೆಟ್ ಕ್ಲಿಯರ್ ಮಾಡಿಲ್ಲ ಅಮತ ಹೇಳುವ ಮುಲಕ ಕೋಲಾರದಲ್ಲಿ ನಿಲ್ಲುವುದಿಲ್ಲ ಅಂತ ಪರೋಕ್ಷವಾಗಿ ಹೇಳಿದ್ದಾರೆ. ನನ್ನ ಸ್ಪರ್ಧೆಯ ವಿಚಾರವನ್ನ ನಾನು ಹೈಕಮಾಂಡ್‌ಗೆ ಬಿಟ್ಟಿದ್ದೇನೆ, ಅವರು ಏನು ತೀರ್ಮಾನ ಮಾಡ್ತಾರೋ ಮಾಡ್ಲಿ ಅಂತ ಸ್ಪಷ್ಟಪಡಿಸಿದ್ದಾರೆ. 

ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಿಸಿಕೊಂಡಂತೆ ಬಿಜೆಪಿ ಸಮಾವೇಶ ಮಾಡುವುದಿಲ್ಲ: ನಳಿನ್‌ ಕುಮಾರ್ ಕಟೀಲ್

ನಂಜನಗೂಡು ಟಿಕೆಟ್ ಬಗ್ಗೆ ನಿನ್ನೆಯ ಸಭೆಯಲ್ಲಿ ಚರ್ಚೆ ಯಾಗಿಲ್ಲ, ಆದ್ರೆ ದೃವನಾರಾಯಣ ಪುತ್ರನಿಗೆ ಬಹುತೇಕ ಟಿಕೆಟ್ ಪಕ್ಕಾ ಆಗಿದೆ. ಇಬ್ಬರೇ ಟಿಕೆಟ್‌ಗೆ ಅರ್ಜಿ ಹಾಕಿದ್ದರು. ಆದ್ರೆ ಮಹದೇವಪ್ಪ ಅವರು ಹಿಂದೆ ಸರಿದಿದ್ದಾರೆ. ನಾನು ಕೂಡ ದೃವನಾರಾಯಣ ಪುತ್ರನಿಗೆ ಟಿಕೆಟ್ ಕೊಡಬೇಕು ಒತ್ತಾಯ ಮಾಡಿದ್ದೇನೆ ಅಂತ ತಿಳಿಸಿದ್ದಾರೆ. 

ನಿಜವಾಯ್ತು ಸುವರ್ಣ ನ್ಯೂಸ್ ಪ್ರೆಡಿಕ್ಷನ್‌..!

ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡಲ್ಲ ಎಂದು ಸುವರ್ಣ ನ್ಯೂಸ್ ಬಹಳ ದಿನಗಳ ಹಿಂದೆಯೇ ಹೇಳಿತ್ತು. ವರುಣಾದಿಂದಲೇ ಸಿದ್ದರಾಮಯ್ಯ ಸ್ಪರ್ಧೆಗೆ ಇಳಿಯಲಿದ್ದಾರೆ. ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡಿದ್ರೆ ಗೆಲ್ಲುವ ಸಾದ್ಯತೆ ತೀರಾ ಕಡಿಮೆ ಅಂತ ಹೇಳಿತ್ತು. ಕಾಂಗ್ರೆಸ್ ಆಂತರಿಕ ಸಮೀಕ್ಷೆಯಲ್ಲೂ ಇದೇ ವಿಚಾರ ಬಯಲಾಗಿತ್ತು. ನಾಯಕರ ನಡುವಿನ ಮುಸುಕಿನ ಗುದ್ದಾಟ ಸಿದ್ದರಾಮಯ್ಯ ಗೆಲುವಿಗೆ ತೊಡಕಾಗಿತ್ತು. ವರುಣಾ ಕ್ಷೇತ್ರ ವೇರಿ ಸೇಫ್ ಎಂಬುದಾಗಿ ಸಮೀಕ್ಷೆ ಹೇಳಿತ್ತು. ಅಂತಿಮವಾಗಿ ಕಾಂಗ್ರೆಸ್‌ ಹೈಕಮಾಂಡ್ ಕೂಡ ಅದನ್ನೇ ಹೇಳಿದೆ.  ಇದೀಗ ಕೋಲಾರ ಬಿಟ್ಟು ಸಿದ್ದರಾಮಯ್ಯ ಮತ್ತೆ ವರುಣಾ ಕಡೆ ಮುಖ ಮಾಡಲಿದ್ದಾರಾ? ಎಂಬ ಪ್ರಶ್ನೆಗಳು ಎದ್ದಿವೆ.

Follow Us:
Download App:
  • android
  • ios