ಆ.15 ರೈತ ಹಾಗೂ ಪ್ರಗತಿಪರ ಸಂಘಟನೆ ಹಾಗೂ ಪಕ್ಷಾತೀತ ನಿರಂತರ ಹೋರಾಟಕ್ಕೆ ಮಣಿದ ಮಧುಗಿರಿ ಬೆಸ್ಕಾಂ ವಿಭಾಗದ ಅಧಿಕಾರಿಗಳು ಸಮರ್ಪಕ ವಿದ್ಯುತ್‌ ಸರಬರಾಜ್‌ಗೆ ಮುಂದಾಗಿದ್ದು ಅ.15ರಿಂದ ರಾತ್ರಿ 11 ಗಂಟೆಯಿಂದ ಬೆಳಿಗ್ಗೆ ನಾಲ್ಕು ಗಂಟೆಯವರೆಗೆ ಸತತ 5 ಗಂಟೆಗಳ ಕಾಲ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಪೂರೈಸಲು ಕ್ರಮವಹಿಸಿರುವುದಾಗಿ ರೈತ ಸಂಘದ ಅಧ್ಯಕ್ಷ ಪೂಜಾರಪ್ಪ ತಿಳಿಸಿದ್ದಾರೆ.

ಪಾವಗಡ : ಆ.15 ರೈತ ಹಾಗೂ ಪ್ರಗತಿಪರ ಸಂಘಟನೆ ಹಾಗೂ ಪಕ್ಷಾತೀತ ನಿರಂತರ ಹೋರಾಟಕ್ಕೆ ಮಣಿದ ಮಧುಗಿರಿ ಬೆಸ್ಕಾಂ ವಿಭಾಗದ ಅಧಿಕಾರಿಗಳು ಸಮರ್ಪಕ ವಿದ್ಯುತ್‌ ಸರಬರಾಜ್‌ಗೆ ಮುಂದಾಗಿದ್ದು ಅ.15ರಿಂದ ರಾತ್ರಿ 11 ಗಂಟೆಯಿಂದ ಬೆಳಿಗ್ಗೆ ನಾಲ್ಕು ಗಂಟೆಯವರೆಗೆ ಸತತ 5 ಗಂಟೆಗಳ ಕಾಲ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಪೂರೈಸಲು ಕ್ರಮವಹಿಸಿರುವುದಾಗಿ ರೈತ ಸಂಘದ ಅಧ್ಯಕ್ಷ ಪೂಜಾರಪ್ಪ ತಿಳಿಸಿದ್ದಾರೆ.

ಈ ಕುರಿತು ಭಾನುವಾರ ಸುದ್ದಿಗಾರರ ಜತೆ ರಾಜ್ಯ ರೈತ ಸಂಘದ ತಾಲೂಕು ಶಾಖೆಯ ಅಧ್ಯಕ್ಷರಾದ ದೊಡ್ಡಹಟ್ಟಿ ಪೂಜಾರಪ್ಪ ಮಾತನಾಡಿ, ವಿದ್ಯುತ್‌ ಕಣ್ಣಾಮುಚ್ಚಲೆ ಹಾಗೂ ಪದೇ ಪದೇ ವಿದ್ಯುತ್‌ ಕಡಿತದ ಪರಿಣಾಮ ಗೃಹಬಳಕೆಗೆ ಅಡೆತಡೆ ಹಾಗೂ ವಿದ್ಯಾರ್ಥಿಗಳ ಅದ್ಯಯನಕ್ಕೆ ತೊಂದರೆ ಸೇರಿದಂತೆ ಪಂಪ್‌ ಸೆಟ್‌ ಗಳಿಗೆ ವಿದ್ಯುತ್‌ ಸಂಪರ್ಕ ಕಡಿತದಿಂದ ಬೆಳೆನಾಶ ಹಾಗೂ ರಾತ್ರಿ ವೇಳೆ ಜಮೀನುಗಳಲ್ಲಿ ಹಂದಿ ಕರಡಿ ಹಾವು ಚೇಳು ಇತರೆ ಕಾಡುಪ್ರಾಣಿಗಳ ಹಾವಳಿಯಿಂದ ರೈತರು ಭೀತಿಗೊಂಡಿದ್ದರು.

ಇದರಿಂದ ಬೇಸೆತ್ತ ರೈತ ಸಂಘಟನೆ ಇತ್ತೀಚೆಗೆ ಬೆಸ್ಕಾಂಗೆ ಮುತ್ತಿಗೆ ಹಾಕಿ ತಾಲೂಕು ಕಚೇರಿಗೆ ಮನವಿ ಸಲ್ಲಿಸಿ ಸರ್ಕಾರಕ್ಕೆ ಒತ್ತಾಯಿಸಲಾಗಿತ್ತು. ಸಂಘ ಸಂಸ್ಥೆ ಹಾಗೂ ಪ್ರತಿಪಕ್ಷಗಳ ಹೋರಾಟಕ್ಕೆ ಮಣಿದ ಸರ್ಕಾರ ಸಮರ್ಪಕ ವಿದ್ಯುತ್‌ ಪೂರೈಕೆಗೆ ಮುಂದಾಗಿದ್ದು ಅ.15ರ ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 4 ಗಂಟೆ ವರೆಗೆ, ಸತತ 5 ಗಂಟೆಗಳ ಕಾಲ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಪೂರೈಕೆ ಮಾಡಲಿರುವುದಾಗಿ ಮಧುಗಿರಿಯ ಬೆಸ್ಕಾಂ ವಿಭಾಗದ ಎಇ ಹಾಗೂ ಇಲ್ಲಿನ ಬೆಸ್ಕಾಂ ಉಪವಿಭಾಗದ ಎಇಇ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

ರಾತ್ರಿ ಪೂರಾ ಸಿಂಗಲ್‌ ಫೇಸ್‌ ವಿದ್ಯುತ್‌ ಸರಬರಾಜ್‌ ಮಾಡಲಿದ್ದು ಕೆಲ ಕಡೆ ಪಂಪುಸೆಟ್‌ಗಳಿಗೆ ಅಕ್ರಮವಾಗಿ ಸಂಪರ್ಕ ಪಡೆದ ಪರಿಣಾಮ ವಿದ್ಯುತ್‌ ಸೋರಿಕೆಯಾಗಿದೆ.ರೈತರು ಅಕ್ರಮ ವಿದ್ಯುತ್‌ ಸಂಪರ್ಕ ತೆರವುಗೊಳಿಸಬೇಕು. ಇದನ್ನು ತಡೆಯಲು ವಿದ್ಯುತ್‌ ತನಿಖಾ ತಂಡ ರಚಿಸಿರುವುದಾಗಿ ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ರೈತರ ಸಂಕಷ್ಟಕ್ಕೆ ಸ್ಪಂಧಿಸಿ ವಿದ್ಯುತ್‌ ಪೂರೈಕೆಗೆ ಮುಂದಾದ ಸರ್ಕಾರದ ಕ್ರಮ ಹಾಗೂ ಬೆಸ್ಕಾಂ ವಿಭಾಗದ ಎಇ ಹಾಗೂ ಇಲ್ಲಿನ ಬೆಸ್ಕಾಂ ಎಇಇಗೆ ತಾಲೂಕಿನ ರೈತ ಹಾಗೂ ಜನತೆಯ ಪರವಾಗಿ ತಾಲೂಕು ರೈತ ಸಂಘದಿಂದ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.