ಜೈಪುರ (ನ.15): ರಾಜಸ್ಥಾನ ಸರ್ಕಾರ ದೀಪಾವಳಿಯಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಿದ್ದು, ನಿಯಮ ಉಲ್ಲಂಘಿಸಿ ಪಟಾಕಿಗಳ ಮಾರಾಟ ಮತ್ತು ಬಳಕೆ ಕಂಡುಬಂದರೆ ದಂಡ ವಿಧಿಸಲಾಗುವುದು ಎಂದು ಶನಿವಾರ ಎಚ್ಚರಿಸಿದೆ.

 ಅಂಗಡಿ ಮುಂಗಟ್ಟುಗಳಲ್ಲಿ ಪಟಾಕಿಗಳಿರುವುದು ಪತ್ತೆಯಾದರೆ ಮಾಲೀಕರಿಗೆ 10,000 ರು. ದಂಡ ಮತ್ತು ಪಟಾಕಿ ಸಿಡಿಸುವವರಿಗೆ 2000 ರು. ದಂಡ ವಿಧಿಸಲಾಗುವುದು ಎಂದು ರಾಜಸ್ಥಾನ ಸರ್ಕಾರ ಶನಿವಾರ ಘೋಷಿಸಿದೆ.

 ಕೊರೋನಾ ರೋಗಿಗಳ ಹಿತದೃಷ್ಟಿಯಿಂದ ಮತ್ತು ಮಾಲಿನ್ಯ ಕಡಿಮೆ ಮಾಡುವ ಉದ್ದೇಶದಿಂದ ರಾಜಸ್ಥಾನ, ಮಹಾರಾಷ್ಟ್ರ, ದೆಹಲಿ, ಚಂಡೀಗಢ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಸಿಕ್ಕಿಂ ರಾಜ್ಯಗಳು ಈ ಬಾರಿ ಪಟಾಕಿ ಬಳಕೆಯನ್ನು ಸಂಪೂರ್ಣ ನಿಷೇಧಿಸಿವೆ.

ಈ ಸಲ ಪಟಾಕಿ ಖರೀದಿಗೆ ರಾಜ್ಯದ ಜನರ ನಿರಾಸಕ್ತಿ : ಬರೋಬ್ಬರಿ ಕುಸಿತ ..

ಕರ್ನಾಟಕ, ಆಂಧ್ರಪ್ರದೇಶ, ಉತ್ತರ ಪ್ರದೇಶ, ಹರಾರ‍ಯಣ, ಛತ್ತೀಸ್‌ಗಢ, ಜಾರ್ಖಂಡ್‌, ಉತ್ತರಾಖಂಡ, ಗುಜರಾತ್‌ ಮತ್ತು ಅಸ್ಸಾಂ ರಾಜ್ಯಗಳು ಭಾಗಶಃ ನಿರ್ಬಂಧ ವಿಧಿಸಿವೆ.