ಬೆಂಗಳೂರು (ನ.15):  ಕೋವಿಡ್ - 19 ಹಾಗೂ ಹಸಿರು ಪಟಾಕಿಗೆ ಮಾತ್ರ ಅವಕಾಶ ಹಿನ್ನೆಲೆ ಮಿಂಟೋ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆ ಇಳಿಕೆಯಾಗಿದೆ.

ಪಟಾಕಿ ಗಾಯದ ಸಮಸ್ಯೆಯಿಂದ ದಾಖಲಾಗುವವರ ಸಂಖ್ಯೆ ಇಳಿಕೆಯಾಗಿದೆ.  ಕಳೆದ 48 ಗಂಟೆಯಲ್ಲಿ ಕೇವಲ ಒಂದು ಪ್ರಕರಣ ಮಾತ್ರ ದಾಖಲಾಗಿದೆ.  ನಿನ್ನೆ ಪಟಾಕಿ ಸಿಡಿದು ಬಾಲಕನ ಕಣ್ಣಿಗೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.  ಹೂವಿನ ಕುಂಡ ಸಿಡಿದು ಮುಖ ಸುಟ್ಟು ಕಣ್ಣಿಗೆ ಗಾಯವಾಗಿತ್ತು.  ರಸ್ತೆಯಲ್ಲಿ ನಿಂತು ಪಟಾಕಿ‌ ಸಿಡಿಸುವಾಗ ನೋಡುತ್ತಿದ್ದಾಗ ಸಂಭವಿಸಿದ ಪಟಾಕಿ ಸಿಡಿದು ಬಾಲಕನ ಕಣ್ಣಿಗೆ ಗಾಯವಾಗಿತ್ತು.

ಮಿಂಟೋ ಕಣ್ಣಿನ ಆಸ್ಪತ್ರೆಗೆ  ದಾಖಲಾದ ಮೊದಲ ಕೇಸ್ ಇದಾಗಿದೆ. ಇದುವರೆಗೂ ಮತ್ಯಾವ ಕೇಸ್ ದಾಖಲಾಗಿಲ್ಲ ಎಂದು ಮಿಂಟೋ ಆಸ್ಪತ್ರೆ ಡಾ. ವಿದ್ಯಾ ದೇವಿ ಹೇಳಿದ್ದಾರೆ.

ಪಟಾಕಿ ಸಿಡಿಸಿದರೆ ಬೀಳುತ್ತೆ 2000 ದಂಡ : ಎಚ್ಚರ
 
ಕಳೆದ ಬಾರಿಗೆ ಹೋಲಿಸಿಕೊಂಡರೆ ಈ ಬಾರಿ ಪಟಾಕಿ ಗಾಯದ ಕೇಸ್ ಗಳು ಕಡಿಮೆಯಾಗಿದೆ. ಈಗ ದಾಖಲಾಗಿರುವ ಬಾಲಕನಿಗೆ ಗಂಭೀರ ಸ್ವರೂಪದ ಗಾಯಗಳಾಗಿಲ್ಲ.  ಮುಖ ಮಾತ್ರ ಸುಟ್ಟಿದ್ದು ಕಣ್ಣಿಗೆ ಹಾನಿಯಾಗಿಲ್ಲ ಎಂದು ವೈದ್ಯರು ಹೇಳಿದರು.