ಮಂಡ್ಯ ಪಾಲಿನ ಕರಾಳದಿನಕ್ಕಿಂದು ಒಂದುವರ್ಷ

ಕಳೆದ ವರ್ಷ ಇದೇ ದಿನ ಮಂಡ್ಯದ ಜನಕ್ಕೆ ಮೇಲಿಂದ ಮೇಲೆ ಶಾಕ್ ಆಗಿತ್ತು. ಜಿಲ್ಲೆಯೇ ಕಣ್ಣೀರಲ್ಲಿ ಕೈತೊಳೆದಿತ್ತು. ಕನ್ನಡ ಚಿತ್ರರಂಗದ ರೆಬೆಲ್ ಸ್ಟಾರ್ ಅಂಬರೀಶ್ ಅವರು ನಿಧನರಾಗಿದ್ದು ಇದೇ ದಿನ. ಇನ್ನು ಮಂಡ್ಯದಲ್ಲಿ ಬಸ್ ನಾಲೆಗುರುಳಿ 30 ಜನ ಜಲಸಮಾಧಿಯಾಗಿದ್ದರು. ಕಳೆದ ವರ್ಷ ಮಂಡ್ಯದ ಪಾಲಿಗೆ ಈ ದಿನ ಅತ್ಯಂತ ಕರಾಳವಾಗಿತ್ತು.

one year for kanaganamaradi accident kannada actor ambareesh death mandya blackday

ಮಂಡ್ಯ(ನ.24): ಕಳೆದ ವರ್ಷ ಇದೇ ದಿನ ಮಂಡ್ಯದ ಜನಕ್ಕೆ ಮೇಲಿಂದ ಮೇಲೆ ಶಾಕ್ ಆಗಿತ್ತು. ಜಿಲ್ಲೆಯೇ ಕಣ್ಣೀರಲ್ಲಿ ಕೈತೊಳೆದಿತ್ತು. ಕನ್ನಡ ಚಿತ್ರರಂಗದ ರೆಬೆಲ್ ಸ್ಟಾರ್ ಅಂಬರೀಶ್ ಅವರು ನಿಧನರಾಗಿದ್ದು ಇದೇ ದಿನ. ಇನ್ನು ಮಂಡ್ಯದಲ್ಲಿ ಬಸ್ ನಾಲೆಗುರುಳಿ 30 ಜನ ಜಲಸಮಾಧಿಯಾಗಿದ್ದರು. ಕಳೆದ ವರ್ಷ ಮಂಡ್ಯದ ಪಾಲಿಗೆ ಈ ದಿನ ಅತ್ಯಂತ ಕರಾಳವಾಗಿತ್ತು.

ಮಂಡ್ಯ ಪಾಲಿನ ಕರಾಳದಿನಕ್ಕಿಂದು ಒಂದುವರ್ಷವಾಗಿದ್ದು, ಅಂದು ಜನ ಅನುಭವಿಸಿದ ನೋವು ಇನ್ನೂ ಮಾಸಿಲ್ಲ. ಕಹಿ ನೆನೆಪು ಜನರ ಮನದಲ್ಲಿ ಉಳಿದಿದ್ದು, ಕಳೆದುಕೊಂಡಿರುವುದರ ನೋವು ಮಾತ್ರ ಕಡಿಮೆಯಾಗಿಲ್ಲ.

ಅಮರನಾದ ಅಮರನಾಥ್: ಜೀವನ ಮೆಲಕು.

ಕಳೆದ ವರ್ಷ ಇದೇ ದಿನ ಮಂಡ್ಯ ಜಿಲ್ಲೆ ಎರಡು ಅಪಘಾತಗಳನ್ನ ಎದುರಿಸಿತ್ತು. ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದಲ್ಲಿ ಬಸ್ ನಾಲೆಗೆ ಉರುಳಿ 30ಜನ ಜಲಸಮಾಧಿಯಾಗಿದ್ದರು. ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಶ್ ಇಹಲೋಕ ತ್ಯಜಿಸಿದ್ರು. ಬರಸಿಡಿಲಿನಂತೆ ಎರಗಿದ ಈ ಎರಡು ಅಘಾತಗಳು ಜಿಲ್ಲೆಯ ಜನರನ್ನು ನೋವಲ್ಲಿ ಮುಳುಗಿಸಿತ್ತು.

ಮಂಡ್ಯದಲ್ಲಿ ಭೀಕರ ಬಸ್ ಅಪಘಾತ: 20 ಸಾವು!

ಬಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರ ಆಕ್ರಂದನ ಒಂದು ಕಡೆಯಾದರೆ, ಪ್ರೀತಿಯ ಅಂಬರೀಶ್ ಅಣ್ಣನ ಕಳೆದುಕೊಂಡ ದುಃಖದಿಂದ ಜಿಲ್ಲೆಯ ಜನ ಶೋಕಸಾಗರದಲ್ಲಿ ಮುಳುಗಿದ್ದರು. ಎರಡು ಘಟನೆ ನಡೆದ ಈ ದಿನ ನ.24ನೇ ತಾರೀಕು ಮಂಡ್ಯ ಪಾಲಿನ ಕರಾಳ ದಿನವಾಗಿತ್ತು. ಇಂದಿಗೂ ನ.24 ರ ಘಟನೆಗಳು ನೆನಪಿಸಿದರೆ ಮಂಡ್ಯದ ಜನರಿಗೆ ಇದು ಕರಾಳ ದಿನವಾಗಿದೆ.

ಅಂಬಿ ಸಾವಿನ ದೈವ ರಹಸ್ಯ!

Latest Videos
Follow Us:
Download App:
  • android
  • ios