ಬಡವರಿಗೆ ಸಂತಸದ ಸುದ್ದಿ ನೀಡಿದ ಸಚಿವ ಸೋಮಣ್ಣ
1 ಲಕ್ಷ ಮನೆ ನಿರ್ಮಾಣ| ಕೇಂದ್ರ ಸರ್ಕಾರದಿಂದ 1500 ಕೋಟಿಗೆ ಅನುಮೋದನೆ| ಮೊದಲ ಕಂತಿನಲ್ಲಿ ನೀಡಿರುವ 600 ಕೋಟಿ ರೂ. ರಾಜೀವ್ ಗಾಂಧಿ ವಸತಿ ನಿಗಮಕ್ಕೆ ನೀಡಲಾಗಿದೆ. ಈ ಯೋಜನೆಗೆ ಕಂದಾಯ ಇಲಾಖೆ 1014 ಎಕರೆ ಸರ್ಕಾರಿ ಭೂಮಿಯನ್ನು ಉಚಿತವಾಗಿ ನೀಡಿದೆ: ಸಚಿವ ವಿ.ಸೋಮಣ್ಣ|
ಬೆಂಗಳೂರು(ಮಾ.25): ಬಡವರಿಗೆ ಸೂರು ಕೊಡುವ ಉದ್ದೇಶದಿಂದ ಬೆಂಗಳೂರು ನಗರ ಜಿಲ್ಲೆಯಲ್ಲಿ ಒಂದು ಲಕ್ಷ ಮನೆ ನಿರ್ಮಾಣ ಯೋಜನೆಯಡಿ 46,499 ಮನೆಗಳನ್ನು ನೆಲಮಹಡಿ ಹಾಗೂ 14 ಅಂತಸ್ತು (ಜಿ-14) ಉಳಿದ 53 ಸಾವಿರ ಮನೆಗಳನ್ನು ನೆಲಮಹಡಿ ಹಾಗೂ ಮೂರು ಅಂತಸ್ತಿನ (ಜಿ-3) ಸ್ವರೂಪದಲ್ಲಿ ನಿರ್ಮಿಸಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯ ಪಿ.ಆರ್.ರಮೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಒಂದು ಲಕ್ಷ ಮನೆ ನಿರ್ಮಿಸುವ ಯೋಜನೆಗೆ ‘ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಅಡಿ ಕೇಂದ್ರ ಸರ್ಕಾರ ಪ್ರತಿ ಮನೆಗೆ ತನ್ನ ಪಾಲಿನ ಮೊತ್ತವಾದ 1.50 ಲಕ್ಷದಂತೆ 1500 ಕೋಟಿಗೆ ಅನುಮೋದನೆ ನೀಡಿದ್ದು, ಮೊದಲ ಕಂತಿನಲ್ಲಿ ನೀಡಿರುವ 600 ಕೋಟಿಗಳನ್ನು ರಾಜೀವ್ ಗಾಂಧಿ ವಸತಿ ನಿಗಮಕ್ಕೆ ನೀಡಲಾಗಿದೆ. ಈ ಯೋಜನೆಗೆ ಕಂದಾಯ ಇಲಾಖೆ 1014 ಎಕರೆ ಸರ್ಕಾರಿ ಭೂಮಿಯನ್ನು ಉಚಿತವಾಗಿ ನೀಡಿದೆ ಎಂದು ತಿಳಿಸಿದರು.
ಮನೆ ನಿರ್ಮಿಸುವ ಬಡವರಿಗೆ ಇಲ್ಲಿದೆ ಗುಡ್ ನ್ಯೂಸ್
ಈ ಮನೆಗಳಲ್ಲಿ ವಾಸಿಸುವ ಜನರಿಗೆ ವಾಹನಗಳ ನಿಲುಗಡೆ ಸ್ಥಳ, ಉದ್ಯಾನ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಜೊತೆಗೆ ಈ ಮನೆಗಳ ನಿರ್ವಹಣೆಯನ್ನು ಐದು ವರ್ಷಗಳ ಕಾಲ ಸರ್ಕಾರವೇ ಮಾಡಲಿದೆ ಎಂದು ಸಚಿವರು ವಿವರಿಸಿದರು.