ಹಂದಿ ಉಪಟಳ ಕಡಿವಾಣಕ್ಕೆ ಹಳೆ ಸೀರೇಗಳೇ ಮದ್ದು!

ಮಲೆನಾಡು, ಅರೆಮಲೆನಾಡಿನ ಕೃಷಿಕರಿಗೆ ಕಾಡುಪ್ರಾಣಿ ಕಾಟವೇ ಹೆಚ್ಚಿದೆ. ಅದರಲ್ಲಿಯೂ ಹಂದಿಗಳ ಕಾಟ ಇದ್ದರೆ ರೈತರು ಬೆಳೆ ಬೆಳೆಯುವುದೇ ಕಷ್ಟ. ಈ ಹಂದಿ ಕಾಟಕ್ಕೆ ಬನವಾಸಿ ಸಮೀಪದ ರೈತ ಹನಮಂತಪ್ಪ ಮಡ್ಲೂರು ಹೊಸ ಪ್ರಯೋಗ ನಡೆಸಿ ಯಶಸ್ವಿಯಾಗಿದ್ದಾರೆ.

Old sarees are the cure for swine control at uttarakannada rav

ಶಿರಸಿ (ಡಿ.21) : ಮಲೆನಾಡು, ಅರೆಮಲೆನಾಡಿನ ಕೃಷಿಕರಿಗೆ ಕಾಡುಪ್ರಾಣಿ ಕಾಟವೇ ಹೆಚ್ಚಿದೆ. ಅದರಲ್ಲಿಯೂ ಹಂದಿಗಳ ಕಾಟ ಇದ್ದರೆ ರೈತರು ಬೆಳೆ ಬೆಳೆಯುವುದೇ ಕಷ್ಟ. ಈ ಹಂದಿ ಕಾಟಕ್ಕೆ ಬನವಾಸಿ ಸಮೀಪದ ರೈತ ಹನಮಂತಪ್ಪ ಮಡ್ಲೂರು ಹೊಸ ಪ್ರಯೋಗ ನಡೆಸಿ ಯಶಸ್ವಿಯಾಗಿದ್ದಾರೆ.

ಹಳೆ ಸೀರೆಗಳನ್ನು ಕೃಷಿ ಕ್ಷೇತ್ರಕ್ಕೆ ತಡೆಗೋಡೆಯಾಗಿ ನಿರ್ಮಿಸಿದ್ದಾರೆ. ಇದರಿಂದಾಗಿ ಹಂದಿಗಳು ಕೃಷಿ ಭೂಮಿಯೆಡೆಗೆ ಬರುತ್ತಿಲ್ಲ. ಬಣ್ಣ ಬಣ್ಣದ ಸೀರೆಗಳನ್ನು ಕಂಡು ಹಂದಿಗಳು ಹೆದರುತ್ತಿವೆ ಎನ್ನುತ್ತಾರೆ ಹನುಮಂತಪ್ಪ.

ಹಂದಿ ಹಾವಳಿಯಿಂದ ಬೆಳೆನಾಶ; ಹಂದಿಗಳನ್ನು ನಿಯಂತ್ರಿಸಿ, ಇಲ್ಲ ವಿಷ ಕೊಡಿ ಎಂದು ರೈತರ ಆಕ್ರೋಶ

ಹಂದಿಗಳು ಬೆಳೆಯನ್ನು ತಿನ್ನುವುದಕ್ಕಿಂತ ಹಾಳು ಮಾಡುವುದೇ ಜಾಸ್ತಿ. ಭತ್ತದ ಕ್ಷೇತ್ರ ಕಂಡರಂತೂ ಅವು ಓಡಾಡಿ ಕಟಾವು ಸಾಧ್ಯವಾಗದ ಸ್ಥಿತಿ ನಿರ್ಮಿಸುತ್ತವೆ. ಮುಳ್ಳಿನ ಬೇಲಿ, ಕಟ್ಟಿಗೆಯ ಬೇಲಿ, ವಿದ್ಯುತ್‌ ತಂತಿ ಬೇಲಿಯನ್ನು ಸಹ ಹಲವರು ಹಾಕಿ ನೋಡಿದ್ದಾರೆ. ಆದರೆ ಸೀರೆಯ ಬೇಲಿ ಎಲ್ಲಕ್ಕಿಂತ ಉತ್ತಮ ಎಂಬುದು ಮಡ್ಲೂರು ಅವರ ಅಭಿಪ್ರಾಯ.

ಹನುಮಂತಪ್ಪ ಮಡ್ಲೂರು ಕೃಷಿಯ ಹೊಸ ಸಾಧ್ಯತೆ ಶೋಧದಲ್ಲಿ ಎತ್ತಿದ ಕೈ. ಹಾವೇರಿ ಜಿಲ್ಲೆಯ ಮಡ್ಲೂರಿನವರಾದ ಅವರು ಕೂಲಿ ಕೆಲಸಕ್ಕಾಗಿ ಬನವಾಸಿಗೆ ಆಗಮಿಸಿದವರು. ಇಲ್ಲಿಯ ಕೃಷಿ, ಕೃಷಿ ಸಾಧ್ಯತೆಯ ಹೊಸ ಉತ್ಸಾಹದೊಂದಿಗೆ ಯಡಿಯೂರಬೈಲಿನಲ್ಲಿ ಮೂರು ಎಕರೆ ಒಣ ಭೂಮಿ ಖರೀದಿಸಿ ಕೃಷಿ ಆರಂಭಿಸಿ ಸಾಧನೆಯ ಒಂದೊಂದೇ ಮೆಟ್ಟಿಲೇರಿದರು. ಮೂರು ಎಕರೆ ಭೂಮಿಯಲ್ಲೇ 50ಕ್ಕೂ ಅಧಿಕ ಬೆಳೆ, ವ್ಯವಸ್ಥಿತ ನೀರು ನಿರ್ವಹಣೆ ಮೂಲಕ ರಾಜ್ಯಕ್ಕೇ ಮಾದರಿಯಾಗಿದ್ದಾರೆ.

ಕಾಡು ಹಂದಿ ದಾಳಿ: ಅಡಕೆ ಬೆಳೆ ಹಾನಿ

ಮುಂಡಗೋಡ: ಕಾಡು ಹಂದಿಗಳು ದಾಳಿ ನಡೆಸಿ ಅಡಕೆ ತೋಟದ ಬೆಳೆ ಹಾನಿ ಮಾಡಿದ ಘಟನೆ ತಾಲೂಕಿನ ಸನವಳ್ಳಿ ಗ್ರಾಮದಲ್ಲಿ ನಡೆದಿದೆ. ಸ್ಥಳೀಯ ಭೀಮಣ್ಣ ಭರಮಣ್ಣನವರ ಎಂಬ ರೈತರಿಗೆ ಸೇರಿದ 2 ಎಕರೆ ಪ್ರದೇಶದಲ್ಲಿ ಬೆಳೆಯಲಾದ 150 ಅಡಿಕೆ ಗಿಡಗಳನ್ನು ನಾಶ ಮಾಡಿದ್ದು, ಲಕ್ಷಾಂತರ ರುಪಾಯಿ ಹಾನಿ ಸಂಭವಿಸಿದೆ. ಸ್ಥಳಕ್ಕೆ ಧಾವಿಸಿದ ಮುಂಡಗೋಡ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿದ್ದಾರೆ.

ನಿರಂತರ ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ ಹಾನಿಯಾಗುತ್ತಿದ್ದು, ರೈತರು ಸಂಕಷ್ಟಎದುರಿಸುತ್ತಲೇ ಇದ್ದಾರೆ. ಆದರೂ ಸಂಬಂಧಿಸಿದವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿಲ್ಲ. ತಕ್ಷಣ ಅರಣ್ಯ ಇಲಾಖೆಯವರು ಇದನ್ನು ಗಂಭೀರವಾಗಿ ಪರಿಗಣಿಸಿ ಕಾಡು ಪ್ರಾಣಿಗಳ ಹಾವಳಿಯನ್ನು ತಡೆಯಲು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ರೈತ ಮುಖಂಡ ರಾಜು ಗುಬ್ಬಕ್ಕನವರ ಆಗ್ರಹಿಸಿದ್ದಾರೆ.

ಹಂದಿ ಬೇಟೆಯಾಡಲು ಅವಕಾಶಕ್ಕೆ ದಿನೇಶ್‌ ಗೂಳಿಗೌಡ ಸಿಎಂಗೆ ಮನವಿ

Latest Videos
Follow Us:
Download App:
  • android
  • ios