ರಾಜ್ಯ ಸರ್ಕಾರಕ್ಕೆ ಆದೇಶಿಸಿದ್ದ ಕ್ರಮದ ಬಗ್ಗೆ ಜಾತ್ಯಾತೀತ ಜನತಾ ದಳ ವಿರೋಧ
ಮಳೆಯ ಅಭಾವದಿಂದ ಪ್ರಸಕ್ತ ಸಾಲಿಗೆ ರಾಜ್ಯದಲ್ಲಿ ಬರ ಅವರಿಸಿದೆ. ಕುಡಿವ ನೀರಿನ ಸಮಸ್ಯೆ ಹಾಗೂ ಕೆರೆ ಕೊಳವೆಬಾವಿಗಳು ಬತ್ತಿಹೋಗಿ ನೀರಾವರಿ ಬೆಳೆಗಳು ನಷ್ಟಕ್ಕಿಡಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಎತ್ತಿ ಹಿಡಿಯುವ ಮೂಲಕ ನ್ಯಾಯಾಲವು ತಮಿಳುನಾಡಿಗೆ ಹೆಚ್ಚುವರಿ ನೀರು ಬಿಡಲು ರಾಜ್ಯ ಸರ್ಕಾರಕ್ಕೆ ಆದೇಶಿಸಿದ್ದ ಕ್ರಮದ ಬಗ್ಗೆ ಜಾತ್ಯಾತೀತ ಜನತಾ ದಳದ ಜಿಲ್ಲಾಧ್ಯಕ್ಷ ಪಾವಗಡದ ಆರ್.ಸಿ.ಅಂಜಿನಪ್ಪ ಆಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಾವಗಡ : ಮಳೆಯ ಅಭಾವದಿಂದ ಪ್ರಸಕ್ತ ಸಾಲಿಗೆ ರಾಜ್ಯದಲ್ಲಿ ಬರ ಅವರಿಸಿದೆ. ಕುಡಿವ ನೀರಿನ ಸಮಸ್ಯೆ ಹಾಗೂ ಕೆರೆ ಕೊಳವೆಬಾವಿಗಳು ಬತ್ತಿಹೋಗಿ ನೀರಾವರಿ ಬೆಳೆಗಳು ನಷ್ಟಕ್ಕಿಡಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಎತ್ತಿ ಹಿಡಿಯುವ ಮೂಲಕ ನ್ಯಾಯಾಲವು ತಮಿಳುನಾಡಿಗೆ ಹೆಚ್ಚುವರಿ ನೀರು ಬಿಡಲು ರಾಜ್ಯ ಸರ್ಕಾರಕ್ಕೆ ಆದೇಶಿಸಿದ್ದ ಕ್ರಮದ ಬಗ್ಗೆ ಜಾತ್ಯಾತೀತ ಜನತಾ ದಳದ ಜಿಲ್ಲಾಧ್ಯಕ್ಷ ಪಾವಗಡದ ಆರ್.ಸಿ.ಅಂಜಿನಪ್ಪ ಆಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಆರ್.ಸಿ.ಅಂಜಿನಪ್ಪ, ನ್ಯಾಯಾಲಯದ ಬಗ್ಗೆ ನಮಗೆ ಗೌರವವಿದೆ. ಆದರೂ ಮಳೆಯ ಅಭಾವದಿಂದ ರಾಜ್ಯದಲ್ಲಿ ಪರಿಸ್ಥಿತಿ ಸರಿಯಿಲ್ಲ .ಕುಡಿವ ನೀರಿನ ಅಭಾವವಿದೆ. ಕೊಳವೆಬಾವಿಗಳು ಬತ್ತಿಹೋಗುವ ಹಂತಕ್ಕೆ ತಲುಪಿದ್ದು ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನಿತ್ಯ 5ಸಾವಿರ ಕ್ಯುಸೆಕ್ ನೀರು ಬಿಡಲು ರಾಜ್ಯ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಸರಿಯಿಲ್ಲ. ಇದನ್ನು ಎತ್ತಿಹಿಡಿಯುವ ಮೂಲಕ ಘನ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಆದೇಶಿಸಿದ್ದು, ಸಚಿವ ಸಂಪುಟದಲ್ಲಿ ತೀರ್ಮಾನಿಸಿ ರಾಜ್ಯ ಸರ್ಕಾರ ಸಮೇತ 3,500 ಕ್ಯುಸೆಕ್ ಕಾವೇರಿ ನದಿ ನೀರು ತಮಿಳುನಾಡಿಗೆ ಹರಿಸಲು ಉದ್ದೇಶಿಸಿರುವುದು ಸೂಕ್ತವಲ್ಲ. ಇಂತಹ ಭೀಕರ ಪರಿಸ್ಥಿತಿಯಲ್ಲಿ ರಾಜ್ಯದ ಹಿತ ಕಾಪಾಡುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.
ಕಾವೇರಿ ಹೋರಾಟಕ್ಕೆ ಕುಳಿತ ಮಂಡ್ಯದ ಗಂಡು ಅಂಬರೀಶ್ ಪುತ್ರ ಅಭಿಷೇಕ್: ಅಪ್ಪನಂತೆ ಬಿಗಿಪಟ್ಟು
ಈ ಹಿಂದೆ ಸಹ ಬಂಗಾರಪ್ಪ ಸಿಎಂ ಆಗಿದ್ದ ವೇಳೆ ತಮಿಳುನಾಡಿಗೆ ಕಾವೇರಿ ನೀರು ಬಿಡಲು ಆಸಕ್ತಿ ವಹಿಸಿರಲಿಲ್ಲ.ಕುಮಾರಸ್ವಾಮಿ ಸಿಎಂ ಅವಧಿಯಲ್ಲಿ ರಾಜ್ಯದ ಜನತೆ ಹಿತ ಕಾಪಾಡಿದ್ದಾರೆ. ರಾಜ್ಯದ ಸಮಸ್ಯೆ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ತಮಿಳುನಾಡಿಗೆ ಕಾವೇರಿ ನೀರು ಬಿಡುವುದರಿಂದ ಬೆಂಗಳೂರು ಸೇರಿದಂತೆ ಮೈಸೂರು, ರಾಮನಗರ,ಮಂಡ್ಯ ಮದ್ದೂರು ಹಾಗೂ ಇತರೆ ಅಕ್ಕಪಕ್ಕದ ತಾಲೂಕುಗಳಲ್ಲಿ ಕುಡಿವ ನೀರು ಮತ್ತು ರೈತರ ನೀರಾವರಿ ಪ್ರಗತಿಗೆ ತೀವೃ ಸಮಸ್ಯೆ ಎದುರಾಗಲಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ಮತ್ತು ರಾಜ್ಯ ಸರ್ಕಾರದ ಕ್ರಮದ ಬಗ್ಗೆ ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ. ರೈತರ ಹಿತ ಮರೆತು ತಮಿಳುನಾಡಿಗೆ ಕಾವೇರಿ ನೀರು ಬಿಡಲು ಮುಂದಾದರೆ, ಪಾವಗಡ ಸೇರಿದಂತೆ ತುಮಕೂರು ಜಿಲ್ಲಾದ್ಯಂತ ಜೆಡಿಎಸ್ ವತಿಯಿಂದ ಪ್ರತಿಭಟನೆಗೆ ಸಜ್ಜಾಗಬೇಕಿದೆ. ರಾಜ್ಯ ಸರ್ಕಾರ ಗ್ಯಾರಂಟಿಗಳಲ್ಲಿ ಮುಳುಗಿ ರಾಜ್ಯದ ರೈತಾಪಿ ಮತ್ತು ಜನಸಾಮಾನ್ಯರ ಹಿತ ಮರೆತಂತಿದ್ದು, ರಾಜ್ಯಾಧ್ಯಂತ ಪ್ರತಿಭಟನೆಗಳಿಗೆ ಸಜ್ಜಾಗುವ ಮುನ್ನ ನಿಮ್ಮ ಆದೇಶಗಳನ್ನು ಮರುಪರಿಶೀಲನೆ ನಡೆಸಿ,ರಾಜ್ಯದ ಜನತೆಯ ಹಿತಕಾಡುವುದು ಸೂಕ್ತ ಎಂದು ಹೇಳಿದರು.