Asianet Suvarna News Asianet Suvarna News

ಮೈಸೂರು: ಜಂಬೂಸವಾರಿಗೆ 300 ಜನರಿಗಷ್ಟೇ ಅವಕಾಶ!

ದೀಪಾಂಲಕಾರ ನಿತ್ಯ 2 ಗಂಟೆ ಮಾತ್ರ| ಅ.14 ನಂತರ ಕೋವಿಡ್‌ ಟೆಸ್ಟ್‌ ಕಡ್ಡಾಯ| ಕೊರೋನಾ ಟೆಕ್ನಿಕಲ್‌ ಟೀಂ ಸರ್ಕಾರಕ್ಕೆ ವರದಿ| ಅಂತರ ರಾಜ್ಯ ಹಾಗೂ ವಿದೇಶಿ ಕಲಾವಿದರಿಗೆ ಈ ಬಾರಿ ದಸರಾದಲ್ಲಿ ಭಾಗಿಯಾಗಲು ಅವಕಾಶ ಇಲ್ಲ| 

Only 300 People Can See Jumboo Savari in Mysuru grg
Author
Bengaluru, First Published Oct 10, 2020, 7:11 AM IST

ಮೈಸೂರು(ಅ.10):  ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಕೇವಲ 300 ಜನರಿಗೆ ಅವಕಾಶ ಕಲ್ಪಿಸುವಂತೆ ಕೋವಿಡ್‌ ಟೆಕ್ನಿಕಲ್‌ ಟೀಂ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ದಸರಾ ಆಚರಣೆಯ ಸಂದರ್ಭದಲ್ಲಿ ಕೋವಿಡ್‌ ಸೋಂಕು ಹರಡದಂತೆ ಅಗತ್ಯ ಮುಂಜಾಗ್ರತಾ ಹಾಗೂ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಕೋವಿಡ್‌-19 ರಾಜ್ಯ ಮಟ್ಟದ ತಾಂತ್ರಿಕ ಸಲಹಾ ಸಮಿತಿಯು ಶುಕ್ರವಾರ ಮೈಸೂರಿಗೆ ಭೇಟಿ ನೀಡಿ ಪರಿಶೀಲಿಸಿತು.

ಕೋವಿಡ್‌-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ನಾಡಹಬ್ಬ ಮೈಸೂರು ದಸರಾ ಆಚರಣೆಯ ಪೂರ್ವಭಾವಿ ಸಿದ್ಧತಾ ಕಾರ್ಯಗಳನ್ನು ಕುರಿತಂತೆ ಜಿಲ್ಲಾಡಳಿತದಿಂದ ಮಾಹಿತಿ ಪಡೆದ ಅಧಿಕಾರಿಗಳು, ಚಾಮುಂಡಿಬೆಟ್ಟಹಾಗೂ ಅರಮನೆಯ ಆವರಣವನ್ನು ವೀಕ್ಷಿಸಿದರು.

ಸರಳ ದಸರಾನಾ? ಅದ್ಧೂರಿ ದಸರಾನಾ? ಸರ್ಕಾರದ ಈ ನಡೆ ವಿವಾದಕ್ಕೆ ಎಡೆ

ಈ ಸಂಬಂಧ ಕೋವಿಡ್‌-19 ರಾಜ್ಯ ಮಟ್ಟದ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ.ಸುದರ್ಶನ್‌ ನೇತೃತ್ವದ ತಂಡವು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ 200 ಮಂದಿಗೆ ಅವಕಾಶ, ಅರಮನೆಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 50 ಮಂದಿಗೆ ಅವಕಾಶ, ಅರಮನೆ ಮುಂದೆ 2 ಗಂಟೆ ಮಾತ್ರ ಕಾರ್ಯಕ್ರಮ ನಡೆಸಬೇಕು. ಹಾಗೆಯೇ ದೀಪಾಂಲಕಾರ ನಿತ್ಯ 2 ಗಂಟೆ ಮಾತ್ರ ಇರಬೇಕು. ಅ.14 ನಂತರ ಕೋವಿಡ್‌ ಟೆಸ್ಟ್‌ ಕಡ್ಡಾಯ. ಅಂತರ ರಾಜ್ಯ ಹಾಗೂ ವಿದೇಶಿ ಕಲಾವಿದರಿಗೆ ಈ ಬಾರಿ ದಸರಾದಲ್ಲಿ ಭಾಗಿಯಾಗಲು ಅವಕಾಶ ಇಲ್ಲ. ಮೈಸೂರು ಸೇರಿದಂತೆ ಇತರೆ ಜಿಲ್ಲೆ ಕಲಾವಿದರಿಗೆ ಮಾತ್ರ ಅವಕಾಶ. ಮಾಸ್ಕ್‌ ಕಡ್ಡಾಯ. 6 ಅಡಿ ಸಾಮಾಜಿಕ ಅಂತರ ಕಡ್ಡಾಯ ಪಾಲನೆಯಾಗಬೇಕು ಎಂದು ಸಮಿತಿಯು ವರದಿ ಸಲ್ಲಿಸಿದೆ.
 

Follow Us:
Download App:
  • android
  • ios