ರಾಜ್ಯ ಸರ್ಕಾರದ ತಂದಿರುವ ಕಾರ್ಖಾನೆ ಕಾಯ್ದೆ ತಿದ್ದುಪಡಿಗೆ ವಿರೋಧ

ರಾಜ್ಯ ಸರ್ಕಾರದ ತಂದಿರುವ ಕಾರ್ಖಾನೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯು (ಜೆಸಿಟಿಯು) ಗುರುವಾರ ರಾಜಾದ್ಯಂತ ಒಂದು ದಿನದ ಕೈಗಾರಿಕಾ ಮುಷ್ಕರಕ್ಕೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಸಹ ವಿವಿಧ ಕಾರ್ಮಿಕ ಸಂಘಟನೆಯವರು ಜೆಸಿಟಿಯು ನೇತೃತ್ವದಲ್ಲಿ ಪ್ರತಿಭಟಿಸಿದರು.

 Opposition to the amendment of the Factory Act brought by the state government snr

ಮೈಸೂರು : ರಾಜ್ಯ ಸರ್ಕಾರದ ತಂದಿರುವ ಕಾರ್ಖಾನೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯು (ಜೆಸಿಟಿಯು) ಗುರುವಾರ ರಾಜಾದ್ಯಂತ ಒಂದು ದಿನದ ಕೈಗಾರಿಕಾ ಮುಷ್ಕರಕ್ಕೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಸಹ ವಿವಿಧ ಕಾರ್ಮಿಕ ಸಂಘಟನೆಯವರು ಜೆಸಿಟಿಯು ನೇತೃತ್ವದಲ್ಲಿ ಪ್ರತಿಭಟಿಸಿದರು.

ರಾಜ್ಯ ಸರ್ಕಾರ ಕಳೆದ ವಿಧಾನಸಭೆ ಅಧಿವೇಶನದಲ್ಲಿ ಕಾರ್ಖಾನೆಗಳ ಕಾಯ್ದೆ 1948ಕ್ಕೆ ತಿದ್ದುಪಡಿ ತಂದು, ಈ ಹಿಂದೆ ಇದ್ದ 9 ಗಂಟೆ ಕೆಲಸ, ವಾರಕ್ಕೆ 48 ಗಂಟೆಗಳ ಅವಧಿಯನ್ನು ಬದಲಾವಣೆ ಮಾಡಿ, ದಿನಕ್ಕೆ 12 ಗಂಟೆ ಕೆಲಸ ಮಾಡಿಸುವ ಮಸೂದೆ ಅಂಗೀಕರಿಸಿದೆ. ಇದರಿಂದ ಕಾರ್ಮಿಕರ ದುಡಿಮೆ ಅವಧಿ ಹೆಚ್ಚಾಗುವುದಲ್ಲದೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಲ್ಲದೆ ಹೆಚ್ಚುವರಿ ಭತ್ಯೆಯೂ ಸಿಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹಿಳಾ ಕಾರ್ಮಿಕರನ್ನು ರಾತ್ರಿ ವೇಳೆ ದುಡಿಸಿಕೊಳ್ಳುವ ಅವಕಾಶವನ್ನು ಕಾಯ್ದೆಯಲ್ಲಿ ನೀಡಲಾಗಿದೆ. ಇದರಿಂದ ಆರೋಗ್ಯ ಸಮಸ್ಯೆಗಳು ಉಂಟಾಗುವುದಲ್ಲದೆ ಅವರ ಮೇಲೆ ಶೋಷಣೆ, ದೌರ್ಜನ್ಯ ನಡೆಸಲು ಅನುವು ಮಾಡಿಕೊಡುತ್ತದೆ. ಈ ಕಾಯ್ದೆ ಮಾನವ, ಕಾರ್ಮಿಕ ವಿರೋಧಿಯಾಗಿದ್ದು, ಕಾರ್ಮಿಕರು 8 ಗಂಟೆ ಕೆಲಸ ಮಾಡಬೇಕು ಎಂಬ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯ ನಿರ್ಣಯಕ್ಕೆ ವಿರುದ್ಧವಾಗಿದೆ ಎಂದು ಅವರು ಕಿಡಿಕಾರಿದರು.

ತಜ್ಞರ ಸಮಿತಿ ರಚಿಸಿ, ಅವರ ಸಲಹೆ ಪಡೆದು ತಿದ್ದುಪಡಿ ಮಾಡದೆ ಏಕಾಏಕಿ ಮಾರ್ಪಾಡು ಮಾಡಿರುವುದು ಪ್ರಜಾಪ್ರಭುತ್ವ ಹಾಗೂ ಜನ ವಿರೋಧಿಯಾಗಿದೆ. ಹೀಗಾಗಿ, ಕೂಡಲೇ ಕಾರ್ಮಿಕ ಕಾಯ್ದೆ ತಿದ್ದುಪಡಿಯನ್ನು ಪಾವಸ್‌ ಪಡೆದು ಹಿಂದಿನಂತೆ 8 ಗಂಟೆ ಕೆಲಸದ ಅವಧಿ ನಿಗದಿ ಮಾಡಬೇಕು. ರಾತ್ರಿ ವೇಳೆ ಮಹಿಳಾ ಕಾರ್ಮಿಕರನ್ನು ದುಡಿಸಿಕೊಳ್ಳಬಾರದು ಎಂದು ಅವರು ಒತ್ತಾಯಿಸಿದರು.

ಅಲ್ಲದೆ, ವಾರಕ್ಕೆ 5 ದಿನ ಕೆಲಸ, ದಿನಕ್ಕೆ 7 ಗಂಟೆ ಕೆಲಸ, ವಾರಕ್ಕೆ 35 ಗಂಟೆ ಕೆಲಸ ಅವಧಿ ನಿಗದಿಪಡಿಸಲು ಕಾರ್ಖಾನೆ ಕಾಯ್ದೆ ತಿದ್ದುಪಡಿ ತರಬೇಕು ಎಂದು ಅವರು ಆಗ್ರಹಿಸಿದರು. ಸಮಿತಿಯ ಮುಖಂಡರಾದ ಎನ್‌.ಕೆ. ದೇವದಾಸ್‌, ಬಾಲಾಜಿರಾವ್‌, ಚಂದ್ರಶೇಖರ ಮೇಟಿ, ಅನಿಲ್‌ಕುಮಾರ್‌, ಜವರಯ್ಯ ಮೊದಲಾದವರು ಇದ್ದರು.

ಹಂಪಿ ಶುಗರ್ಸ್‌ಗೆ ಗ್ರೀನ್ ಸಿಗ್ನಲ್

ಬೆಂಗಳೂರು (ಮಾ.08): ರಾಜ್ಯದ ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ವಾರ್ಷಿಕ 7,246.85 ಕೋಟಿ ಮೀಸಲು ಇಡಲಾಗಿದೆ. ವಿಜಯನಗರದಲ್ಲಿ ಹಂಪಿ ಶುಗರ್ಸ್ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಅನುಮೋದನೆ ನೀಡಿದ್ದು, 454 ಕೋಟಿ ವೆಚ್ಚದಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಿಸಲು ಮಾರ್ಗಸೂಚಿ ದರದಲ್ಲಿ 82 ಎಕರೆ ಜಮೀನು ಮಂಜೂರು ಮಾಡಲಾಗುತ್ತದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.

ಸಚಿವ ಸಂಪುಟ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು. ರಾಜ್ಯದ ಮಧ್ಯಭಾಗದಲ್ಲಿರುವ ವಿಜಯನಗರ ಜಿಲ್ಲೆಯಲ್ಲಿ ಹೊಸಪೇಟೆ ಬಳಿ ಹಂಪಿ ಶುಗರ್ಸ್ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಅನುಮೋದನೆ ರಾಜ್ಯ ಸರ್ಕಾರ ಅನುಮೋದನೆಯನ್ನು ನೀಡಿದೆ. ಸಂಸದ ಜಿಎಂ ಸಿದ್ದೇಶ್ವರ ಒಡೆತನದ ಹಂಪಿ ಸಕ್ಕರೆ ಕಾರ್ಖಾನೆ ಕಂಪನಿಯಿಂದ 454 ಕೋಟಿ ವೆಚ್ಚದಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಿಸಲಾಗುತ್ತದೆ. ಇನ್ನು ಸರ್ಕಾರದ ಮಾರ್ಗಸೂಚಿ ದರದಲ್ಲಿ 82 ಎಕರೆ ಜಮೀನು ಮಂಜೂರು ಮಾಡಲಾಗುತ್ತದೆ. ಇದರಿಂದ 2 ಸಾವಿರ ಉದ್ಯೋಗ ಸೃಷ್ಟಿ ನಿರೀಕ್ಷೆಯಿದೆ ಎಂದು ತಿಳಿಸಿದರು. 

ರಾಜ್ಯ ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ ಯಾರಿಗೆ ಎಷ್ಟು?

ಗಣಿಬಾದಿತ ಪ್ರದೇಶಗಳ ಅಭಿವೃದ್ಧಿ: ಗಣಿಬಾದಿತ ಪ್ರದೇಶಗಳಾದ ಬಳ್ಳಾರಿ, ಹೊಸಪೇಟೆ, ಚಿತ್ರದುರ್ಗ ಹಾಗೂ ತುಮಕೂರಿನಲ್ಲಿ ಅಕ್ರಮ ಗಣಿಗಾರಿಕೆ ಸರಬರಾಜು ವೇಳೆ ಬರೋಬ್ಬರಿ 25 ಸಾವಿರ ಕೋಟಿ‌ ರೂ. ಸಂಗ್ರಹವಾಗಿತ್ತು. ಈ ಹಣದಲ್ಲಿ ಅಭಿವೃದ್ಧಿ ಕೆಲಸ ಮಾಡಲು ಅನುಮತಿ ನೀಡಲಾಗಿದೆ. ಕೆಎಂಇಆರ್ ಸಿ ನಡಿ ಅಭಿವೃದ್ಧಿ ಕಾರ್ಯಗಳಿಗೆ ಹಣ ನೀಡಲು ಅವಕಾಶವಿದೆ. ಸುದರ್ಶನ್ ಅಧ್ಯಕ್ಷತೆಯಲ್ಲಿ ಕಮಿಟಿ ರಚಿಸಲಾಗಿದೆ. ಈ ಕಮಿಟಿ ಅಭಿವೃದ್ಧಿ ಬಗ್ಗೆ ಗಮನಹರಿಸಲಿದೆ. ಸರ್ಕಾರದ ಇಲಾಖೆ ಪ್ರಾಜೆಕ್ಟ್ ನೀಡಲಿದೆ. ಕಮಿಟಿ ಹಣ ಕೊಡುವ ಬಗ್ಗೆ ತೀರ್ಮಾನಿಸುತ್ತದೆ. ಗಣಿಬಾಧಿತ ಪ್ರದೇಶಗಳಲ್ಲಿ ಅಭಿವೃದ್ಧಿಗೆ ಹಣ ವಿನಿಯೋಗ ಮಾಡಲಾಗುತ್ತದೆ. ಶಾಲೆ ಕಟ್ಟಡ, ನೀರಿನ‌ ಯೋಜನೆಗೆ ಬಳಸಬಹುದು. ಇದರಲ್ಲಿ 17 ಸಾವಿರ ಕೋಟಿ ರೂ. ಹಣ ಬಳ್ಳಾರಿ ಮತ್ತು ಹೊಸಪೇಟೆ ಅಭಿವೃದ್ಧಿಗೆ ಬಳಸಲಾಗುತ್ತದೆ.

Latest Videos
Follow Us:
Download App:
  • android
  • ios