ಹಠಾತ್ತಾಗಿ ಕುಸಿದ ಈರುಳ್ಳಿ ದರ: ಮುಗಿಬಿದ್ದ ಗ್ರಾಹಕರು

100 ಇದ್ದ ದರ 40​​-50ಕ್ಕೆ ಇಳಿ​ಕೆ| ಮುಂದಿನ ವಾರ ಈರುಳ್ಳಿ ದರ ಮತ್ತಷ್ಟೂ ಇಳಿಯುವ ಸಾಧ್ಯತೆ| ಹಾಗೂ ದಾಸ್ತಾನು ಇಟ್ಟ ಈರುಳ್ಳಿ ಮಾರುಕಟ್ಟೆಗೆ ಬಂದಿದೆ| ಈರುಳ್ಳಿ ದರ ಇಳಿಮುಖವಾಗಿರುವ ಬಗ್ಗೆ ಗ್ರಾಹಕರಲ್ಲಿ ಸಂತಸ| 

Onion Price Suddenly Decline in Karwar grg

ಕಾರವಾರ(ಡಿ.07): ಶತಕದ ಹೊಸ್ತಿಲಿನಲ್ಲಿ ಉಯ್ಯಾಲೆಯಾಡುತ್ತಿದ್ದ ಈರುಳ್ಳಿ ದರ ಹಠಾತ್ತಾಗಿ ಕುಸಿದಿದೆ. ಈಗ ಪ್ರತಿ ಕೆಜಿಗೆ 40-50ಗೆ ಇಳಿದಿದೆ. ನಗರದಲ್ಲಿ ಭಾನುವಾರದ ಸಂತೆಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಪ್ರತಿ ಕೆಜಿಗೆ 50ಗಳಾದರೆ ಎರಡನೇ ದರ್ಜೆಯ ಈರುಳ್ಳಿ 40ಗೆ ಮಾರಾಟವಾಗಿದೆ. ಈರುಳ್ಳಿ ದರದಲ್ಲಿ ಇನ್ನೂ ಇಳಿಮುಖವಾಗುವ ಸಾಧ್ಯತೆ ಇದೆ ಎಂದು ಮಾರಾಟಗಾರರು ಅಭಿಪ್ರಾಯಪಡುತ್ತಿದ್ದಾರೆ.

ಭಾರಿ ದರದಿಂದಾಗಿ ಈರುಳ್ಳಿ ಸಮೀಪ ಹೋಗದ ಗ್ರಾಹಕರು ಭಾನುವಾರ ಮುಗಿಬಿದ್ದು ಖರೀದಿಸಿದ್ದಾರೆ. ಉತ್ತರ ಕರ್ನಾಟಕದ ವಿವಿಧೆಡೆಯಿಂದ ವ್ಯಾಪಾರಸ್ಥರು ಈರುಳ್ಳಿಯನ್ನು ಭಾರಿ ಪ್ರಮಾಣದಲ್ಲಿ ಮಾರಾಟಕ್ಕೆ ತಂದಿದ್ದಾರೆ.
ಈರುಳ್ಳಿ ದರ ಇಳಿಮುಖವಾಗಿರುವ ಬಗ್ಗೆ ಗ್ರಾಹಕರು ಸಂತಸ ವ್ಯಕ್ತಪಡಿಸಿದ್ದಾರೆ. ಈರುಳ್ಳಿ ಖರೀದಿ ಜೋರಾಗಿಯೇ ನಡೆದಿದೆ.

ಖ್ಯಾತ ಯಕ್ಷಗಾನ ಕಲಾವಿದ ಕೃಷ್ಣ ಮಂಜಯ್ಯ ಶೆಟ್ಟಿ ಇನ್ನಿಲ್ಲ

ಕಳೆದ 15 ದಿನಗಳ ಹಿಂದೆ ಕಾರವಾರದಲ್ಲಿ ಪ್ರತಿ ಕೆಜಿ 60 ದರಲ್ಲಿ ಮಾರಾಟವಾಗುತ್ತಿತ್ತು. ತಿಂಗಳ ಹಿಂದೆ ಸುಮಾರು . 100 ದರ ಇತ್ತು. ಈಗ ಮಹಾರಾಷ್ಟ್ರದಿಂದ ಹೊಸದಾಗಿ ಬೆಳೆದ ಈರುಳ್ಳಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಹೊಸ ಈರುಳ್ಳಿ ಮಾರುಕಟ್ಟೆಗೆ ಬರುತ್ತಿದ್ದಂತೆ ದಾಸ್ತಾನು ಇಟ್ಟಈರುಳ್ಳಿಯನ್ನೂ ಮಾರುಕಟ್ಟೆಗೆ ಬಿಡಲಾಗುತ್ತಿದೆ. ಇದೆ ಕಾರಣಕ್ಕೆ ಬೆಲೆಯಲ್ಲಿ ವಾರದಿಂದ ವಾರಕ್ಕೆ ಇಳಿಕೆಯಾಗುತ್ತಿದೆ.

ಮುಂದಿನ ವಾರ ಈರುಳ್ಳಿ ದರ ಮತ್ತೂ ಸ್ವಲ್ಪ ಇಳಿಯುವ ಸಾಧ್ಯತೆ ಇದೆ. ಹೊಸ ಈರುಳ್ಳಿ ಹಾಗೂ ದಾಸ್ತಾನು ಇಟ್ಟ ಈರುಳ್ಳಿ ಮಾರುಕಟ್ಟೆಗೆ ಬಂದಿದೆ ಎಂದು ತರಕಾರಿ ಮಾರಾಟಗಾರ ಸಂಗಮೇಶ್‌ ಕಲ್ಯಾಣಿ ಹೇಳಿದ್ದಾರೆ. ಈರುಳ್ಳಿ ದರದಲ್ಲಿ ಭಾರಿ ಹೆಚ್ಚಳವಾಗಿದ್ದರಿಂದ ಕಳೆದ ತಿಂಗಳಿಗೂ ಹೆಚ್ಚು ಕಾಲ ಈರುಳ್ಳಿ ಸ್ವಲ್ಪ ಸ್ವಲ್ಪವೇ ಖರೀದಿಸುತ್ತಿದ್ದೆ. ಈಗ ಈರುಳ್ಳಿ ದರ ಕಡಿಮೆಯಾಗಿದೆ, ಕೊಂಡುಕೊಳ್ಳಬಹುದು ಎಂದು ಗ್ರಾಹಕ ಶಂಕರ ಗೌಡ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios