ಇದೀಗ ಮೂಲ ವೇತನದ ಶೇ.17 ರಷ್ಟು ವೇತನ ಹೆಚ್ಚಳ ಮಾಡಲಾಗಿದೆ. ಇದರಿಂದ ಮೂಲ ವೇತನ 17 ಸಾವಿರ ರು. ಇರುವ ನೌಕರನಿಗೆ ವೇತನ ಹೆಚ್ಚಳದಿಂದ 2,890 ರು. ಹಾಗೂ 5,270 ರು. ತುಟ್ಟಿಭತ್ಯೆ (ಶೇ.31) ಹೆಚ್ಚುವರಿಯಾಗಿ ದೊರೆಯಲಿದೆ.
ಬೆಂಗಳೂರು(ಮಾ.02): ರಾಜ್ಯ ಸರ್ಕಾರವು 7ನೇ ವೇತನ ಆಯೋಗದ ಮಧ್ಯಂತರ ಪರಿಹಾರವಾಗಿ ನೌಕರರ ಮೂಲ ವೇತನದ ಶೇ.17ರಷ್ಟು ವೇತನ ಹೆಚ್ಚಳ ಮಾಡಿ ಆದೇಶಿಸಿದೆ. ಇದರಿಂದ ಯಾವ್ಯಾವ ವೇತನ ಹಂತದಲ್ಲಿರುವವರಿಗೆ ಎಷ್ಟೆಷ್ಟು ಹೆಚ್ಚುವರಿ ಪರಿಹಾರ ವೇತನ ಸಿಗಲಿದೆ ಎಂಬ ಲೆಕ್ಕಾಚಾರ ಇಲ್ಲಿದೆ.
2022ರ ಜು.1ರಿಂದ ಪೂರ್ವಾನ್ವಯ ಆಗುವಂತೆ ಬೊಮ್ಮಾಯಿ ಸರ್ಕಾರ 2022ರ ಅಕ್ಟೋಬರ್ ತಿಂಗಳಲ್ಲಿ ತುಟ್ಟಿಭತ್ಯೆಯನ್ನು ಶೇ.27.25 ರಿಂದ ಶೇ.31 ಕ್ಕೆ ಹೆಚ್ಚಳ (ಶೇ.3.75) ಮಾಡಿತ್ತು. ಇದೀಗ ಮೂಲ ವೇತನದ ಶೇ.17 ರಷ್ಟು ವೇತನ ಹೆಚ್ಚಳ ಮಾಡಲಾಗಿದೆ. ಇದರಿಂದ ಮೂಲ ವೇತನ 17 ಸಾವಿರ ರು. ಇರುವ ನೌಕರನಿಗೆ ವೇತನ ಹೆಚ್ಚಳದಿಂದ 2,890 ರು. ಹಾಗೂ 5,270 ರು. ತುಟ್ಟಿಭತ್ಯೆ (ಶೇ.31) ಹೆಚ್ಚುವರಿಯಾಗಿ ದೊರೆಯಲಿದೆ.
ಶೇ.17ರಷ್ಟು ವೇತನ ಹೆಚ್ಚಳ ಆದೇಶಕ್ಕೆ ಒಪ್ಪಿದ್ದೇವೆ ಸಮಾಧಾನವಿಲ್ಲ, 3 ತಿಂಗಳು ಕಾಯ್ತೆವೆ ಎಂದ ನೌಕರರು
40,900 ರು. ಮೂಲ ವೇತನ ಇದ್ದರೆ ಮಧ್ಯಂತರ ಪರಿಹಾರದಿಂದ 6,953 ರು. ವೇತನ ಹೆಚ್ಚಳ ಆಗಲಿದ್ದು, ಹೆಚ್ಚುವರಿಯಾಗಿ 12,679 ರು. ತುಟ್ಟಿಭತ್ಯೆ (ಡಿ.ಎ) ದೊರೆಯಲಿದೆ. 1,50,600 ರು. ವೇತನ ಇದ್ದರೆ ಮಧ್ಯಂತರ ಪರಿಹಾರದಿಂದ 25,602 ರು. ವೇತನ ಹೆಚ್ಚಳವಾಗಲಿದೆ. ತುಟ್ಟಿಭತ್ಯೆಯಿಂದ 46,686 ರು. ಸಿಗಲಿದೆ.
ಉದಾಹರಣೆ ಪಟ್ಟಿ:
ಮೂಲ ವೇತನ ಮಧ್ಯಂತರ ಪರಿಹಾರ (ಶೇ.17) ಪ್ರಸ್ತುತ ತುಟ್ಟಿಭತ್ಯೆ (ಶೇ.31)
17,000- 2,890- 5,270
30,350- 5,160- 9,409
40,900- 6,953- 12,679
50,150- 8,526- 15,547
1,02,100- 17,357- 31,651
1,50,600- 25,602- 46,686
