ತಲಕಾಡಿನ ಪಂಚಲಿಂಗೇಶ್ವರ ದರ್ಶನವು ಈ ವರ್ಷ ಪ್ರತಿ ವರ್ಷದಂತೆ ಇರುವುದಿಲ್ಲ.. ಹಾಗಾದರೆ ಹೇಗಿರಲಿದೆ ಈ ಬಾರಿ ದೇವರ ದರ್ಶನ
ಮೈಸೂರು (ನ.05): ಕೋವಿಡ್- 19ರ ಹಿನ್ನೆಲೆಯಲ್ಲಿ ದಸರಾ ಮಾಡಿದ ಹಾಗೆಯೇ ಡಿ.14ರಿಂದ ಆರಂಭವಾಗುವ ಜಿಲ್ಲೆಯ ತಿ.ನರಸೀಪುರದ ತಲಕಾಡು ಪಂಚಲಿಂಗ ದರ್ಶನ ಮಹೋತ್ಸವವನ್ನೂ ಸರಳವಾಗಿ ಮಾಡೋಣ. ವರ್ಚುವಲ್ ವ್ಯವಸ್ಥೆಯನ್ನು ಮಾಡುವುದು ಒಳ್ಳೆಯದು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಳಿಯೂ ಚರ್ಚಿಸಿದ್ದೇನೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಬುಧವಾರ ಹೇಳಿದರು.
'ಲಂಚ ಪಡೆದರೆ ನನ್ನ ವಂಶ ನಾಶವಾಗಲಿ' ದೇವರ ಮುಂದೆ ಪ್ರಮಾಣ ಮಾಡಿದ ಅಧಿಕಾರಿ ..
ಪಂಚಲಿಂಗ ದರ್ಶನ ಮಹೋತ್ಸವ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ತಜ್ಞರ ಸಮಿತಿಯೊಂದನ್ನು ರಚಿಸಬೇಕಿದೆ. ಈ ತಂಡ ತಲಕಾಡಿಗೆ ಭೇಟಿ ನೀಡಿ ವರದಿ ಕೊಡಲಿ. ಅವರ ವರದಿ ಆಧಾರದ ಮೇಲೆ ಆಚರಿಸೋಣ. ಜೊತೆಗೆ ಚಳಿಗಾಲ ಬರುತ್ತಿರುವುದರಿಂದ ಹೆಚ್ಚಿನ ನಿಗಾ ವಹಿಸುವುದು ಒಳ್ಳೆಯದು ಎಂದರು.
